AVIN TV

Latest Online Breaking News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು(ಪತ್ರಕರ್ತರು) ಕೋವಿಡ್ ವ್ಯಾಕ್ಸಿನ್ ಪಡೆದರು. #avintvcom

Featured Video Play Icon

ಮಗ್ಗಲಮಕ್ಕಿ ಗಣೇಶ್: ಇಂದು ಕಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು(ಪತ್ರಕರ್ತರು) ಕೋವಿಡ್ ವ್ಯಾಕ್ಸಿನ್ ಪಡೆದರು.

ರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ರಣಕೇಕೆಯ  ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲೆಡೆ ಕಾರ್ಯ ನಿರ್ವಹಿಸುವ ಪತ್ರಕರ್ತರನ್ನು ಕೋವಿಡ್ ಫ್ರಾಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಇಂದು ಪತ್ರಕರ್ತರು ವ್ಯಾಕ್ಸಿನ್ ಪಡೆದರು.

ಇದೆ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಸುಬ್ರಮಣ್ಯ ಮಾತನಾಡಿ, ರಾಜ್ಯದಲ್ಲಿ ಕೆ.ಯು.ಡಬ್ಲ್ಯೂ.ಜೆ.ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ರವರ ಮಾನವೀಯ ಮೇರೆಗೆ ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರನ್ನು ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿರುವದು ಸ್ವಾಗತಾರ್ಹ, ಹಾಗೂ ರಾಷ್ಟ್ರ ಕೋವಿಡ್ ವಿರುದ್ಧ ಸಮರ ಸಾರುವ ಈ ಸಂದರ್ಭದಲ್ಲಿ  ಸಾಮಾಜಿಕ ಅಂತರ,ಮಾಸ್ಕ್ ದರಿಸುವುದರ ಜೊತೆಗೆ, ವ್ಯಾಕ್ಸಿನ್ ಪಡೆಯಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೆ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಶಿಧರ್ ಮಾತಾನಾಡಿ ಕೊರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗದರ್ಶನಗಳ ಜೊತೆಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕೊರೊನಾ ವಿರುದ್ಧ ಮಾರ್ಗದರ್ಶನಗಳನ್ನು ಪಾಲಿಸಬೇಕೆಂದರು ಹಾಗೂ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಪತ್ರಕರ್ತರ ಕುಟುಂಬಗಳು ಕಷ್ಟದಲ್ಲಿದ್ದು ಪರಿಹಾರ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು ,ಜಿಲ್ಲಾ ಉಪಾಧ್ಯಕ್ಷ,ಜಗದೀಶ್, ಪ್ರದಾನ ಕಾರ್ಯದರ್ಶಿ ಕೃಷ್ಣ ರಾಮಪ್ಪ, ಬೈರೇಶ್, ಬಂಜೆನಹಳ್ಳಿ ನಾಗರಾಜ್,ಹೆಚ್.ವಿ.ರಾಮಪ್ಪ,ನಾಗೇಂದ್ರಪ್ರಸಾದ್,ಸುಬ್ರಮಣ್ಯ ಮತ್ತಿತರರಿದ್ದರು.

ಮಗ್ಗಲಮಕ್ಕಿ ಗಣೇಶ್: ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!