लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಫಿ ನಾಡಿನಲ್ಲಿ ಮದವೇರಿದ ಕಾಡಾನೆಯಿಂದ ಅಕ್ರಮಣಕಾರಿ ದಾಳಿ ,

1 min read

ಅವಿನ್ ಟಿವಿ ಸುದ್ದಿಜಾಲ ✒️: ಕಾಫಿ ನಾಡಿನಲ್ಲಿ ಮದವೇರಿದ ಕಾಡಾನೆಯಿಂದ ಅಕ್ರಮಣಕಾರಿ ದಾಳಿ , ನಾಲ್ಕು ದಿನದ ಅಂತರದಲ್ಲಿ ಮತ್ತೊಬ್ಬ ಕಾರ್ಮಿಕ ಮಹಿಳೆ ಬಲಿ, ಆಲ್ದೂರು ಬಾಳೆಹೊನ್ನೂರು ರಸ್ತೆ ಸಂಚಾರ ಸಂಪೂರ್ಣ ಬಂದ್, ಮುಗಿಲುಮಟ್ಟಿದ ಜನಾಕ್ರೋಶ

ಚಿಕ್ಕಮಗಳೂರು ೨೨ ಫೆ : ಮದವೇರಿ ತಿರುಗಾಡುತ್ತಿರುವ ಆನೆ ದಾಳಿಯಿಂದ ಮಹಿಳಾ ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ಇಂದು ಆಲ್ದೂರು ಸಮೀಪ ನಡೆದಿದೆ.ನಾಲ್ಕು ದಿನಗಳ ಅಂತರದಲ್ಲಿ ಇದು ಎರಡನೆಯ ಪ್ರಕರಣ ಇದಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಚಿಕ್ಕಮಗಳೂರು ನರಸಿಂಹರಾಜಪುರ ತಾಲ್ಲೂಕು ಗಡಿ ಭಾಗವಾದ ಕೊಪ್ಪ ಅರಣ್ಯ ವಿಭಾಗದ ಹುಣಸೆಹಳ್ಳಿ ಸಮೀಪದ ಇರುವ ಪುರ ನಾಗೇಶಗೌಡ ಎಂಬುವರ ತೋಟದಲ್ಲಿ ಕಾಡಾನೆ ದಾಳಿಗೆ ಕೂಡ್ಲಿಗಿ ಮೂಲದ ಕೂಲಿ ಕಾರ್ಮಿಕೆ ಬೋರಮ್ಮ ಎಂಬುವರು ಬಲಿಯಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ಇದೆ ತೋಟದಲ್ಲಿ ಕಾಡಾನೆ ದಾಳಿಗೆ ಯಶೋಧ ಎಂಬುವವರು ಇದೇ ಸ್ಥಳದಲ್ಲಿ ಮೃತಪಟ್ಟಿದ್ದರು.

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ
ಬಾಳೆಹೊನ್ನೂರು ಆರ್.ಎಫ್.ಓ ಕಛೇರಿ ಎದುರು ಪ್ರತಿಭಟನೆ ನಡೆದಿತ್ತು.
ತಕ್ಷಣ ಸ್ಪಂದಿಸಿದ ಅಧಿಕಾರಿಗಳು, ಶಾಸಕರು ಆನೆ ಓಡಿಸಲು ಕ್ರಮ ಕೈಗೊಂಡಿದ್ದು , ಆನೆಯನ್ನು ಗಡಿ ದಾಟಿಸಲಾಗಿದೆ ಎಂದು ಹೇಳಿದ್ದರು.

ಆನೆ ಹಿಡಿಯಲು ಕಾರ್ಯಾಚರಣೆ ಚಾಲ್ತಿಯಲ್ಲಿರುವ ಸಮಯದಲ್ಲಿಯೇ ಇದೀಗ ಮತ್ತೊಂದು ಬಲಿಯನ್ನು ಕಾಡಾನೆ ತೆಗೆದುಕೊಂಡಿದೆ, ಈಗ ಈ ಪ್ರದೇಶದಲ್ಲಿ ನಾಲ್ಕು ಆನೆಗಳು ಕಾಡಾನೆಯನ್ನು ಹಿಡಿಯಲು ಬೀಡು ಬಿಟ್ಟಿರುವ ಮದ್ಯೆ ಮತ್ತೆ ಆನೆ ದಾಳಿಗೆ ಮಹಿಳೆ ಬಲಿಯಾಗಿರುವುದು ಸ್ಥಳೀಯರನ್ನು ಕೆರಳಿಸಿದೆ.

ಮೃತ ಶವವನ್ನು ಪಿಕಪ್ ನಲ್ಲಿ ಅರಣ್ಯ ಇಲಾಖೆಯವರು ಸಾಗಿಸುತ್ತಿದ್ದಾಗ ಸ್ಥಳೀಯರು ಪಿಕಪ್ ವಾಹನವನ್ನು ತಡೆದು ರಸ್ತೆ ಮಧ್ಯೆ ಮೃತ ದೇಹವನ್ನು ಇಟ್ಟುಕೊಂಡು ಅರಣ್ಯ ಮಂತ್ರಿಗಳು ಇಲ್ಲಿಗೆ ಆಗಮಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಸಾವಿರಾರು ಜನ ಸ್ಥಳೀಯರು ಪ್ರತಿಭಟನೆ ಮೂಲಕ ಸಂಪೂರ್ಣ ರಸ್ತೆ ಸಂಚಾರ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ .
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed