day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj …*ಒಡ್ಯಾಣ*…ನಾಶವೆನ್ನಬೇಕೋ ಇಲ್ಲವೇ ನವೀಕರಣವೆನ್ನಬೇಕೋ ಸಹಜವಾಗಿ ಗೊಂದಲವುಂಟಾಗುದಂತೂ ನಿಜ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

…*ಒಡ್ಯಾಣ*…ನಾಶವೆನ್ನಬೇಕೋ ಇಲ್ಲವೇ ನವೀಕರಣವೆನ್ನಬೇಕೋ ಸಹಜವಾಗಿ ಗೊಂದಲವುಂಟಾಗುದಂತೂ ನಿಜ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

……ಒಡ್ಯಾಣ…

ಬರಹ ಕೃಪೆ.
ಹೆಸಗಲ್ ವೆಂಕಟೇಶ.

ನಾಗರೀಕತೆ ಎಂದರೆ ನಾಶವೆನ್ನಬೇಕೋ ಇಲ್ಲವೇ ನವೀಕರಣವೆನ್ನಬೇಕೋ ಸಹಜವಾಗಿ ಗೊಂದಲವುಂಟಾಗುದಂತೂ ನಿಜ.
ಮಲೆನಾಡೆಂದರೆ ಮೈತುಂಬಾ ಹಸಿರು ಸೀರೆಯನ್ನು ಹೊದ್ದುಕೊಂಡ ಸುಂದರ ನೀರೆಯಂತೆ ಕಂಗೊಳಿಸುವ ಸುಂದರ ಚೆಲುವಿನ ಪ್ರಕೃತಿಯನ್ನೊಳಗೊಂಡ ನಾಡು.
ಕಣ್ಣಿಗೆ ಎಟುಕದಂತೆ ತನ್ನ ಒಡಲನ್ನು ಸಮೃದ್ಧಿಯ ಕಾನನಗಳಿಂದ ವಿಸ್ತಾರವಾಗಿ ವ್ಯಾಪಿಸಿಕೊಂಡು ಸಕಲ ಜೀವ ಸಂಕುಲದ ನೆಲೆಯ ತಾಣವೆ ಮಲೆನಾಡು ಎಂದು ಹೆಮ್ಮೆಯಿಂದ ಕೊಚ್ಚಿಕೊಳ್ಳುವ ಜನರ ಅರಿವಿಗೆ ಈ ಸಿರಿಸಂಪತ್ತು ಇಂಚಿಂಚಾಗಿ ಕಣ್ಮರೆಯಾಗುತ್ತಿರುವ ಸುಳಿವು ಸಿಕ್ಕಿಲ್ಲವೋ ಅಥವಾ ಈ ಕುರಿತು ಜ್ಞಾನವಿದ್ದರೂ ತಾತ್ಸಾರದ ದೋರಣೆಯೋ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

ಜಗತ್ತಿನಲ್ಲಿಯೇ ಬಹಳ ಸುರಕ್ಷಿತವಾದ ಸ್ಥಳವೆಂದು ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಜಿಲ್ಲೆ ಹಲವಾರು ವೈವಿಧ್ಯಮಯವಾದ ಸಂಗತಿಗಳಿಗೆ ಪಾತ್ರವಾಗುತ್ತದೆ.
ಅದರಲ್ಲೂ ಪ್ರವಾಸೋದ್ಯಮದಲ್ಲಿ ತನ್ನದೇ ವಿಶಿಷ್ಟವಾದ ಛಾಪು ಮೂಡಿಸಿರುವ ಚಿಕ್ಕಮಗಳೂರು ಜಿಲ್ಲೆ ‘ಕಾಫಿ’ನಾಡೆಂದು ಪ್ರಖ್ಯಾತಿಗೊಂಡಿದೆ.
ಕಾಫಿನಾಡೆಂದರೆ ಹೆಸರೆ ಸೂಚಿಸುವಂತೆ ಈ ನಮ್ಮ ಕಾಫಿ ನಾಡು ಕರ್ನಾಟಕ ರಾಜ್ಯದಲ್ಲಿಯೇ ಯತೆಚ್ಚವಾಗಿ ಕಾಫಿಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆದು ಮಾರಾಟ ಮಾಡುವುದು ಇಲ್ಲಿನ ಪ್ರಮುಖ ವೃತ್ತಿ ಎನ್ನಬಹುದು.

ಕಾಫಿ ಬೆಳೆಯಲು ಮತ್ತು ಹೆಚ್ಚಾದ ಇಳುವರಿಯನ್ನು ತೆಗೆಯಲು ಕಾಫಿ ತೋಟದ ಮಾಲಿಕರು ಅದಕ್ಕೆ ಪೂರಕವಾದ ವಾತಾವರಣವನ್ನು ಸಿದ್ದಪಡಿಸಲು ಮುಂದಾಗುತ್ತಾರೆ.

ಸಾಮಾನ್ಯವಾಗಿ ಆಯಾಯ ಸಮಯದಲ್ಲಿ ಕಾಫಿ ತೋಟದ ಅಗತ್ಯಕ್ಕೆ ಅನುಗುಣವಾಗಿ ಕೆಲಸಗಳು ಪ್ರಾರಂಭವಾಗುತ್ತವೆ. ಸರ್ವೇಸಾಮಾನ್ಯವೆನಿಸುವ ಗೊಬ್ಬರ ಹಾಕುವುದು ನೀರು ಹಾಯಿಸುವುದು ಔಷದಿ ಸಿಂಪಡಿಸುವ ಕೆಲಸಗಳು ಸಹಜವೆನಿಸಿದರು ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಕಾಫಿ ತೋಟಗಳಲ್ಲಿ ಪ್ರಾರಂಭವಾಗುವ “ಮರಗಸಿ”ಅಂದರೆ ಕಾಫಿ ತೋಟದ ಕಾರ್ಮಿಕರು ಸೊಂಟಕ್ಕೆ ‘ಒಡ್ಯಾಣ’ವನ್ನು ಕಟ್ಟಿಕೊಂಡು ಅರಿತವಾದ ಮಂಡಗತ್ತಿಯನ್ನು ಒಡ್ಯಾಣದಲ್ಲಿ ಸಿಕ್ಕಿಸಿಕೊಂಡು ಮನುಷ್ಯ ರೂಪದ ಮಂಗನಂತೆ ಮರವನ್ನೇರಿ ಮರದ ರೆಂಬೆಕೊಂಬೆಗಳನ್ನು ಕಡಿದು ಮರದಲ್ಲಿ ಎಣಿಸಬಹುದಾದ ರೆಂಬೆಕೊಂಬೆಗಳನ್ನು ಉಳಿಸಿ ಬೋಳು ಬೋಳು ಮಾಡಿ ಕೆಳಗಿಯುತ್ತಾರೆ ಈ ವೃತ್ತಿಯನ್ನು ಮಲೆನಾಡಿನ ಭಾಗದಲ್ಲಿ “ಮರಗಸಿ”ಎಂದು ಕರೆಯುತ್ತಾರೆ.
ಕಾಫಿ ಬೆಳೆಗೆ ಕಾಳು ಮೆಣಸಿನ ಬಳ್ಳಿಗೆ ಅಗತ್ಯವಾಗಿ ಅದರಲ್ಲೂ ರೊಬಸ್ಟಾ ಕಾಫಿ ತಳಿಯು ಹೆಚ್ಚಾದ ಬೆಳಕು ಗಾಳಿಯನ್ನು ತನ್ನ ಬೆಳವಣಿಗೆಗೆ ಅಗತ್ಯವಾಗಿ ಬಯಸುತ್ತದೆ.
ಆದರೆ ಇಳುವರಿಯ ಹೆಚ್ಚಳಕ್ಕಾಗಿ ತೋಟದ ಮಾಲಿಕರು ವರ್ಷದ ಮಾರ್ಚ್ ತಿಂಗಳ ಅಂತ್ಯದಿಂದ ಜೂನ್ ತಿಂಗಳವರೆಗೂ ಸಾಮಾನ್ಯವಾಗಿ ಮರಗಳನ್ನು ಕಡಿದು ಅದರ ಜೀವ ಸಾರವನ್ನು ನಾಶಮಾಡುತ್ತಿರುವುದು ವಿನಾಶದ ಪರಮಾವದಿ ಎನ್ನಬಹುದು.
ನನಗನಸುವುದು ಈ ವಿಧವಾದ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದರೆ ಪ್ರಕೃತಿಯು ಮಾನವ ಜೀವ ಸಂಕುಲದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಉಂಟುಮಾಡುವಲ್ಲಿ ಯಾವುದೇ ಸಂಶಯವಿಲ್ಲ.
ಈ ಸಂದರ್ಭದಲ್ಲಿ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಅರ್ಥಪೂರ್ಣವಾದ ಉಕ್ತಿಯೊಂದು ನೆನಪಿಗೆ ಬರುತ್ತಿದೆ “ಪ್ರಕೃತಿ ನಮ್ಮ ಒಂದು ಭಾಗವಲ್ಲ. ಪ್ರಕೃತಿಯ ಒಂದು ಭಾಗ ನಾವೆಂದು”ಎಷ್ಟು ಸತ್ಯವಾದ ಮಾತು ಅಲ್ವಾ?
ವಿಜ್ಞಾನವು ಯಾವುದೆ ನೂತನ ಆವಿಷ್ಕಾರವನ್ನು ಮಾಡಿದರು ಪ್ರಕೃತಿಯ ಮುಂದೆ ಎಲ್ಲವೂ ಶೂನ್ಯವೆನಿಸುತ್ತದೆ.

ಮಾನವನ ದುರಾಸೆ ಪ್ರಾಕೃತಿಕ ಸಮತೋಲನವನ್ನು ಅಡಿಮೇಲಾಗಿಸಿರುವುದರಿಂದಲೇ ಇಂದು ದಿನೇ ದಿನೇ ಭೂಮಿ ತನ್ನ ಭೌಗೋಳಿಕ ಸಾರವನ್ನು ಕಳೆದು ಕೊಂಡು ಅತಿವೃಷ್ಟಿ ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಮನುಕುಲವನ್ನು ವಿನಾಶದ ತುತ್ತ ತುದಿಗೆ ತಂದು ನಿಲ್ಲಿಸುವ ಪ್ರಕ್ರಿಯೆ ಶುರುವಾಗಿದೆ.

ಆದುದರಿಂದ ಅಗತ್ಯಕ್ಕೆ ತಕ್ಕಂತೆ ಮರಗಿಡಗಳನ್ನು ಕಡಿಯೋದು ಸೂಕ್ತ ಅದಕ್ಕೆ ಬದಲಾಗಿ ಎರಡರಷ್ಟು ಗಿಡಗಳನ್ನು ನೆಟ್ಟು ನಿಸರ್ಗವನ್ನು ತಮ್ಮ ನಿಜವಾದ ಸ್ವರ್ಗವನ್ನಾಗಿ ಪುನಃ ನಿರ್ಮಿಸಿ ಕೊಳ್ಳುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಗುರುತರವಾದ ಕರ್ತವ್ಯವಾಗಬೇಕಿದೆ.

ಇದೆ ರೀತಿ ಮರ ಕಡಿದರೆ ಪ್ರಕೃತಿ ನಾಶ ಖಂಡಿತ.

“ನಮ್ಮನ್ನು ನಿಮ್ಮಂತೆ ಜೀವಿಸಲು ಬಿಡಿ.”
~ಪ್ರಕೃತಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author