AVIN TV

Latest Online Breaking News

*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ * ನಗರದ ಪೌರ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರಿಗೆ,N -95 ಮಾಸ್ಕ್ ವಿತರಿಸಿದರು,

Featured Video Play Icon

*ಮುಂದುವರಿದ ಸಹಾಯ ಹಸ್ತ*

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.

ಇಂದು ನಗರದ ಪೌರ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರಿಗೆ, ಪೌರಕಾರ್ಮಿಕರಿಗೆ, ನಗರಸಭೆಯ ಸ್ವಚ್ಛತಾ ಕಾರ್ಯಕರ್ತರಿಗೆ, ಉತ್ತಮ ಗುಣಮಟ್ಟದ N -95 ಮಾಸ್ಕ್ ಗಳನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಎಂ ಎನ್ ಷಡಕ್ಷರಿ ರವರು ವಿತರಿಸಿದರು,

ಪ್ರಸ್ತುತ ಸಂದರ್ಭದಲ್ಲಿ ಸ್ವಚ್ಛತೆ ಅತಿ ಮುಖ್ಯವಾಗಿದ್ದು ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರಿಗೆ ಜಿಲ್ಲಾ ಸಂಸ್ಥೆಯಿಂದ 600 ಮಾಸ್ಕ್ ಗಳನ್ನು ವಿವಿಧ ಇಲಾಖಾವಾರು ಸಿಬ್ಬಂದಿಗಳಿಗೆ ಇಂದು ಬೆಳಗ್ಗೆ ಹಸ್ತಾಂತರಿಸಲಾಯಿತು.

ಶ್ರೀ ರಂಭಾಪುರಿ ಜಗದ್ಗುರು ರೇಣುಕಾಚಾರ್ಯ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಶ್ರೀ ಶೃಂಗೇರಿ ಶಂಕರ ಮಠ ಚಿಕ್ಕಮಗಳೂರು, ಶ್ರೀ ಕೆ. ಪಿ ವಿಶ್ವನಾಥ್ ಬೆಂಗಳೂರು ಹಾಗೂ ಶ್ರೀ ಪಣಿರಾಜ್ ವಕೀಲರು, ಇವರುಗಳು ಮಾಸ್ಕ್ ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ ಇವರಿಗೆ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು

ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್, ಜಿಲ್ಲಾ ಖಜಾಂಚಿ ಶ್ರೀ ರಮೇಶ್, ಜಿಲ್ಲಾ ಸ್ಥಾನಿಕ ಆಯುಕ್ತರು ಶ್ರೀ ಪ್ರಕಾಶ್, ಜಿಲ್ಲಾ ಸಂಘಟಕರು ಗಳಾದ ಕಿರಣ್ ಕುಮಾರ್, ನವೀನ್ ಕುಮಾರ್, ಸ್ಕೌಟ್ ಮಾಸ್ಟರ್ ರಾಘವೇಂದ್ರ, ಗೈಡ್ ಕ್ಯಾಪ್ಟನ್ ಸುಪ್ರಿಯಾ ರವರು ಹಾಜರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!