ಇಪ್ಪತ್ತೈದರ ವಯೋಮಾನದ ಹಿರೇಮಗಳೂರಿನ ಕು. ಶ್ವೇತಾ ನ್ಯಾಯಾಧೀಶೆಯಾಗಿ ಆಯ್ಕೆ…
1 min read
ಅವಿನ್ ಟಿವಿ ಸುದ್ದಿಜಾಲ ✒️: ಇಪ್ಪತ್ತೈದರ ವಯೋಮಾನದ ಹಿರೇಮಗಳೂರಿನ ಕು. ಶ್ವೇತಾ ನ್ಯಾಯಾಧೀಶೆಯಾಗಿ ಆಯ್ಕೆ.
ಚಿಕ್ಕಮಗಳೂರು ಫೆ ೧೮: ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ನೆನ್ನೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 83 ಜನ ಆಯ್ಕೆಯಾಗಿದ್ದು, ಆಯ್ಕೆಯಾದ ಈ 83 ಜನರ ಒಂದೊಂದು ಕಥೆಯು ಒಂದೊಂದು ಸ್ಪೂರ್ತಿದಾಯಕವಾದದ್ದಾಗಿದೆ.
ಜೀವನದ ಜಗ್ಗಾಟಗಳನ್ನು ಮೆಟ್ಟಿ ನ್ಯಾಯಾಧೀಶರಾದ ಈ 83 ಪ್ರತಿಭೆಗಳಲ್ಲಿ ನಮ್ಮ ಚಿಕ್ಕಮಗಳೂರಿನ ಹಿರೇಮಗಳೂರಿನ ವಾಸಿಯಾದ ಎಚ್ ಇ ಶ್ವೇತಾ ಅವರು 59ನೇ ಸ್ಥಾನದೊಡನೆ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಚಿಕ್ಕಮಗಳೂರಿಗೆ ಹೆಮ್ಮೆಯ ಸಂಗತಿಯಾಗಿದೆ.
ತರಕಾರಿ ವ್ಯಾಪಾರಸ್ಥರಾದ ಈಶ್ವರ್ ಮತ್ತು ಕುಸುಮಾ ದಂಪತಿಗಳ ಹೆಮ್ಮೆಯ ಪುತ್ರಿಯಾದ ಶ್ವೇತಾ, ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾವಿಬಾಗದಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದರು, ನಂತರ ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿಪದವಿ ಪಡೆದು, ತದನಂತರ ಹಾಸನದ ಎಂ ಕೃಷ್ಣಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರಾಗಿದ್ದಾರೆ,
ಪರಿಶ್ರಮದಿಂದ ಯಾವ ಸಾಧನೆಯನ್ನಾದರೂ ಮಾಡಬಹುದು ಎಂದು ಶ್ವೇತಾ ಸಾಬೀತುಪಡಿಸಿದ್ದಾರೆ.
••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ … ✒️
ಚಿಕ್ಕಮಗಳೂರು

