लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರತಿಯೊಂದು ವಿದ್ಯಾಸಂಸ್ಥೆಯ ಕಾರ್ಯ ಚಟುವಟಿಕೆ ಅದರ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ”…

1 min read

“ಪ್ರತಿಯೊಂದು ವಿದ್ಯಾಸಂಸ್ಥೆಯ ಕಾರ್ಯ ಚಟುವಟಿಕೆ ಅದರ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ”

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು. ಜಿಲ್ಲಾ ಘಟಕ ಚಿಕ್ಕಮಗಳೂರು. ತಾಲೂಕು ಘಟಕ ಮೂಡಿಗೆರೆ ಹಾಗೂ ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ (ರಿ) ಬಣಕಲ್. ಇವರ ಸಂಯುಕ್ತ ಆಶ್ರಯದಲ್ಲಿ ” ಜಿಲ್ಲಾ ಶೈಕ್ಷಣಿಕ ಕಾರ್ಯಗಾರ ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ ” ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ ಆವರಣದಲ್ಲಿ ದಿನಾಂಕ 8.3.2026ರಂದು ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎನ್ ರಾಜಗೋಪಾಲ್ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಅನುದಾನಿತ ಶಿಕ್ಷಕರ ಸೇವಾ ಅವಧಿಯಲ್ಲಿ ಅವರಿಗೆ ಎದುರಾಗುವಂತಹ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವನ್ನು ಪ್ರಾರಂಭಿಸಿ ಇದರ ಕಾರ್ಯ ವ್ಯಾಪ್ತಿಯನ್ನು ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ವ್ಯಾಪಿಸಲು ಪ್ರತಿ ಜಿಲ್ಲೆ ಮತ್ತು ತಾಲೂಕು ಘಟಕಗಳನ್ನು ಸ್ಥಾಪಿಸಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಆಗುಹೋಗುಗಳು ಮತ್ತು ತಮ್ಮ ಸೇವಾ ಅವಧಿಯಲ್ಲಿ ಅವರಿಗೆ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಲ್ಲಿ ಸಂಘವು ತನ್ನದೇ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಮತ್ತು ಸಂಘದ ವತಿಯಿಂದ ಪ್ರತಿ ವರ್ಷ ತಾಲೂಕು ಜಿಲ್ಲೆ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಂಘದ ವತಿಯಿಂದ ನೀಡುತ್ತಾ ಬಂದಿದ್ದು ಶಿಕ್ಷಕರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಚಿಕ್ಕಮಗಳೂರು ಜಿಲ್ಲೆ ಮತ್ತು ಜಿಲ್ಲೆಯ ವಿವಿಧ ತಾಲೂಕಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಭಾನ್ವಿತ ಶಿಕ್ಷಕರು ಹಾಗೂ ಮಕ್ಕಳಿಗೆ ಪುರಸ್ಕಾರವನ್ನು ನೀಡುವ ಈ ಕಾರ್ಯಕ್ರಮವನ್ನು ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ ಬಣಕಲ್ ನಲ್ಲಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಆಯೋಜಿಸಿದ್ದು ಈ ಕಾರ್ಯಕ್ರಮ ಬಹಳ ವ್ಯವಸ್ಥಿತವಾಗಿ ನಡೆಸಲು ಜವಾಬ್ದಾರಿ ವಹಿಸಿಕೊಂಡ ವಿದ್ಯಾಭಾರತಿ ವಿದ್ಯಾಸಂಸ್ಥೆಗೆ ರಾಜ್ಯ ಘಟಕ ಅಭಿನಂದಿಸುತ್ತದೆ. ಇಲ್ಲಿಯ ಪರಿಸರವನ್ನು ಗಮನಿಸಿದಾಗ ಇಲ್ಲಿಯ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮೌಲ್ಯ ವರ್ಧಿತ ಶಿಕ್ಷಣ ಸಿಗುತ್ತಿರುವುದು ಕಂಡುಬರುತ್ತದೆ. ಈ ಸಂಸ್ಥೆಯ ಬೆಳವಣಿಗೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಾ ಈ ವಿದ್ಯಾಸಂಸ್ಥೆಗೆ ಸಂಘವು ಸದಾ ಅಭಾರಿಯಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಾರದಾ. ಆರ್. ಎಸ್. ಮಾತನಾಡಿ ಜಿಲ್ಲಾ ಘಟಕದ ಜಿಲ್ಲಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಿಕೊಟ್ಟ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಗೆ ಅಭಿನಂದಿಸುತ್ತಾ ಪ್ರತಿಯೊಂದು ಶಾಲೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಪ್ರಯತ್ನಿಸುವುದರ ಜೊತೆಗೆ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶಿಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಸ್ವಾಸ್ತ್ಯ ಸಮಾಜವನ್ನು ರೂಪಿಸಬಹುದಾಗಿದೆ. ಈ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಸಂಸ್ಕಾರಯುತ ಮೌಲ್ಯ ವರ್ದಿತ ಶಿಕ್ಷಣ ಮಕ್ಕಳಿಗೆ ಸಿಗುತ್ತಿರುವುದು ಇಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ. ಶಿವರಾಮ ಶೆಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ತಾಲೂಕಿನ ಅಖಿಲೇಶ್, ಸಾಕ್ಷಿತ, ಧನುಷ್. ಎಸ್ , ಸಾನ್ವಿಕ .ಜೆ. ಹೆಚ್, ಆಸ್ತಾಗುಪ್ತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು. ಮತ್ತು ವಿವಿಧ ತಾಲೂಕಿನಿಂದ ಒಬ್ಬ ಶಿಕ್ಷಕರಂತೆ ಸಂತ ಜೋಸೆಫರ ಕಾನ್ವೆಂಟ್ ಚಿಕ್ಕಮಗಳೂರಿನ ಸಿಸ್ಟರ್ ರೆಜಿನಾ ಮೇರಿ .ಎಸ್, ನಿರ್ಮಲ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಾಳೆಹೊನ್ನೂರಿನ ಅಣ್ಣೇಗೌಡ. ಹೆಚ್ , ಸಂತ ಮಾರ್ಥಸ್ ಹಿರಿಯ ಪ್ರಾಥಮಿಕ ಶಾಲೆ ಮೂಡಿಗೆರೆಯ ಸಿಸ್ಟರ್ ಮೂಲಿ ಎಂಟಿ. ವಿಶ್ವ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಕಡೂರಿನ ಜಿ.ಪಿ. ಇಂದ್ರಮ್ಮ ಇವರಿಗೆ ಜಿಲ್ಲಾ ಉತ್ತಮ್ಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿಯನ್ನು ಹೊಂದುತ್ತಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಾದ ಸಂತ ಜೋಸೆಫರ ಕಾನ್ವೆಂಟ್ ಚಿಕ್ಕಮಗಳೂರಿನ ಅನ್ನಮರಿಯ ಮತ್ತು ಶ್ರೀಮತಿ ಗ್ರೆಸ್ಸಿಲ್ಲ ಪಿಂಟೋ ಹಾಗೂ ಶ್ರೀ ವಿದ್ಯಾ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹೆಚ್.ಎಸ್ ಶೇಖರಪ್ಪ ಇವರುಗಳಿಗೆ ಅಭಿನಂದಿಸಲಾಯಿತು.
ಬಹಳ ಯಶಸ್ವಿಯಾಗಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದರ ಕಾರ್ಯದರ್ಶಿ ರಾಜು ಎಂ ಕೆ ನಿಕಟ ಪೂರ್ವ ಕಾರ್ಯದರ್ಶಿ ಟಿ ರವಿಕುಮಾರ್. ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಜಗದೀಶ್. ಏಕೆಂದರೆ ಹಾಸನ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸತೀಶ್ .ಕೆ.ಬಿ. ಜಿಲ್ಲಾ ಕಾರ್ಯದರ್ಶಿ ರವಿನಾಯಕ್. ವಿವಿಧ ಶಾಲೆಗಳ ಶಿಕ್ಷಕರಾದ ಪ್ರವೀಣ್ ಮಲ್ಲೇಗೌಡ ರೀನಾ ರೇಗೂ. ಹಾ.ಬಾ. ಮಂಜುನಾಥ್. ಮತ್ತು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಿಇ ಸುಬ್ರಾಯ ಗೌಡ ಯುಪಿ ರಾಮಚಂದ್ರ ಹುಳ್ಳ ಬಿಪಿ ಲಿಂಗಪ್ಪ ಬಿಬಿ ಮಂಜುನಾಥ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮಾಲತಿ .ಟಿ.ಆರ್ ಪ್ರಾಥಮಿಕ ವಿಭಾಗದ ನಾಗರಾಜು. ಸಿ. ಶಿಕ್ಷಕರಾದ ಗೀತಾ, ಭಕ್ತೇಶ್ ,ಲೋಕೇಶ್, ಲಿಂಗರಾಜು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು .ಅಡುಗೆ ಸಿಬ್ಬಂದಿ. ಜೊತೆಗೆ ಜಿಲ್ಲೆಯ ವಿವಿಧ ಶಾಲೆಗಳಿಂದ ಬಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

ವರದಿ…

ವಸಂತ್.ಹಾರಗೂಡು.

About Author

Leave a Reply

Your email address will not be published. Required fields are marked *

You may have missed