AVIN TV

Latest Online Breaking News

ಸ್ವರ್ಣ ಗ್ರುಫ್ & ಕಲಾ ಸ್ಪಂದನ ವತಿಯಿಂದ ಆಮ್ಲಜನಕದ ಕಾನ್ಸಟ್ರೇಟರ ಬಡಕುಟುಂಬದವರಿಗೆ ಆಹಾರದ ಕಿಟ್#avintvcom

Featured Video Play Icon

ಸ್ವರ್ಣ ಗ್ರುಫ್ ದವರು ನೀಡದ ಉಪಕರಣ ಸದಪಯೋಗವಾಗಲಿ ಮತ್ತು ಕಡ್ಡಾಯವಾಗಿ ಗ್ರಾಮೀಣ ಜನರು ಸಹ ಲಸಿಕೆ ಹಾಕಿಸಿಕೊಳ್ಳಿ- ಸಂಸದರಾದ ಶಿವಕುಮಾರ ಉದಾಸಿ

ಗ್ರಾಮೀಣ ಬಾಗದ ಜನರ ಆರೋಗ್ಯ ಉತ್ತಮವಾಗಿದ್ದರೆ ನಾಡು ಎಲ್ಲದರಿಂದ ಉತ್ತಮವಾಗಿರಲು ಸಾಧ್ಯ. ಗ್ರಾಮೀಣದಲ್ಲಿ ಕೋವಿಡ್‌ ಸೋಂಕು ಗಣನೀಯವಾಗಿ ಕಡಿಮೆ ಇರುವದರಿಂದ ರೈತರಬಾಳು ಹಸನಾಗಿರಲು ಸಾಧ್ಯ. ಗ್ರಾಮೀಣ ಜನರು ಆರೋಗ್ಯದಿಂದ ಇರಲಿ ಮತ್ತು ಕೋವಿಡ್‌ನ‌ 3ನೇ ಅಲೆಯ ತಡೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನೋಡುತ್ತಿರುವ ಸ್ವರ್ಣ ಗ್ರುಫ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ಎಸ್.ವಿ.ಪ್ರಸಾದ ಅವರ ಕಾರ್ಯ ಶ್ಲಾಘನೀಯ ಎಂದು ಸಂಸದರಾದ ಶಿವುಕುಮಾರ ಉದಾಸಿ ಹೇಳಿದರು.

ಅವರು ಹುಬ್ಬಳ್ಳಿಯ ಸ್ವರ್ಣ ಗ್ರುಫ್ ಆಫ್ ಕಂಪನಿ ಮತ್ತು ಹಾವೇರಿಯ ಕಲಾ ಸ್ಪಂದನ ಇವರ ವತಿಯಿಂದ ಹಾನಗಲ್ ತಾಲೂಕಿನ ಹಿರೇಬಾಸೂರ ಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ಆಮ್ಲಜನಕದ ಕಾನ್ಸಟ್ರೇಟರ ಮತ್ತು ಬಡಕುಟುಂಬದವರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡುತ್ತಾ ಕೊರೊನಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವುದರ ಜತೆಗೆ ಕೋವಿಡ್‌ನ‌ 3ನೇ ಅಲೆಯು ಮಕ್ಕಳನ್ನು ತಲುಪದಿರಲಿ ಎಂಬ ಉದ್ದೇಶದಿಂದ ನೀಡಿದ ಉಪಕರಣಗಳ ಸದುಪಯೋಗ ಆಗಲಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಮಾತನಾಡಿ ಗ್ರಾಮೀಣ ಭಾಗದವರಿಗೆ ಸಹಾಯ ಸಹಕಾರ ನೀಡುವುದು ಬಹಳ ಮುಖ್ಯವಾಗುತ್ತದೆ. ಅವರೇ ನಮ್ಮ ಆಧಾರದ ಶಕ್ತಿ.ಅವರ ಆರೋಗ್ಯ ಚೆನ್ನಾಗಿದ್ದರೆ ನಾವು ಸಹ ಅವರ ಜೊತೆಗೆ ಉತ್ತಮ ಜೀವನ ನಡೆಸಬಹುದು ಎಂದು ಹೇಳಿದರು.

ಸ್ವರ್ಣ ಗ್ರುಪಿನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ಎಸ್.ವಿ ಪ್ರಸಾದ ಮಾತನಾಡಿ ಪ್ರತಿಯೊಬ್ಬರ ಆರೋಗ್ಯ ಮುಖ್ಯ. ಉತ್ತಮ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಾಯ ಹಾಗಾಗಿ ನನ್ನ ಶಕ್ತಿಗೆ ತಕ್ಕಷ್ಟು ಸಹಾಯ ಮಾಡಲಾಗಿದೆ.ಇದರ ಸದುಪಯೋಗ ಆದರೆ ಅದೇ ನನ್ನ ಬದುಕಿನ ಸ್ವಾರ್ಥಕತೆ ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಊರಿನ ಹಿರಿಯರಾದ ಮಹಾದೇವಪ್ಪ ಯಮನೂರು,ಬಿಜೆಪಿ ಮಂಡಳದ ತಾಲೂಕಾ ಅಧ್ಯಕ್ಷರಾದ ನಿಂಗಪ್ಪ ಗೊಬ್ಬೇರ, ಪ್ರವೀಣ ಕಲಾಲ, ಭೂನ್ಯಾಯ ಮಂಡಳಿ ಸದಸ್ಯರಾದ ಶಿವಲಿಂಗಪ್ಪ ತಲ್ಲೂರ, ಸುರೇಶ ಕಾಗಿನೆಲ್ಲಿ, ಗ್ರಾಮ ಪಂಚಾಯತದ ಸದಸ್ಯರಾದ ನಾಗವ್ವ ಮೌನೇಶಪ್ಪ ಕತ್ತಿ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ನಜಿಮಾಬಾನು ಮಹ್ಮದಗೌಸ ಹಿತ್ತಲಮನಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ದಾವಲಸಾಬ ನಾಗನೂರ, ಶ್ರೀಮತಿ ಮಲ್ಲವ್ವ ಎಸ್ ತೋಟಗೆರ, ಅಧ್ಯಕ್ಷರಾದ ಶ್ರೀ ಮಹೇಶ ವ್ಹಿ ಬಣಕಾರ, ಗೌಸು ಹಿತ್ತಲಮನಿ, ಚಂದ್ರಶೇಖರ ಶಂಕ್ರಿಕೊಪ್ಪ, ಕುಮಾರ ಯಮನೂರ, ಮಾರ್ತಾಂಡಪ್ಪ ದೇಸಾಯಿ, ಶಿವಾನಂದಪ್ಪ ಕತ್ತಿ, ಹೊನ್ನಪ್ಪ ಗೊಂದಿ,ಶಾಂತಪ್ಪ ವಾಸನದ, ಬಸವರಾಜ ಕಚವಿ, ಮಂಜುನಾಥ ಮಟ್ಟಿಮನಿ, ನಾಗರಾಜ ಅಳವಂಡಿ, ರಾಜು ಬ್ಯಾತ್ನಾಳ, ಚಂದ್ರೇಗೌಡ ಪಾಟೀಲ, ಮಾರುದ್ರಪ್ಪ ಕಛವಿ, ಅಶೋಕ ಯಮನೂರ, ಏಳುಕೋಟಿ ದಾಮೊದರ, ಜಗದೀಶ ಕ್ಷವರದ, ಏಳುಕೋಟಿ ಜಾಡರ, ಮುಂತಾದವರು ಇದ್ದರು.

ಮುತ್ತಣ್ಣ ಬ್ಯಾತನಾಳ, ಶಿವಣ್ಣ ಬ್ಯಾತನಾಳ, ಸುಭಾಷ ಮಟ್ಟಿಮನಿ, ವೇಂಕಪ್ಪ ಕರಿಗಾರ, ಸುರೇಶ ಹೊಸಮನಿ, ಚಿಕ್ಕಪ್ಪ , ರಶಿದಸಾಬ ನೀರಮಣಿಗಾರ, ಭಾಷಾಸಾಬ ಕುದರಿಹೊಂಡದ, ಇದ್ದರು.

ಕಲಾ ಸ್ಪಂದನದ ಅಧ್ಯಕ್ಷರಾದ ಶ್ರೀ ಸಿದ್ದವೀರಗೌಡ ಪಾಟೀಲ, ಕಾರ್ಯದರ್ಶಿ ಮಂಜುನಾಥ ಕತ್ತಿ, ಕೋಶಾಧ್ಯಕ್ಷರಾದ ಜಗದೀಶ ಎಮ್ ಕೆ. ನಿರ್ವಹಿಸಿದರು.

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!