AVIN TV

Latest Online Breaking News

ಕೋವಿಡ್-19 ಸೊಂಕಿನ 2ನೇ ಅಲೆ ತೀವ್ರಗೊಂಡಿದ್ದು ಸೂಕ್ತ ಚಿಕಿತ್ಸೆ,ಲಸಿಕೆ,ಆಮ್ಲಜನಕ, ಬೆಡ್ ಗಳ ಕೊರತೆ#avintvcom

Featured Video Play Icon

ಸಿಪಿಐ(ಎಂಎಲ್)ರೆಡ್ ಸ್ಟಾರ್
CPIML-RED STAR
ರಾಜ್ಯ ಸಮಿತಿ-ಕರ್ನಾಟಕ
—————————————-
ದಿನಾಂಕ : 26.05.2021

ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರಕಾರ
ವಿಧಾನಸೌಧ ಬೆಂಗಳೂರು.

ಮನವಿ ಪತ್ರ
(ಮಾನ್ಯ ತಹಶೀಲ್ದಾರರ ಮುಖಾಂತರ)

ಮಾನ್ಯರೇ,
ಕೋವಿಡ್-19 ಸೊಂಕಿನ 2ನೇ ಅಲೆ ತೀವ್ರಗೊಂಡಿದ್ದು ಸೂಕ್ತ ಚಿಕಿತ್ಸೆ,ಲಸಿಕೆ,ಆಮ್ಲಜನಕ, ಬೆಡ್ ಗಳ ಕೊರತೆಯಿಂದಾಗಿ ಸಾವಿರಾರು ಸರಣಿ ಸಾವುಗಳು ರಾಜ್ಯಾದ್ಯಂತ ಸಂಭವಿಸುತಿದ್ದು ರಾಜ್ಯದ ಜನರು ಭಯಬೀತರಾಗುವಂತ ಪರಸ್ಥಿತಿ ನಿರ್ಮಾಣಗೊಂಡಿದೆ.

ಆದರೆ ರೋಗ ನಿಯಂತ್ರಣ ನೆರವು, ಸಾಂತ್ವಾನದ ಬದಲು ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಅವೈಜ್ಞಾನಿಕ ಲಾಕ್ ಡೌನ್ ಗಳನ್ನು ಹೇರುತ್ತ ರಾಜ್ಯದ ಜನರ ಮೇಲೆ ಪೋಲಿಸರಿಂದ ಹಲ್ಲ್ಯೆಗೊಳಿಸುವುದರ ಮೂಲಕ ಸರ್ವಾಧಿಕಾರಿ ಧೋರಣೆ ನೀತಿಯನ್ನು ಅನುಸರಿಸುತ್ತಿದ್ದೀರಿ. ಹಾಗೂ ರೋಗ ತಡೆಗಟ್ಟುವ “ಮಾಸ್ಕ್ ಗಳಿಂದ” ಜನರ ಬಾಯಿಯನ್ನು ಬಂದ್ ಮಾಡಿಸುವ ನಿಮ್ಮ ಧೋರಣೆ ಖಂಡನೀಯವಾದ ದ್ದು. ಜನತೆಯ ಸಂಕಷ್ಟಗಳಿಗೆ, ಸಾವು-ನೋವುಗಳಿಗೆ, ರೋಗ ಹರಡುವಿಕೆಗೆ, ಔಷಧಿಗಳ ಕೊರತೆಗೆ, ನಿಮ್ಮ ಜನ ವಿರೋಧಿ ಆಡಳಿತ ನೀತಿಯೇ ಕಾರಣವಾಗಿದ್ದು, ಮಠ-ಮಂದಿರಗಳಿಗೆ ಸಾವಿರಾರು ಕೋಟಿ ನೀಡುವುದರ ಮೂಲಕ ಆರ್ಥಿಕ ಭದ್ರತೆಯಿಲ್ಲದೆ, ಇಂದು ಇಡೀ ರಾಜ್ಯದ ಜನತೆ ನರಳುವಂತಾಗಿದೆ.

ಹೀಗಾಗಿ ಆಳುವ ಸರಕಾರವಾದ ನೀವು “ಕೊರೋನಾ ತಂದವರೂ ನೀವೆ ! ಸಾವಿರಾರು ಜನರನ್ನು ಕೊಂದವರೂ ನೀವೆ !” ಈಗ ರೋಗ ನಿಯಂತ್ರಣ ದ ಹೆಸರಿನಲ್ಲಿ ಲಾಕ್ ಡೌನ್ ಹೇರಿ ಆರ್ಥಿಕ ಸಂಕಷ್ಟದಲ್ಲಿರುವ ದುರ್ಬಲ ವರ್ಗ, ಅಸಂಘಟಿತ ವಲಯದ ಕಾರ್ಮಿಕರು, ಹೂವು ಹಣ್ಣು ತರಕಾರಿ ಬೆಳೆಗಾರರು ಸೇರಿದಂತೆ ರೈತರಿಗೆ, ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ, ಕ್ಷೌರಿಕರು, ಅಗಸರು, ದರ್ಜಿಗಳು, ಹಮಾಲಿಗಳು, ಚಿಂದಿ ಆಯುವ ವರು, ಕುಂಭಾರರು, ಕಮ್ಮಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕರು ಸೇರಿದಂತೆ ಅಸಂಖ್ಯಾತ ದುಡಿಯುವ ವರ್ಗಕ್ಕೆ ಕೇವಲ 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿರುವುದು “ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಕಿದಂತಾಗಿದೆ” ಹಾಗೂ ಈ ಪ್ಯಾಕೇಜ್ ಮೋಸದ ಪ್ಯಾಕೇಜ್ ಆಗಿದ್ದು ಕೂಡಲೇ ವಿಶೇಷ ಪ್ಯಾಕೇಜ್ ಮೊತ್ತವನ್ನು ಹೆಚ್ಚಿಸಬೇಕೆಂದು ನಮ್ಮ ಪಕ್ಷ ಒತ್ತಾಯಿಸುತ್ತದೆ.

ಹಾಗೂ ಅಗತ್ಯವಿರುವ ಜನ ಸಮೂಹಕ್ಕೆ ನೇರವಾಗಿ ತಲುಪುವಂತೆ ವ್ಯವಸ್ಥೆ ಕಲ್ಪಿಸಲು ಕೋರುತ್ತಾ, ದಿನಾಂಕ : 26.5.2021ರಂದು ರಾಜ್ಯಾದ್ಯಂತ ನಿಮ್ಮ ಕಪಟ ಕೊವಿಡ್ ಪ್ಯಾಕೇಜ್ ವಿರೋಧಿಸಿ ಪ್ರತಿಭಟನಾ ಹೋರಾಟ ರೂಪಿಸಿ ಈ ಕೆಳಗಿನ ಹಕ್ಕೋತ್ತಾಯಗಳನ್ನು ಮುಂದಿಡುತ್ತಿದೆ.

ಹಕ್ಕೋತ್ತಾಯಗಳು :

1.ಕೊರೊನಾ ಕಟ್ಟಿ ಹಾಕುವ ತನಕ ಎಲ್ಲ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಿ !

2.ಆಳುವವರೆ..ಕೊರೊನಾ ತಂದವರೂ ನೀವೆ! ಲಕ್ಷಾಂತರ ಜನರನ್ನು ಕೊಂದವರೂ ನೀವೆ! ಆದ್ದರಿಂದ,ಈ ನಿಮ್ಮ ಕಪಟ ಪ್ಯಾಕೇಜ್ ಹಿಂಪಡೆದು ಎಲ್ಲಾ ಜನರಿಗೆ ಜೀವನದ ಖಾತ್ರಿ ಕೊಡಿ !

3.ಕೊರೋನ ಕಟ್ಟಿ ಹಾಕುವ ತನಕ ಎಲ್ಲಾ ಮಂದಿರ ಮಸೀದಿ ಚಚ್೯ಗಳನ್ನು ಕೊರೊನಾ ಕೇರ್ ಸೆಂಟರ್ ಗಳನ್ನಾಗಿ ಮಾಡಿ !

4. ಕೊರೋನಾ ಕಟ್ಟಿ ಹಾಕುವ ತನಕ ಪ್ರತಿಯೊಂದು ಬಡ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ಪರಿಹಾರ ಕೊಡಿ !

5. ಎಲ್ಲಾ ರೈತ ಕೂಲಿಗಳಿಗೆ ಪ್ರತಿ ತಿಂಗಳ ಆಹಾರ ಪದಾರ್ಥ ಹಾಗೂ 5೦೦೦ ಕೈ ಖರ್ಚು ಕೊಡಿ.

6.ಎಲ್ಲಾ ಕಾರ್ಮಿಕ/ ನೌಕರರಿಗೆ ಸಂಪೂರ್ಣ ಸಂಬಳ ಕೊಡಿ.

7.ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಿ !

8. ಜನತೆಯ ಮೇಲಿನ ಹಲ್ಲ್ಯೆ, ದೌರ್ಜನ್ಯಗಳನ್ನು ನಿಲ್ಲಿಸಿ !

ಬಿ.ರುದ್ರಯ್ಯ
ರಾಜ್ಯ ಕಾರ್ಯದರ್ಶಿ
CPIML-RED STAR

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!