AVIN TV

Latest Online Breaking News

ಅನ್ವರ್ ಹುಸೇನ್. ತಮ್ಮ 15ನೇ ವಯಸ್ಸಿನಲ್ಲಿ ಟೈಲರಿಂಗ್ ವೃತ್ತಿ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.#avintvcom

Featured Video Play Icon

…..ನಿಧನ…….

ಅವರು ಅನ್ವರ್ ಹುಸೇನ್. ತಮ್ಮ 15ನೇ ವಯಸ್ಸಿನಲ್ಲಿ ಟೈಲರಿಂಗ್ ವೃತ್ತಿ ಆರಂಭಿಸಿ ಸುಮಾರು 6 ದಶಕಗಳಿಂದ ದರ್ಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನ್ವರ್ ಸಾಬ್ ಅವರು ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

ಈ ಹಿಂದೆ ಅನ್ವರ್ ಹುಸೇನ್ ಅವರ ಕುರಿತು ಬರೆದ ಅಂಕಣ ಬರಹ ಇಲ್ಲಿದೆ:

ಚಿಂದಿ ಮನಸ್ಸುಗಳ ಜೋಡಿಸಲು ಸೂಜಿ ಹಿಡಿದ ಜೀವ

ಮೂಡಿಗೆರೆಯ ಪ್ರಸಾದ್ ಬ್ಲಾಕ್ ರಸ್ತೆಯ ಅನ್ವರ್ ಟೈಲರ‍್ಸ್ ಎಂದು ಬೋರ್ಡು ಹಾಕಿದ್ದ ಆ ಪುಟ್ಟ ಅಂಗಡಿಯ ಒಳ ಹೊಕ್ಕಾಗ ೭೨ ವರ್ಷದ ಹಿರಿಯ ಜೀವ ಅನ್ವರ್ ಹುಸೇನ್ ಅವರು ಬಟ್ಟೆ ಹೊಲಿಯುವ ಯಂತ್ರದ ಮುಂದೆ ಕುಳಿತು ಬಟ್ಟೆ ಹೊಲಿಯುವುದರಲ್ಲಿ ನಿರತರಾಗಿದ್ದರು.
ತಮ್ಮ ೧೫ನೇ ವಯಸ್ಸಿನಲ್ಲಿ ಟೈಲರಿಂಗ್ ವೃತ್ತಿ ಆರಂಭಿಸಿ ಸುಮಾರು ೬ ದಶಕಗಳಿಂದ ದರ್ಜಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನ್ವರ್ ಹುಸೇನ್ ಅವರನ್ನು ಮಾತನಾಡಿಸಿದಾಗ ತಮ್ಮ ಟೈಲರಿಂಗ್ ವೃತ್ತಿಯ ದಿನಗಳನ್ನು ನೆನಪಿಸಿಕೊಂಡರು.
ಜಗತ್ತಿಗೆ ಬಣ್ಣ ಬಣ್ಣದ ಉಡುಗೆ ತೊಡಿಸುವ ದರ್ಜಿ ಅನ್ವರ್ ಹುಸೇನ್ ಅವರು ತಾವು ಮಾತ್ರ ಹಾಲುಬಣ್ಣದ ಬಿಳಿ ಅಂಗಿ ತೊಟ್ಟು ತಮ್ಮ ಆ ದಿನಗಳ ಬಗ್ಗೆ ಹೇಳುತ್ತಾ ಹೋದರು.
ನಮಗೆ ಎರಡು ಎಕರೆ ಜಮೀನು ಇತ್ತು.
ನಮ್ಮ ತಂದೆ ನಾನು ತುಂಬಾ ಚಿಕ್ಕವನಾಗಿದ್ದಾಗಲೇ ತೀರಿಕೊಂಡ್ರು.
ನಾವು ಮೂರು ಜನ ಮಕ್ಕಳು.
ನಮ್ಮ ತಾಯಿ ತುಂಬಾ ಕಷ್ಟದಿಂದ ಸಾಕಿದ್ರು ನಮ್ಮನ್ನ. ಹುಲ್ಲಿನ ಮನೆಯಲ್ಲಿ ವಾಸ ಇದ್ವಿ.
೮ ರೂಪಾಯಿ ಬಾಡಿಗೆ ಕೊಡ್ತಾ ಇದ್ವಿ.
ಎರಡು ಎಕರೆ ಜಮೀನಿನಲ್ಲಿ ಬರೊ ಆದಾಯ ಸಾಲ್ತಾ ರ‍್ಲಿಲ್ಲ. ಅಪ್ಪ ತೀರಿಕೊಂಡ ನಂತರ ಆ ಎರಡು ಎಕರೆಯಲ್ಲಿ ವ್ಯವಸಾಯ ಮಾಡ್ತಾ ಇದ್ದೆ. ನಾನಾಗ ತುಂಬಾ ಚಿಕ್ಕೋನೂ. ನಮ್ಮ ಮನೆಯ ಪಕ್ಕದಲ್ಲಿದ್ದವರೊಬ್ಬರು ನನ್ನ ಅಮ್ಮನಿಗೆ ನಿಮ್ಮ ಹುಡುಗನಿಗೆ ಕೆಸರಿನಲ್ಲಿ ಮಳೆಯಲ್ಲಿ ಕೃಷಿಭೂಮಿಯಲ್ಲಿ ದುಡಿಯೋದು ಕಷ್ಟ.
ಬೇರೆ ಯಾವುದಾದರೂ ಕಸುಬಿಗೆ ಹಾಕಿ ಅಂದ್ರು. ಆಗ ನನಗೆ ೧೫ ವರ್ಷ ವಯಸ್ಸು. ಬಣಕಲ್‌ನಲ್ಲಿ ನನ್ನ ಸಂಬAಧಿಕರ ಬಳಿ ಟೈಲರಿಂಗ್ ಕಲಿಯೋಕೆ ಅಂತ ಹೋದೆ.
ಅಲ್ಲಿ ನಿಧಾನಕ್ಕೆ ಬಟ್ಟೆ ಹೊಲಿಯೋದನ್ನ ಶುರುಮಾಡ್ದೆ. ಕಲಿಯೋ ಸಮಯದಲ್ಲಿ ಬಿಡುವಿದಾಗ ಎಲೆ ಅಡಿಕೆ ಚೀಲ ಹೊಲಿತ್ತಾ ಇದ್ದೆ. ಹೊಲಿದ ಚೀಲಗಳನ್ನು ಮಾರಿ ಅದರಿಂದ ಬರೋ ದುಡ್ಡನ್ನ ತಾಯಿಗೆ ತಂದು ಕೊಡ್ತಾ ಇದ್ದೆ. ಮೊದಲ ಸಲ ಹೊಲಿಗೆಯಿಂದ ದುಡಿದ ದುಡ್ಡನ್ನ ತಾಯಿಗೆ ತಂದು ಕೊಟ್ಟಾಗ ಅಮ್ಮ ಕಣ್ಣು ತುಂಬಿಕೊಂಡು ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ರು. ಈ ಕೆಲ್ಸದಲ್ಲಿ ನೀನ್ ಒಳ್ಳೆದ್ ಆಗ್ತಿಯಾ ಅಂದಿದ್ರು.
ಆ ನಂತರದಲ್ಲಿ ಮೂಡಿಗೆರೆಯ ಅಂಗಡಿಯೊಂದರ ಮುಂದಿನ ಕಟ್ಟೆಯಲ್ಲಿ ಬಾಡಿಗೆ ಮಿಷನ್ ಇಟ್ಕೊಂಡು ಬಟ್ಟೆ ಹೊಲಿಯೋಕೆ ಶುರು ಮಾಡ್ದೆ. ಮಿಷಿನಿಗೆ ೨ ರೂ ದಿನಕ್ಕೆ ಬಾಡಿಗೆ ಕೊಡ್ಬೇಕಾಗಿತ್ತು. ಒಂದು, ಒಂದುವರೆ ರೂಪಾಯಿ ಉಳಿತ್ತಾ ಇತ್ತು. ಬದುಕು ಹೀಗೆ ಸಾಗ್ತಾ ಇತ್ತು. ಮೂಡಿಗೆರೆಯಲ್ಲಿ ಆಗಷ್ಟೆ ಹೊಸದಾಗಿ ಮೈಸೂರು ಬ್ಯಾಂಕ್ ಶುರು ಆಗಿತ್ತು. ಆ ಬ್ಯಾಂಕಿನಲ್ಲಿ ಬಟ್ಟೆ ಹೊಲಿಯೋ ಮಿಷಿನನ್ನು ಲೋನಿನಲ್ಲಿ ಕೊಡ್ತಾರೆ ಅನ್ನೋ ವಿಷ್ಯ ಗೊತ್ತಾಗಿ ನಾನು ಕೂಡ ಅಪ್ಲಿಕೇಶನ್ ಹಾಕ್ದೆ. ಲೋನ್ ಸ್ಯಾಂಗ್ಷನ್ ಆಗಿ ನನಗೆ ಮಿಷನ್ ಸಿಕ್ತು. ಹೈಸ್ಪೀಡ್ ಮಿಷನ್ ಅದು. ಆಗ ಅದಕ್ಕೆ ೨೫೦೦ ಇತ್ತು. ಈಗ ಅದಕ್ಕೆ ೧೫-೨೦ ಸಾವಿರ ಆಗುತ್ತೆ. ಸ್ವಂತ ಮಿಷನ್ ನಲ್ಲಿ ಮೊದಲ ಬಾರಿಗೆ ಬಟ್ಟೆ ಹೊಲಿದ ಸಂಭ್ರಮ ಇವತ್ತಿಗೂ ನೆನಪಿಸಿಕೊಳ್ತೀನಿ. ತುಂಬಾ ಸಂತೋಷದ ಕ್ಷಣ ಅದು. ಬದುಕನ್ನು ಚಂದವಾಗಿ ಕಟ್ಟಿಕೊಳ್ತೀನಿ ಅನ್ನೋ ಭರವಸೆ ಮೂಡಿದ ಕ್ಷಣ ಅದು. ಹಗಲು ರಾತ್ರಿ ಕೆಲಸ ಮಾಡೋಕೆ ಶುರು ಮಾಡ್ದೆ. ಅಂಗಡಿ ಮುಂದಿನ ಕಟ್ಟೆಯಲ್ಲಿ ಕುತ್ಕೊಂಡು ಮಳೆ ಚಳಿಯ ನಡುವೆ ಬಟ್ಟೆ ಹೊಲಿತ್ತಾ ಇದ್ದೆ. ಇಂದಿನAತೆ ಆಗ ರೆಡಿಮೆಡ್ ಬಟ್ಟೆಗಳು ರ‍್ಲಿಲ್ಲ. ತುಂಬಾ ಕೆಲ್ಸ ರ‍್ತಾ ಇತ್ತು. ಕರೆಂಟ್ ಇಲ್ಲದ ದಿನಗಳು ಅವು. ಲ್ಯಾಂಪ್ ಇಡ್ಕೊಂಡು ರಾತ್ರಿ ಕೆಲ್ಸ ಮಾಡ್ತಾ ಇದ್ವು. ಆ ಕಟ್ಟೆಯಲ್ಲಿ ಕುಳಿತು ೪೩ ವರ್ಷ ಕೆಲಸ ಮಾಡಿದ್ದೇನೆ. ಆ ನಂತರದಲ್ಲಿ ನಾಚಪ್ಪ ಕಾಂಪ್ಲೆಕ್ಸ್ನಲ್ಲಿ ಸ್ವಂತ ಅಂಗಡಿ ಮಾಡ್ದೆ. ನಾಲ್ಕೆöÊದು ಜನ ಅಂಗಡಿಯಲ್ಲಿ ಕೆಲ್ಸ ಮಾಡ್ತಾ ಇದ್ರು. ಈಗ ಕಳೆದ ೧೦ ವರ್ಷದಿಂದ ಕರೆಂಟ್ ಮೋಟರ್ ತಗೊಂಡು ಅದ್ರಲ್ಲಿ ಮಿಷನ್ ಕೆಲ್ಸ ಮಾಡ್ತಾ ಇದ್ದೀನಿ. ಆ ಕಾಲದಲ್ಲಿ ೭ ಜನ ಟೈಲರ್‌ಗಳು ಇದ್ರು. ಅದ್ರಲ್ಲಿ ನಾನು ಕೂಡ ಒಬ್ಬ. ಮಹಿಳಾ ಸಮಾಜದಲ್ಲಿ ಹುಚ್ಚೆಗೌಡ ಅವರ ಮಡದಿ ಪಾರ್ವತಮ್ಮನವ್ರು ಮಹಿಳಾ ಸಮಾಜದ ಅಧ್ಯಕ್ಷರಾಗಿದ್ರು. ಮಹಿಳಾ ಸಮಾಜದಿಂದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕೊಡೋದಕ್ಕೆ ಇಂಟರ್ ವ್ಯೂವ್ ಕರೆದಿದ್ರು. ನಾನು ಕೂಡ ಹೋಗಿದ್ದೆ. ಅದ್ರಲ್ಲಿ ನಾನು ಸೆಲೆಕ್ಟ್ ಆದೆ. ಶನಿವಾರ ಮತ್ತು ಭಾನುವಾರ ಮೂರು ಗಂಟೆಯಿಂದ ಐದು ಗಂಟೆವರೆಗೂ ಅಲ್ಲಿ ಕೆಲಸ ಮಾಡ್ತಾ ಇದ್ದೆ. ೨೫೦ ರೂಪಾಯಿ ಸಂಬಳ ಕೊಡ್ತಾ ಇದ್ರು. ನಾಲ್ಕೈದು ಮಿಷನ್ ಇತ್ತು. ಏಳೆಂಟು ಜನ ಕಲಿಯೋಕೆ ರ‍್ತಾ ಇದ್ರು. ಆಮೇಲೆ ಜನ ಜಾಸ್ತಿ ಆದ್ರು. ಮಿಷಿನ್‌ಗಳನ್ನು ಜಾಸ್ತಿ ರ‍್ಸಿದ್ರು. ನೂರಾರು ಜನ ನನ್ನಿಂದ ಕಲ್ತಿದ್ದಾರೆ. ಹೊಲಿಗೆ ಕ್ಷೇತ್ರದಲ್ಲಿ ದುಡಿದು ಬದುಕು ಕಟ್ಟಿಕೊಂಡಿದ್ದಾರೆ. ಶ್ರೀಮಂತರೂ ಆಗಿದ್ದಾರೆ. ಕಲಿತವರಲ್ಲಿ ಕೆಲವರು ಮನೆಗೆ ಬಂದು ನಿಮ್ಮಿಂದ ಟೈಲರಿಂಗ್ ಕಲ್ತೆ ಅಂತ ನೆನಪು ಮಾಡಿಕೊಳ್ತಾರೆ. ಕಾಲಿಗೆ ಬಿದ್ದು ಆರ್ಶೀವಾದ ಪಡ್ಕೊಳ್ತಾರೆ ಗುರುಗಳು ನೀವು ಅಂತ.
ಪಟಾಪಟ್ಟಿ ಪೈಜಾಮಾ, ಮೂರು ಗುಂಡಿಯ ಶರ್ಟು ಇತ್ತು ಆಗ. ೧೯೬೪ ರಲ್ಲಿ ಅನ್ಸುತ್ತೆ ಪ್ಯಾಂಟ್ ರ‍್ಲಿಕ್ಕೆ ಶುರು ಆಗಿದ್ದು ಇಲ್ಲಿ. ಆಗ ಒಂದು ಪ್ಯಾಂಟ್ ಹೊಲಿದು ಕೊಟ್ಟಿದ್ದಕ್ಕೆ ೨ ರಿಂದ ೩ ರೂಪಾಯಿ ಇತ್ತು, ಆಗ ಸಾಸ್ಕಿನ್, ಉಲ್ಲನ್ ಬಟ್ಟೆಗಳು ಮಾತ್ರ ಇದ್ದಿದ್ದು. ಆ ನಂತರದಲ್ಲಿ ಬೇರೆ ಬೇರೆ ಬರೋದಕ್ಕೆ ಶುರು ಆಯ್ತು. ಕೆಲವರು ಬೆಂಗಳೂರು ಅಥವಾ ಬೇರೆ ಊರುಗಳಿಂದ ಬಂದೋರು ಅಲ್ಲಿಂದ ತಂದ ಹೊಸ ಹೊಸ ತರದ ಬಟ್ಟೆಗಳನ್ನ ತೋರಿಸಿ ಈ ತರ ಹೊಲಿದು ಕೊಡ್ತೀರಾ ಅಂತ ಕೇಳೋರು. ಪ್ರಯತ್ನ ಮಾಡ್ತೀನಿ ಅಂತ ತಗೊಂಡು ಹೊಲಿದು ಕೊಡ್ತಿದ್ದೆ ಎಂದರು ಅನ್ವರ್ ಹುಸೇನ್.
ನಿಮ್ಮ ಬದುಕಿನ ಸಂಭ್ರಮದ ಕ್ಷಣ ಯಾವುದು ಎಂದು ಅವರ ಕಡೆಗೆ ನೋಡಿದೆ. ದುಡಿಮೆ, ಮಕ್ಕಳಿಗೆ ಸಾಕಬೇಕು, ಮದುವೆ ಮಾಡ್ಬೇಕು ಅನ್ನೋದೆ ಇತ್ತು ಮನಸ್ಸಿನಲ್ಲಿ. ಆ ಕ್ಷಣಗಳೆ ನನ್ನ ಬದುಕಿನ ಸಂತೋಷದ ಕ್ಷಣಗಳು ಎಂದು ಹಗಲು ರಾತ್ರಿ ರಾಟೆ ತಿರುಗಿಸಿ ಬದುಕು ಕಟ್ಟಿದ ಕತೆಯನ್ನು ಹೇಳಿದರು ಅನ್ವರ್ ಹುಸೇನ್ ಅವರು.
ಅವರ ಮಾತುಗಳನ್ನು ಕೇಳಿ, …ಚಿಂದಿ ಮನಸ್ಸುಗಳನ್ನು ಜೋಡಿಸಲು ಸೂಜಿ ಇದೆ/ ಗೋಲ ವಿಶ್ವ ದಾರಿ ಸಾಗಲು ರಾಟೆ ಇದೆ/ ಲೋಕ ವಿಕಾರಗಳನ್ನು ಕಡಿದು ಹಾಕಲೆಂದೆ ಕೈಯಲ್ಲಿ ಕತ್ತರಿ/ …ರಟ್ಟೆ ಬೀಳುವ ತನಕ ರಾಟೆ ತಿರುಗಿಸಿ/ ಆರು ಮಕ್ಕಳ ಹಸಿವು ನೀಗಿಸುವ ಅಮ್ಮಿಗೆ/ ಕರುಳ ಕುಡಿಗಳೆಂದರೆ ಕನಸುಗಣ್ಣು/ ಮರುಭೂಮಿಯಲ್ಲೂ ಸಿಗುವ ಹಸಿರುಮಣ್ಣು, ಎಂಬ ಕವಿ ಆರೀಪ್ ರಾಜ ಅವರ ಸಾಲುಗಳು ನೆನಪಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!