लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಂಚೋಳಿ ಪಟ್ಟಣದ ಪುರಸಭೆಯ 9ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಜರುಗಿತು

1 min read
Featured Video Play Icon
  1. ಸ್ಥಳ:- ಚಿಂಚೋಳಿ ವರದಿ:- ಶಿವಕುಮಾರ್ ತಳವಾರ ಕಲಬುರಗಿ ಜಿಲ್ಲೆ ಚಿಂಚೋಳಿ ತಾ.ವರದಿಗಾರರು ಕೇಸರಿ ಪಾಲಾದ ಪುರಸಭೆ ಅಧ್ಯಕ್ಷ ಗದ್ದುಗೆ ಚಿಂಚೋಳಿ ಪಟ್ಟಣದ ಪುರಸಭೆಯ 9ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಜರುಗಿತು. ಬಿಜೆಪಿಯ ಜಗದೇವಿ ಗಡಂತಿ, ಕಾಂಗ್ರೇಸ ನ ಸೈಯದ ಶಬ್ಬೀರ ಅವಿರೋಧವಾಗಿ ಆಯ್ಕೆಗೊಂಡರು ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು. ಶಾಸಕರ ನೇತೃತ್ವದಲ್ಲಿ ವಿಜಯೋತ್ಸವ ನೂತನ ಅಧ್ಯಕ್ಷರಾಗಿ ಜಗದೇವಿ ಗಡಂತಿ ಆಯ್ಕೆಗೊಳ್ಳುತ್ತಿದ್ದಂತೆ ಶಾಸಕ ಡಾ. ಅವಿನಾಶ ಜಾಧವ ನೇತೃತ್ವದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರೆ. ಕಾಂಗ್ರೇಸನ್ ಸೈಯದ ಶಬ್ಬೀರ ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳತ್ತಿದ್ದಂತೆ ಜಿ.ಪಂ ಸದಸ್ಯ ಗೌತಮ ಪಾಟೀಲ ನೇತೃತ್ವದಲ್ಲಿ ಕಾಂಗ್ರೇಸ್ ಕಾರ್ಯಲಯದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. : ಈ ವೇಳೆ ಬಿಜೆಪಿಯ ಪ್ರಮುಖರಾದ ಸಂತೋಷ ಗಡಂತಿ, ಜಗದೀಶಸಿಂಗ ಠಾಕೂರ, ಶಾಂತರೇಡ್ಡಿ, ಸತೀಶರೆಡ್ಡಿ, ಶ್ರೀಮಂತ ಕಟ್ಟಿಮನಿ, ಲಕ್ಷ್ಮಣ ಆವಂಟಿ, ರೇವಪ್ಪ ಉಪ್ಪಿನ, ರಮೇಶ ಪಡಶೇಟ್ಟಿ, ಶಿವಕುಮಾರ ಕೊಡದೂರ, ಶೇಖರ ಪಾಟೀಲ, ಮಲ್ಲಿಕಾರ್ಜುನ ಮರಗುತ್ತಿ, ಭವಾನಿಸಿಂಗ ಠಾಕೂರ, ಶಿವಕುಮಾರ ಪೊಚಾಲಿ, ಭೀಮಶೇಟ್ಟಿ ಮುರುಡಾ ಅನೇಕರು ಇದ್ದರು.  ಕಾಂಗ್ರೇಸ ಮುಖಂಡರಾದ ಭೀಮರಾವ ತೇಗಲತಿಪ್ಪಿ, ಗೋಪಾಲರಾವ ಕಟ್ಟಿಮನಿ, ದೀಪಕನಾಗ ಪುಣ್ಯಶೇಟ್ಟಿ, ಚಿಂತನ ರಾಠೋಡ, ಪ್ರವೀಣ ತೇಗಲತಿಪ್ಪಿ, ಜಗನ್ನಾಥ ಕಟ್ಟಿಮನಿ, ಅಮರ ಲೊಡ್ಡನೂರ್, ಸಂತೋಷ ಗುತ್ತೆದಾರ, ನಾಗೇಶ ಗುಣಾಜಿ ಅನೇಕರು ಇದ್ದರು.

About Author

You may have missed