ಅತೀ ವರ್ಗಗಳ ಅರಣ್ಯಾಧಾರಿತ ಬುಡಕಟ್ಟು ವರ್ಗಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು 2025-26 .
1 min read
ಅತೀ ವರ್ಗಗಳ ಅರಣ್ಯಾಧಾರಿತ ಬುಡಕಟ್ಟು ವರ್ಗಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು 2025-26 .
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಚಿಕ್ಕಮಗಳೂರು . ಇವರುಗಳ ಸಹಯೋಗದಲ್ಲಿ ಇಂದು ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ನಡೆಯಿತು ಈ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಅಧ್ಯಕ್ಷರು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಎ ಎನ್ ಮಹೇಶ್ ರವರು, ಆದಿವಾಸಿಗಳು ಈ ದೇಶದ ಮೂಲ ನಿವಾಸಿಗಳು ಇವರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಪರವಾಗಿ ಧನ್ಯವಾದಗಳನ್ನು ತಿಳಿಸುವ ಜೊತೆಗೆ ಕೇವಲ ಇಲಾಖೆಯ ಕಾರ್ಯಕ್ರಮಕ್ಕೆ ಸೀಮಿತವಾಗದೆ ತನ್ನ ಕಾರ್ಯಕ್ರಮ ಎಂದು ಅದ್ಬುತವಾಗಿ ಎಲ್ಲರನ್ನೂ ಸಂಘಟಿಸಿ ಕಾರ್ಯಕ್ರಮದ ಯಶಸ್ಸಿಗೆ ನಿಂತಿರುವ ಇಲಾಖೆಯ ಉಪನಿರ್ದೇಶಕರಾದ ಡಾ. ಮಂಜುಳ ಹುಲ್ಲಹಳ್ಳಿಯವರನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಂಜೇಗೌಡ ,ಮುತ್ತಪ್ಪ, ಜ್ಯೋತಿ ವಿಠಲ್,ವಿಠಲ್, ರಾಜೇಶ್, ಮರಿಯಪ್ಪ, ಸೀತಮ್ಮ, ದೇಜಪ್ಪ ಗಂಗು,ಶ್ರೀನಿವಾಸಗೌಡ, ಕೃಷ್ಣ, ಯೋಗೇಶ್, ಗೋಪಾಲ,ಲಕ್ಷ್ಮಣ್,ಪೂವಪ್ಪ, ದಿವಾಕರ, ಕೇಶವ್,ದೇವೇಂದ್ರ, ಹುಣುಸೆಮಕ್ಕಿ ಲಕ್ಷ್ಮಣ್, ಇಲಾಖೆಯ ಮಂಜುಳ ಹುಲ್ಲಹಳ್ಳಿ, ಕನ್ನಡ ಸಂಸ್ಕೃತಿ ಇಲಾಖೆಯ ಡಾ . ರಮೇಶ್, ವಿನುತಾ, ಸಂತೋಷ, ಮುಂತಾದವರು ಭಾಗವಹಿಸಿದ್ದರು.

