AVIN TV

Latest Online Breaking News

ಕಾವ್ಯದ “ಮೆರವಣಿಗೆ” ಮುಗಿಸಿದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ #avintvcom

Featured Video Play Icon

ಕಾವ್ಯದ “ಮೆರವಣಿಗೆ” ಮುಗಿಸಿದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ

ಬಂಡಾಯ ಹಾಗೂ ದಲಿತಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯದ ದಿಕ್ಕನ್ನೆ ಬದಲಾಯಿಸಿದ ಕವಿ ನಾಡೋಜ ಡಾ.ಸಿದ್ದಲಿಂಗಯ್ಯನವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಬಣಕಲ್. ಕನ್ನಡ ಜಾನಪದ ಪರಿಷತ್ತು ಹಾಗೂ ಪತ್ರಕರ್ತರ ಬಳಗ ಬಣಕಲ್.ಇವರ ವತಿಯಿಂದ ಕೊಟ್ಟಿಗೆಹಾರದ ಸ್ಪೂರ್ತಿ ಮಿತ್ರಮಂಡಳಿ ಗ್ರಂಥಾಲಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಡಾ.ಸಿದ್ದಲಿಂಗಯ್ಯನವರು ಬಂಡಾಯ ಸಾಹಿತ್ಯದ ಮೂಲಕ ಸಮಾಜದಲ್ಲಿನ ಶೋಷಿತ ವರ್ಗದವರ ದ್ವನಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಪುಟವನ್ನು ತೆರೆದವರು.ಇವರ ಅದೆಷ್ಟೋ ಕಾವ್ಯಗಳು ಸಮಾಜದಲ್ಲಿನ ಜನರನ್ನು ಶೋಷಣೆಯ ವಿರುದ್ದ ಬಂಡಾಯವೇಳುವಂತೆ ಮಾಡಿವೆ. ಇಂದು ಅಂತಹ ಬಂಡಾಯಸಾಹಿತ್ಯದ ಮಹಾನ್ ಚೇತನನನ್ನು ಕಳೆದುಕೊಂಡು ಕನ್ನಡ ಸಾಹಿತ್ಯಲೋಕ ಬರಿದಾಗಿದೆ ಎಂದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್ ಮಾತನಾಡಿ ಡಾ.ಸಿದ್ದಲಿಂಗಯ್ಯನವರು ಕೇವಲ ಒಂದು ವರ್ಗಕ್ಕೆ ಸೀಮಿತರಾಗದೆ ಸಮಾಜದ ಶೋಷಿತ ವರ್ಗದ ದ್ವನಿಯಾಗಿ ದಲಿತ ಮತ್ತು ಬಂಡಾಯ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ತಮ್ಮ ಕಾವ್ಯದ ಮೂಲಕ ಮಾಡುತ್ತಿದ್ದವರು.ಅವರನ್ನು ಕಳೆದುಕೊಂಡು ಸಾಹಿತ್ಯಲೋಕದ ಕೊಂಡಿ ಕಳಚಿದಂತಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ಅಧ್ಯಕ್ಷರಾದ ವಸಂತ್ ಹಾರ್ ಗೋಡು ಮಾತನಾಡಿ ನಾಡೋಜ ಡಾ.ಸಿದ್ದಲಿಂಗಯ್ಯನವರು ರಚಿಸಿರುವ ಅದೆಷ್ಟೋ ಕಾವ್ಯಗಳು ಕನ್ನಡ ಚಲನಚಿತ್ರಗಳಲ್ಲಿ ಮಾತ್ರ ಮನ್ನಣೆ ಪಡೆಯದೆ ಜಾನಪದದಂತೆ ಜನರ ಬಾಯಿಯಲ್ಲಿ ಅವರ ಸಾಹಿತ್ಯ ರಾರಾಜಿಸುತ್ತಿದೆ. “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ” ಎಂಬ ಕವಿತೆಯ ಸಾಲು ಭಾರತ ಸ್ವಾತಂತ್ರ್ಯ ಪಡೆದರು ದೇಶದ ಅಸಮಾನತೆಯ ಸಾರವನ್ನು ತಿಳಿಸುವ ಮೂಲಕ ಜನರನ್ನು ಅಸಮಾನತೆಯ ವಿರುದ್ದ ಹೋರಾಟದ ಭಾವನೆಯನ್ನು ತಮ್ಮ ಸಾಹಿತ್ಯದ ಮೂಲಕ ಬೆಳೆಸಿದವರು. ಇಂತಹ ಸಾಹಿತಿಯನ್ನು ಕಳೆದುಕೊಂಡಿರುವುದು ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಎಂದರು.
ಪತ್ರಕರ್ತರು ಹಾಗೂ ಸಾಹಿತಿಗಳಾದ ನಂದೀಶ್ ಬಂಕೇನಹಳ್ಳಿ ಮಾತನಾಡಿ ಶ್ರೀಯುತರು ರಚಿಸಿರುವ ನಾಟಕಗಳು ಸಮಾಜದ ಶೋಷಿತ ವರ್ಗದವರ ಬದುಕನ್ನು ಕಟ್ಟಿಕೊಡುತ್ತವೆ ಅಂತಹ ಅಪರೂಪದ ಸಾಹಿತಿ ಸಿದ್ದಲಿಂಗಯ್ಯನವರು ಎಂದರು.
ಶಿಕ್ಷಕ ಭಕ್ತೇಶ್ ಮಾತನಾಡಿ ಅದೆಷ್ಟೋ ಯುವಮನಸ್ಸುಗಳನ್ನು ತಮ್ಮ ಸಾಹಿತ್ಯದ ಮೂಲಕ ಬದಲಾವಣೆಯತ್ತ ಮುನ್ನಡೆಸಿದ ಕವಿ ಸಿದ್ದಲಿಂಗಯ್ಯನವರು ಎಂದರು.
ಬಿ.ಜೆ.ಪಿ.ಯುವಮೋರ್ಚದ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಕೊಟ್ಟಿಗೆಹಾರ ಮಾತನಾಡಿ ಡಾ.ಸಿದ್ದಲಿಂಗಯ್ಯನವರ ಸಾಹಿತ್ಯ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವವರಿಗೆ ದಿಕ್ಸೂಚಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕಾ ವರದಿಗಾರರಾದ ಅನೀಲ್ ಮೊಂತೆರೊ. ತನು. ಸಂತೋಷ್ ಅತ್ತಿಗೆರೆ. ಸ್ಥಳಿಯರಾದ ಅಭಿಲಾಷ್.ಮಹೇಶ್. ಕೇಶವ್. ಪ್ರವೀಣ್. ಪ್ರದೀಪ್ ರಾಜ್. ಶಂಕರ್ ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!