AVIN TV

Latest Online Breaking News

*ಸಮಾಜ ಸೇವೆ*ಮೂಡಿಗೆರೆ ತಾಲೂಕಿನ ಬಿಳಗುಳದವರಾದ ಆರ್ಮುಗ ಎನ್ನುವ 65 ವರ್ಷ ಪ್ರಾಯದ ಮಲಯಾಳಿ ಜನಾಂಗದ ವರು#avintvcom

Featured Video Play Icon

*ಮುಂದುವರಿದ ಸಮಾಜ ಸೇವೆ*

26/5.2021ರಂದು
ಮೂಡಿಗೆರೆ ತಾಲೂಕಿನ ಬಿಳಗುಳದವರಾದ ಆರ್ಮುಗ ಎನ್ನುವ 65 ವರ್ಷ ಪ್ರಾಯದ ಮಲಯಾಳಿ ಜನಾಂಗದ ವರು,
ಸುಮಾರು ತಿಂಗಳಿಂದ ಬಿಳುಗುಳ ಅಂಬೇಡ್ಕರ್ ಸ್ಕೂಲ್ ಹತ್ತಿರದಲ್ಲಿ ಅನಾಥರಾಗಿ ಬಿದ್ದಿದ್ದ
ಹಾಗೂ ಸರಿಯಾದ ಬಟ್ಟೆ ಗಳಿಲ್ಲದ ಸ್ಥಿತಿಯಲ್ಲಿ ಫುಲ್ ಗಡ್ಡ ಬಿಟ್ಟು ತಲೆಕೂದಲು ಬೆಳೆಸಿ ಮೈಯೆಲ್ಲಾ ಕೊಳೆತು ಸಣ್ಣ ಸಣ್ಣ ಹುಳಗಳು ಮೈ ಮೇಲೆದ್ದು ಒದ್ದಾಡುತ್ತಿದ್ದ ಹಾಗೂ ಹೊಟ್ಟೆಗಿಲ್ಲದೆ ಹಸಿವಿನಿಂದ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಂಡು ಯಾರೊ ಮೂಡಿಗೆರೆಯ ತಾಸಿಲ್ದಾರ್ ಆಫೀಸಿಗೆ ಫೋನ್ ಮಾಡಿದ್ದಾರೆ.
ಅಲ್ಲಿಂದ ಮೂಡಿಗೆರೆಯ ತಹಸಿಲ್ದಾರ್ ಆಫೀಸಿನ ಗಿರೀಶ್ ಎನ್ನುವರು ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು ಅಂದರೆ ನನಗೆ ಫೋನ್ ಮಾಡಿದಾಗ ನಾನು ತಕ್ಷಣ ಸಾಮಾಜಿಕ ಸಕ್ರಿಯ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮತ್ತು ಹಸೈನಾರ್ ಬಿಳುಗುಳ ಮತ್ತು ಮುಸ್ತಫ ಮತ್ತು ಊರಿನ ಕೆಲವರು ಸೇರಿ ಇವರ ಕಟಿಂಗ್ ಶೇವಿಂಗ್ ಮಾಡಿ ಸ್ನಾನ ಮಾಡಿಸಿ ಬಟ್ಟೆ ಧರಿಸಿ ಊಟ ಕೊಡಿಸಿದೆವು. ಮೂಡಿಗೆರೆಯ 108 ಅಂಬುಲೆನ್ಸ್ ಮೂಲಕ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದೇವೆ. ಇದಕ್ಕೆ ನಮ್ಮ ಸಾಮಾಜಿಕ ಸತ್ಯ ಸೇವಾ ತಂಡಕ್ಕೆ ಬಂದು ಮೂಡಿಗೆರೆಯ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರವಿ ಸರ್ ಮತ್ತು ಸಿಬ್ಬಂದಿ ವರ್ಗದವರು ಸಂಪೂರ್ಣ ಸಹಕಾರ ನೀಡಿದರು ಹಾಗೂ ಮೂಡಿಗೆರೆಯ ತಾಸಿಲ್ದಾರರು ಮತ್ತು ಎಂಜಿಎಂ ಆಸ್ಪತ್ರೆಯ ಡಾಕ್ಟರ್ ಮಧುಸೂದನ್ ಡಾಕ್ಟರ್ ವೃಂದ ಮೇಡಂ ಇವರೆಲ್ಲರೂ ನಮಗೆ ತುಂಬಾ ಸಹಕಾರ ನೀಡಿರುತ್ತಾರೆ.

ನಿಮ್ಮ ಸಮಾಜ ಸೇವೆಗೆ ಅಭಿನಂದನೆಗಳು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!