ಕೊಪ್ಪದ ಜನನಾಯಕನಿಗೆ ಯಾದಗಿರಿಯಲ್ಲಿ ಸನ್ಮಾನ* *ಹೆಚ್. ನರಸಿಂಹಯ್ಯ ಪಶಸ್ತಿ’ಗೆ ಭಾಜನರಾದ ಕುಕ್ಕುಡಿಗೆ ರವೀಂದ್ರ*…
1 min read
*ಕೊಪ್ಪದ ಜನನಾಯಕನಿಗೆ ಯಾದಗಿರಿಯಲ್ಲಿ ಸನ್ಮಾನ*
*ಹೆಚ್. ನರಸಿಂಹಯ್ಯ ಪಶಸ್ತಿ’ಗೆ ಭಾಜನರಾದ ಕುಕ್ಕುಡಿಗೆ ರವೀಂದ್ರ*
*ಕೊಪ್ಪ ತಾಲ್ಲೂಕಿನ ಪಭಾವಿ ರಾಜಕೀಯ ಮುಖಂಡ, ಸಹಕಾರ ಕ್ಷೇತದ ಧುರೀಣ, ಕೆ.ಎಸ್. ರವೀಂದ ಕುಕ್ಕುಡಿಗೆ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು 2025ನೇ ಸಾಲಿನಲ್ಲಿ ಸಮಾಜ ಸೇವಾ ಕ್ಷೇತಕ್ಕೆ ನೀಡಲಾಗುವ ರಾಜ್ಯಮಟ್ಟದ ‘ಡಾ. ಹೆಚ್. ನರಸಿಂಹಯ್ಯ ಪಶಸ್ತಿ’ಯನ್ನು ನೀಡಿ ಗೌರವಿಸಿದೆ*.
*ಇದೇ ಡಿಸೆಂಬರ್ 28,29 ಮತ್ತು 30 ರಂದು ಕರ್ನಾಟಕದ ಗಡಿಜಿಲ್ಲೆ ಯಾದಗಿರಿಯ ಜಿಲ್ಲಾ ಕೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ವೈಜ್ಞಾನಿಕ ಸಂಶೋಧನಾ ಪರಿಷತ್ ಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರು ಕುಕ್ಕುಡಿಗೆ ರವೀಂದ್ರಅವರಿಗೆ ಪಶಸ್ತಿ ಪ್ರಧಾನ ಮಾಡಿದರು. ಶೃಂಗೇರಿ ಕ್ಷೇತ ಹಾಗೂ ಚಿಕ್ಕಮಗಳೂರು ಜಿಲ್ಲಾ ಮಟ್ಟದಲ್ಲಿ ಪಭಾವಿ ನಾಯಕರಾಗಿ ಗುರುತಿಸಿಕೊಂಡು, ತಮಗೆ ಸಿಕ್ಕ ಅಧಿಕಾರವನ್ನು ಸಮಾಜದ ಅಭಿವೃದ್ಧಿಗೆ ಬಳಸುವ ಮೂಲಕ ಜನ ಸಾಮಾನ್ಯರ ಅಕ್ಕರೆಯ ನಾಯಕರಾಗಿರುವ ಕುಕ್ಕುಡಿಗೆ ರವೀಂದ ಅವರಿಗೆ ಸಿಕ್ಕಿರುವ ಈ ಪಶಸ್ತಿ ಅರ್ಹತೆಗೆ ಸಂದ ಯೋಗ್ಯ ಗೌರವವಾಗಿದೆ*.
*ರಾಷ್ಟಕವಿ. ಕುವೆಂಪು ಅವರ ವಿಚಾರಧಾರೆಗಳು ಮತ್ತು ಶಿಕ್ಷಣ ತಜ್ಞ ಡಾ. ಹೆಚ್. ನರಸಿಂಹಯ್ಯ ನವರ ವೈಜ್ಞಾನಿಕ ಚಿಂತನೆಗಳಿಂದ ಪಭಾವಿತರಾಗಿ ಮೂಢನಂಬಿಕೆ ಯಂತಹ ಸಾಮಾಜಿಕ ಪಿಡುಗನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಪವಾಡ ರಹಸ್ಯ ಬಯಲು ಕಾರ್ಯಕಮಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಡಾ ಹುಲಿಕಲ್ ನಟರಾಜ್ ಅವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಪತೀ ವರ್ಷ ಕುವೆಂಪು ಜನ್ಮದಿನವಾದ ‘ವೈಚಾರಿಕ ದಿನ’ವನ್ನು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನವಾಗಿ ಆಚರಿಸುತ್ತಿದ್ದು ಪ್ರತೀ ಜಿಲ್ಲೆಯಿಂದ ಒಬ್ಬರಂತೆ ರಾಜ್ಯದ 30 ಮಂದಿ ಪಗತಿಪರ ಚಿಂತಕರಿಗೆ, ಸಮಾಜ ಸೇವಕರಿಗೆ ರಾಜ್ಯಮಟ್ಟದ* *‘ಹೆಚ್.ನರಸಿಂಹಯ್ಯ’ ಪಶಸ್ತಿ ನೀಡಿ ಗೌರವಿಸುತ್ತ ಬರುತ್ತಿದ್ದಾರೆ*.
*ಚಿಕ್ಕಮಗಳೂರು ಜಿಲ್ಲೆಯಿಂದ 2022 ರಲ್ಲಿ ನ.ರಾ.ಪುರ ತಾಲ್ಲೂಕು*, *ಮಡಬೂರಿನ ಹಿರಿಯ ಪಗತಿಪರ ಚಿಂತಕ, ರಾಜಕೀಯ ಮುತ್ಸದ್ಧಿ ಹೆಚ್.ಟಿ. ರಾಜೇಂದ ಅವರಿಗೆ, 2023 ರಲ್ಲಿ ಶೃಂಗೇರಿ ತಾಲ್ಲೂಕಿನ ಪಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಕಲ್ಗುಳಿ ವಿಠಲ ಹೆಗ್ಡೆ ಅವರಿಗೆ ಹಾಗೂ 2024 ರಲ್ಲಿ ಕಡೂರು ತಾಲ್ಲೂಕಿನ, ಯಗಟಿಯ ಮಾಜಿ ಶಾಸಕ, ಪಗತಿಪರ ಚಿಂತನೆಯ ರಾಜಕೀಯ ಮುತ್ಸದ್ಧಿ ವೈ.ಎಸ್.ವಿ. ದತ್ತ ಅವರಿಗೆ ರಾಜ್ಯಮಟ್ಟದ ‘ಹೆಚ್.ನರಸಿಂಹಯ್ಯ’ ಪಶಸ್ತಿ ನೀಡಿ ಗೌರವಿಸಲಾಗಿತ್ತು*.
*ಜನಸಾಮಾನ್ಯರ ನಾಯಕ*
*ಕೆ.ಎಸ್. ರವೀಂದ್ರ ಕುಕ್ಕುಡಿಗೆ ಕೊಪ್ಪ ತಾಲ್ಲೂಕು ಹೇರೂರು ಗಾಮದ ಪ್ರಸಿದ್ಧ ಕಾಫಿ ಬೆಳೆಗಾರರಾದ ಕುಕ್ಕುಡಿಗೆ* *ಸುಬ್ಬೇಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಪುತರಾಗಿ ದಿನಾಂಕ 11-೦6-1960 ರಂದು ಜನಿಸಿದ ಕೆ.ಎಸ್. ರವೀಂದ್ರಅವರು ಬಾಲ್ಯದಿಂದಲೇ ಬಡವರ, ಕೂಲಿ ಕಾರ್ಮಿಕರ ಬಗ್ಗೆ ಸಹಾನುಭೂತಿ ಬೆಳೆಸಿಕೊಂಡಿದ್ದವರು. 1984 ರಲ್ಲಿ ತಮ್ಮ 19 ನೇ ವಯಸ್ಸಿನಲ್ಲೇ. ಮಲೆನಾಡ ಗಾಂಧಿ’ ಗೋವಿಂದೇಗೌಡರ ಮಾರ್ಗದರ್ಶನದಲ್ಲಿ ರಾಜಕೀಯ ರಂಗ ಪ್ರವೇಶಿಸಿ, ಮೊದಲ ಪ್ರಯತ್ನದಲ್ಲೇ ಹಿರೇಗದ್ದೆ ಮತ್ತು ಹೇರೂರು ಪಂಚಾಯಿತಿ. ಒಳಗೊಂಡ ಹೇರೂರು ಮಂಡಲ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಚಂಡ ಬಹುಮತದಿಂದ ಗೆದ್ದು, ಮಂಡಲ ಪ್ರಧಾನರಾಗಿ ಆಯ್ಕೆಯಾದರು*
*ಸಣ್ಣ ವಯಸ್ಸಿನಲ್ಲಿ ದೊರೆತ ದೊಡ್ಡ ಹುದ್ದೆಯನ್ನು ಜವಾಬ್ದಾರಿಯಿಂದ ನಿಭಾಯಿಸಿದ ಅವರು, ಜನಪರ ಕಾರ್ಯಕ್ರಮಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಪ್ಪದ ಹೆಸರುವಾಸಿ ಭೂ ಮಾಲೀಕರೊಬ್ಬರ ವಶದಲ್ಲಿದ್ದ ಸರ್ಕಾರಿ ಭೂಮಿಯನ್ನು ಬಿಡಿಸಿಕೊಂಡು ವಸತಿ ರಹಿತ ಬಡವರಿಗೆ ಹಂಚಿದ ಕ್ರಾಂತಿಕಾರಿ ಸಾಧನೆಗಾಗಿ ಆ ಬಡಾವಣೆಗೆ ‘ರವಿನಗರ’ ಎಂದು ಇವರ ಹೆಸರನ್ನೇ ಇಡಲಾಗಿದ್ದು, ಗ್ರಾಮಸ್ಥರ ಪಾಲಿಗೆ ಪ್ರೀತಿಯ ‘ರವಿಯಣ್ಣ’ನಾಗಿ ಜನಮನ್ನಣೆಗೆ ಪಾತ್ರರಾದರು.*
*ಈ ಜನಪ್ರಿಯತೆ ತಾಲ್ಲೂಕಿನಾದ್ಯಂತ ವಿಸ್ತರಿಸಿ, 1995 ರಲ್ಲಿ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಜಯಿಸಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದರು. ಅಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಅವರು ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಜಯಶೀಲರಾಗಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿ ಶೈಕ್ಷಣಿಕ ಕ್ಷೇತ್ರದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದರು*.
*ಜನತಾದಳ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ರವೀಂದ್ರಅವರು ಅದರ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಆದರೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಆ ಪಕ್ಷವನ್ನು ತೊರೆದು ತಮ್ಮದೇ ‘ಜನಶಕ್ತಿ’ ಎಂಬ ಪಕ್ಷ ಕಟ್ಟಿದರು. ಅದು ನಿರೀಕ್ಷಿತ ಫಲ ನೀಡದ ಕಾರಣ ಬಿಜೆಪಿ ಸೇರಿದರು ಅಲ್ಲೂ ಸರಿಕಾಣದೆ ಕಾಂಗ್ರೆಸ್ ಸೇರ್ಪಡೆಗೊಂಡು ಪ್ರಸ್ತುತ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಕ್ರಿಯರಾಗಿದ್ದಾರೆ*.
*ಪಕ್ಷ ಬದಲಾದರೂ ತಾನು ನಂಬಿಕೊಂಡು ಬಂದ ಜನಪರ ಚಿಂತನೆಗಳನ್ನು ಬದಲಾಯಿಸಿಕೊಳ್ಳದ ಸ್ವಾಭಿಮಾನಿ ರವೀಂದ್ರ ಅವರೊಂದಿಗೆ ಹೇರೂರು ಗ್ರಾಮದ ಜನತೆ ಕಳೆದ ನಾಲ್ಕು ದಶಕಗಳಿಂದ ಬೆಂಬಲವಾಗಿ ನಿಂತಿದ್ದಾರೆ.* *ಅದಕ್ಕೆ ಸಾಕ್ಷಿಯಾಗಿ 1985 ರಿಂದ 2025 ರವರೆಗೂ 40 ವರ್ಷಗಳ ಕಾಲ ಹೇರೂರು ಪಂಚಾಯಿತಿಯಲ್ಲಿ ಕುಕ್ಕುಡಿಗೆ ರವೀಂದ್ರ ಅವರ ತಂಡ ನಿರಂತರ ಬಹುಮತ ಗಳಿಸಿ ಅಧಿಕಾರ ನಡೆಸುತ್ತಿದೆ*.
*ರಾಜಕೀಯದ ಜೊತೆಗೆ ಸಹಕಾರಿ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕುಕ್ಕುಡಿಗೆ ರವೀಂದ್ರ ಅವರು 4 ದಶಕಗಳ ಹಿಂದೆ ಹೇರೂರಿನ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಅದರ ಅಧ್ಯಕ್ಷರಾದರು. ಬ್ಯಾಂಕಿನ ಅಭಿವೃದ್ಧಿಗೆ ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆಯಿಂದಾಗಿ ಊರಿನ ಜನತೆ ನಿರಂತರ ಬೆಂಬಲ ನೀಡುತ್ತಿದ್ದಾರೆ*. *ಹಾಗಾಗಿ ಕಳೆದ 40 ವರ್ಷಗಳಿಂದ ಆಡಳಿತ ಚುಕ್ಕಾಣಿ ಕುಕ್ಕುಡಿಗೆ ರವೀಂದ್ರ ಅವರ ತಂಡದ ಕೈಯಲ್ಲಿದ್ದು, ಬ್ಯಾಂಕ್ ಪ್ರಗತಿಪಥದಲ್ಲಿ ಸಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು, ಅದರ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ರವೀಂದ್ರ ಅವರು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.*
*ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ 2008 ರಲ್ಲಿ ಹೇರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಜ್ಯದಲ್ಲೇ ಮಾದರಿಯಾಗಿ ಅತ್ಯಂತ ಯಶಸ್ವಿಯಾಗಿ ಸಮ್ಮೇಳನವನ್ನು ನಡೆಸಿದ ಕೀರ್ತಿ ಇವರದು*. *2008 ರಲ್ಲಿ ಕೊಪ್ಪದಲ್ಲಿ ನಡೆದ ಕೊಪ್ಪ ತಾಲ್ಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಮ್ಮೇಳನದ ಅಧ್ಯಕ್ಷರಾಗಿಯೂ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.*
*2002 ರಿಂದ ಕೊಪ್ಪ ಡೈಮಂಡ್ಸ್ ಕ್ಲಬ್ (ರಿ.)ನ ಜಿಲ್ಲಾ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ರವೀಂದ್ರ ಅವರು ಕೊಪ್ಪ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುವ ಸಾಮಾಜಿಕ ಕ್ರೀಡಾ ಇನ್ನಿತರ ಜನಪರ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದಲೂ ಮೇಗುಂದಾ ಹೋಬಳಿಯಲ್ಲಿ ನಡೆಯುವ ಯಾವುದೇ ತಾವು ಪ್ರತಿನಿಧಿಸುವ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ*.
*ಅಧಿಕಾರ, ಪದವಿಗಾಗಿ ಯಾವತ್ತೂ ಯಾರಿಗೂ ತಲೆ ಬಾಗದ ರವೀಂದ್ರ ಅವರು ರೈತರ, ಕೂಲಿ ಕಾರ್ಮಿಕರ, ಬಡಜನರ ಪರ ನಿಂತು ಹೋರಾಟ ನಡೆಸಿಕೊಂಡು ನಾಯಕ ಪಟ್ಟ ಗಿಟ್ಟಿಸಿಕೊಂಡವರು. ಬಡವರ, ವಸತಿರಹಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದಲ್ಲಿ ತುಳಿತಕ್ಕೊಳಗಾದವರ ಪರ ನಿಂತು ಹೋರಾಟ ನಡೆಸಿದವರು* . *ಹೇರೂರು ಪಂಚಾಯತಿ ಅಧ್ಯಕ್ಷರಾಗಿ , ಕೊಪ್ಪ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರಾಗಿ , ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ , ಹೇರೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ , ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ,ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಕೊಪ್ಪ ತಾಲ್ಲೂಕು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ,ಶ್ರೀ ರಾಮ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಹೇರೂರು ಸರ್ಕಾರಿ ಪ್ರೌಢಶಾಲೆಯ ಸ್ಥಾಪಕ ಸಮಿತಿಯ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ*.
*ಹಲವಾರು ಸಂಘ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ, ಸಲಹೆಗಾರರಾಗಿ, ರೈತ ಸಂಘ, ಕಾರ್ಮಿಕರ ಸಂಘಟನೆಗಳು, ಸಮಾಜಮುಖಿ, ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಚಿಕ್ಕಮಗಳೂರು ಜಿಲ್ಲೆಯಲ್ಲೇ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿರುವ ಕುಕ್ಕುಡಿಗೆ ರವೀಂದ್ರ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯಮಟ್ಟದ ‘ಹೆಚ್. ನರಸಿಂಹಯ್ಯ ಪ್ರಶಸ್ತಿ’ ನೀಡಿ ಗೌರವಿಸಿದ್ದು ಒಳ್ಳೆಯ ವ್ಯಕ್ತಿಗೆ ಯೋಗ್ಯ ಗೌರವ ಸಿಕ್ಕಂತಾಗಿದೆ ಎಂಬುದು ಎಲ್ಲಾ ವರ್ಗದ ಜನರ ಅಭಿಪ್ರಾಯವಾಗಿದೆ.*
*ಕಷ್ಟದ ಸಮಯದಲ್ಲಿ ಕೈ ಹಿಡಿದು ನಡೆಸುವ, ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಬೆಂಬಲ ಕೊಡುವ ವ್ಯಕ್ತಿತ್ವ ಇವರಲ್ಲಿದೆ. ಸಹಾನುಭೂತಿಯಿಂದ ಕೇಳಿಸಿಕೊಳ್ಳುತ್ತಾ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ ನೀವು ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ಸ್ವೀಕರಿಸುವ ಮನಸ್ಸು ಇವರಿಗಿದೆ. ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದೇ ದೊಡ್ಡ ಸಾಧನೆಯಲ್ಲ*, *ಸಂಪಾದಿಸಿದ ಒಂದು ಸ್ನೇಹ ಸಾವಿರ ಕಾಲ ಇರುವಂತೆ ಮಾಡುವುದೇ ನಿಜವಾದ ಸಾಧನೆ ಎಂಬ ಮಾತು ಗೆಳೆತನದ ಆಳವಾದ ಮಹತ್ವವನ್ನು ಅರಿತವರು ಇವರು* .
*ರವೀಂದ್ರ ಕುಕ್ಕುಡಿಗೆ ಅವರಿಗೆ ಶತ್ರುಗಳು ಕಮ್ಮಿ ಇದ್ದು , ಮಿತ್ರರೇ ಜಾಸ್ತಿ ಇದ್ದಾರೆ. ಇವರನ್ನು ನಂಬಿದ ವ್ಯಕ್ತಿಗಳಿಗೆ ಇವರು ಕೈ ಬಿಡದೆ ಜೊತೆಗೂಡಿಸಿಕೊಂಡು, ಅವರ ಕಷ್ಟ, ಸುಖದಲ್ಲಿ ಭಾಗಿಯಾಗಿ ಎಲ್ಲಾ ನೆರವು ನೀಡುವ ವ್ಯಕ್ತಿತ್ವ ಹೊಂದಿದ್ದಾರೆ. ‘ರಾಜ್ಯಮಟ್ಟದ ಡಾ. ಹೆಚ್. ನರಸಿಂಹಯ್ಯ ಪ್ರಶಸ್ತಿ’ ಪುರಸ್ಕೃತರಾಗಿರುವ ಕೆ.ಎಸ್. ರವೀಂದ್ರ ಕುಕ್ಕುಡಿಗೆ ಇವರಿಗೆ..*
ಅವಿನ್ ಟಿವಿ ಬಳಗ *ಅಭಿನಂದನೆ ಸಲ್ಲಿಸುತ್ತದೆ.*

