AVIN TV

Latest Online Breaking News

ಕಡೂರು ತಾಲ್ಲೂಕುನಲ್ಲಿ **ಪತ್ರಕರ್ತರಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ**#avintvcom

Featured Video Play Icon

*ಪತ್ರಕರ್ತರಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ*
—————————
ಚಿಕ್ಕಮಗಳೂರು ಜಿಲ್ಲೆ.
ಕಡೂರು ತಾಲ್ಲೂಕು.

ಕೋವಿಡ್ 19 ಸೋಂಕಿನ 2ನೇ ಹಾವಳಿಯ ಈ ಸಮಯದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.ರೋಗದ ಆತಂಕದ ನಡುವೆಯೂ ಮುಂಚೂಣಿ ವಾರಿಯರ‍್ಸ್ ಗಳಾಗಿ ವೈದ್ಯರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ.ಮೊದಲಿಯಾರ್ ಹೇಳಿದರು.
ಅವರು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಪಟ್ಟಣದ ಬಾಲಾಜಿ ನರ್ಸಿಂಗ್ ಹೋಂನ ಡಾ.ಕೆ.ವಿ.ರಮೇಶ್ ಮತ್ತು ಡಾ.ಬಿ.ನಿರ್ಮಲ ರವರನ್ನು ಸನ್ಮಾನಿಸಿ ಅವರು ಮಾತನಾಡುತ್ತಾ ,
ಡಾ.ಬಿ.ಸಿ ರಾಯ್ ರವರ ಜನ್ಮದಿನಾಚರಣೆ ಅಂಗವಾಗಿ ಜುಲೈ 1ರಂದು ದೇಶದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಜಗತ್ತನ್ನು ಕಾಡುತ್ತಿರುವ ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ 19 ವೈರಸ್ ಸೋಂಕಿನ ಈ ಮಾರಕ ರೋಗವನ್ನು ತಡೆಗಟ್ಟುವಲ್ಲಿ ಮತ್ತು ನಿಬಾಯಿಸುವಲ್ಲಿ ವೈದ್ಯರು ಹಾಗೂ ಎಲ್ಲ ವೈದ್ಯಕೀಯ ಸಿಬ್ಬಂದಿಯ ಪಾತ್ರ ಮಹತ್ವದಾಗಿದೆ ಎಂದರು.

ಈ ಸಂಧರ್ಬದಲ್ಲಿ ಲಾಕ್ ಡೌನ್ ವೇಳೆ ಗ್ರಾಮೀಣ ಪತ್ರಕರ್ತರು ಸಂಕಷ್ಟಕ್ಕಿಡಾಗಿದ್ದು ಅವರ ನೆರವಿಗೆ ಜಿಲ್ಲಾಸಂಘ ಸಂಕಷ್ಟಕ್ಕಿಡಾದ ಪತ್ರಕರ್ತರ ನೆರವಿಗೆ ಧಾವಿಸಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಂಘದ ಪಧಾದಿಕಾರಿಗಳಿಗೆ ಕಿಂಚಿತ್ತು ಸಹಾಯ ಮಾಡುವ ನಿಟ್ಟಿನಲ್ಲಿ , ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದರು.

ಕಡೂರು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸೂರಿ ಶಶಿಧರ್ ಮಾತನಾಡಿ, ಮನುಕುಲವನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ‍್ಸ್ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಧನ್ವಂತರಿ ಸ್ವರೂಪಿಗಳಾದ ನಮ್ಮ ಹೆಮ್ಮೆಯ ವೈದ್ಯರು. ಜಾತಿ, ಪಂಥ,ಕುಲ ಸಮುದಾಯ ನೋಡದೆ ಬಂದ ರೋಗಿಗಳನ್ನು ನಗುಮುಖದಿಂದಾ ಸ್ವಾಗತಿಸಿ ಆರೈಕೆ ಮಾಡಿ ಕಳುಹಿಸಿಕೊಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕವೆ ಸರಿ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಎನ್.ಗಿರೀಶ್ ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘ ಕಳೆದ ಮೂರು ವರ್ಷಗಳಿಂದಲೂ ಸಹ ಜಿಲ್ಲಾಧ್ಯಕ್ಷರಾದ ಮೊದಲಿಯಾರ್ ಮಾರ್ಗದರ್ಶನದಂತೆ ವೈದ್ಯರ ದಿನಾಚರಣೆಯನ್ನು ತಾಲ್ಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿಕೊಂಡು ಬರುತ್ತಿದೆ.ಇದಕ್ಕೆಲ್ಲ ಸಂಘದ ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಈ ಸಂಧರ್ಬದಲ್ಲಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಕೆ.ಜಿ.ಲೋಕೇಶ್ವರ್, ಎಲ್.ಎಸ್‌. ಶ್ರೀಕಾಂತ್, ಕವಿನುಡಿ ಲಕ್ಷ್ಮಣ್, ಬಾನುಪ್ರಕಾಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಬಾಲು, ಕೆ.ವಿ. ಮಂಜುನಾಥ್, ಷಣ್ಮುಖಪ್ಪ, ಸುಬ್ರಹ್ಮಣ್ಯ ಭೈರೇಶ್, ಮತ್ತಿತರರು ಪಧಾಧಿಕಾರಿಗಳು ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!