लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಫಿ ಬೆಳೆ ಆನ್ ಲೈನ್ ಏಲಂ ರದ್ದುಗೊಳಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ*..

1 min read

‎*ಕಾಫಿ ಬೆಳೆ ಆನ್ ಲೈನ್ ಏಲಂ ರದ್ದುಗೊಳಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ*

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಮಕ್ಷಮ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತರಾಮನ್ ರವರನ್ನು ಪಾರ್ಲಿಮೆಂಟಿನಲ್ಲಿ ಭೇಟಿಯಾಗಿ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸರ್ಪೇಸ್ ಕಾಯಿದೆ ಬಗ್ಗೆ ವಿವರಿಸಿ ಕಾಫಿ ಬೆಳೆಗಾರರ ಸಮಸ್ಯೆಯನ್ನು ಕೆಲ ಮಧ್ಯವರ್ತಿಗಳು ದುರುಪಯೋಗಪಡಿಸಿಕೊಂಡು ವಿದೇಶಗಳಲ್ಲಿ ಆನ್ ಲೈನ್ ಮೂಲಕ ಖರೀದಿಸಿ ಬಡ ರೈತರ ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದಕ್ಕೆ ಕೆಲವಡೆ ಬ್ಯಾಂಕ್ ಅಧಿಕಾರಿಗಳ ಸಹಮತವೂ ಇದೆ ಎಂಬ ದೂರುಗಳಿವೆ.

‎ಕಾಫಿ ಬೆಳೆಗಾರರಲ್ಲಿ ಶೇಕಡ 90 ಕ್ಕೂ ಮಿಕ್ಕಿ ರೈತರು ಸಣ್ಣ ಹಿಡುವಳಿದಾರರಾಗಿದ್ದು, ಬಹುತೇಕ ಮಂದಿಗೆ ತಮ್ಮ ಭೂಮಿ ಸದ್ರಿ ಕಾಯಿದೆಯಿಂದ ಆನ್ ಲೈನ್ ಮೂಲಕ ಹರಾಜಾಗುತ್ತಿರುವುದು ಅರಿವಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಪೇಸ್ ಕಾಯಿದೆ ವಿರಹಿತಗೊಳಿಸಬೇಕು ಮತ್ತು ಆನ್ ಲೈನ್ ಮೂಲಕ ಕಾಫಿ ಬೆಳೆಗಳನ್ನು ಹರಾಜು ಹಾಕುವುದನ್ನು ತಡಗಟ್ಟಬೇಕೆಂದು ಮನವಿ ಮಾಡಿದರು.

‎ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ದೇವೆಗೌಡರ  ಸಮಕ್ಷಮ ನಡೆದ ಚರ್ಚೆಯ ನಂತರ ಸಚಿವೆ ನಿರ್ಮಲಾ ಸೀತಾರಾಮನ್ ಬೇಡಿಕೆಯ ಬಗ್ಗೆ  ಪರಿಶೀಲನೆ ಮಾಡುವುದಾಗಿ ಮತ್ತು ತುರ್ತಾಗಿ  ಕಾಫಿ ಬೆಳೆ ಸಾಲಗಾರರ ತೋಟವನ್ನು ಆನ್ ಲೈನ್ ಹರಾಜು ನಿಲ್ಲಿಸಲು ಆದೇಶ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಯೋಗದಲ್ಲಿ ಸಂಸದರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಶ್ರೀ ಡಾ ಮಂಜುನಾಥ್,  ಶ್ರೀ ಮಲ್ಲೇಶ್ ಮುಂತಾದವರಿದ್ದರು. ತಮ್ಮ ನಿಯೋಗದ ಭೇಟಿ ಸಂದರ್ಭ ಉಪಸ್ಥಿತರಿದ್ದು,  ಮಾರ್ಗದರ್ಶನ ಮಾಡಿದ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರಿಗೆ ಸಂಸದ ಕೋಟ ಕೃತಜ್ಞತೆ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed