AVIN TV

Latest Online Breaking News

#ಮಾಸ್ಕ್_ಎಂಬ_ಭ್ರಮೆ#ಆದ್ರೆ ಇಡೀ ಪ್ರಪಂಚವೇ ಮಾಸ್ಕ್ ಇಲ್ಲದೆ ಬದುಕಲ್ಲ ಅನ್ನೋದನ್ನ ಊಹಿಸಿರಲಿಲ್ಲ.#avintvcom

Featured Video Play Icon

#ಮಾಸ್ಕ್ಎಂಬಭ್ರಮೆ#

ಬರಹ ಕೃಪೆ. – ಶಿವು ದಾರದಹಳ್ಳಿ

ಅದು ಏನು ಅಲ್ಲ ಪುಸ್ತಕ ನೋಡುತ್ತಿದ್ದಂತೆ ಥಟ್​ ಅಂತಾ ಮಾಸ್ಕ್​​ ಒಂದು ಕೆಳಗೆ ಬಿತ್ತು..
ಅಯ್ಯೋ ಇದು ನಂದೆ ಅಲ್ವಾ ಅನ್ನಿಸ್ತು.
ಆಗಲೇ ಗೊತ್ತಾಗಿದ್ದು, ಅದು ಸುಮಾರು 6 ತಿಂಗಳ ಹಳೆಯದು ಅಂತಾ.
ಆದ್ರೆ ಅದನ್ನೂ ಬರೀಬೇಕು ಅಂಥ ಅನ್ನಿಸಿ ಬಿಡ್ತು. ಯಾಕಂದ್ರೆ ಮಾಸ್ಕ್​​​ ವಿಚಾರ ಹೇಳಿದ ತಕ್ಷಣ ನೆನ್ಪಾಗಿದ್ದು, ಕಳೆದ 2 ವರ್ಷಗಳ ಹಿಂದಿನ ಸಣ್ಣ ಘಟನೆ..
ಇದೇ ಮಾಸ್ಕ್​, ಆಗ​ ದೊಡ್ಡ ಕಾಮಿಡಿ ಪೀಸ್​ ಆಗಿತ್ತಲ್ಲ ಅನ್ನಿಸ್ತು..
ಅದೇನೆಂದ್ರೆ ನನಗೆ ಒಂದು ಹುಡ್ಗಿ ಪರಿಚಯ ಇದ್ಲು. ಅವ್ಲು ಬಟ್ಟೆ ಗಾರ್ಮೆಂಟ್ಸ್​​ನಲ್ಲಿ ಕೆಲ್ಸ ಮಾಡ್ತಾ ಇದ್ಲು. ಆ ಸಮಯದಲ್ಲಿ ನನ್ನ ಮಾತನ್ನ ಅವ್ಳು ಚಾಚೂ ತಪ್ಪದೆ ಪಾಲಿಸ್ತಾ ಇದ್ಲು. ಆಗ ಅವ್ಳು ನನ್ ಜೊತೆ ಅವ್ಳ ಕಷ್ಟ ಎಲ್ಲಾ ಹೇಳ್ತಾ ಇದ್ಲು. ಬಹಳ ಆತ್ಮೀಯತೆಯಿಂದ ಇದ್ವಿ..

ಅವ್ಳು ಕೆಲ್ಸ ಮಾಡೋ ಗಾರ್ಮೆಟ್ಸ್ ನಲ್ಲಿ ಬಟ್ಟೆಯ ಧೂಳು ದಿನಾ ಅವ್ಳ ಪ್ರಾಣ ಹಿಂಡ್ತಾ ಇತ್ತಂತೆ. ಹೀಗಾಗಿ ಯಾವಾಗಲೂ ಶೀತ ಆಗಿ, ತಲೇನೋವ್​ ಬರ್ತಾ ಇತ್ತಂತ್ತೆ.
ಒಂದು ಎರಡು ದಿನ ಆದ್ರೆ ಪರ್ವಾಗಿಲ್ಲ. ಆಸ್ಪತ್ರೆಗೆ ಹೋಗಿ ಸರಿ ಮಾಡ್ಕೋಬಹುದಿತ್ತು. ಆದ್ರೆ ದಿನ ಇದೇ ಗೋಳು ಆದ್ರೆ ಏನ್ಮಾಡೋದು ಅಂತ ಇದ್ಲು.
ಪಾಪಾ ನಾನು ಅವ್ಳ ಕಷ್ಟ ನೋಡಿ ಕರಗಿ ಹೋಗ್ತಿದ್ದೆ. ಅಯ್ಯೋ ಆ ಕೆಲಸ ಬಿಟ್ಟು ಬೇರೆ ನೋಡು ಅಂತ್ತಿದ್ದೆ. ಇಲ್ಲಾ ನಾನೇ ಬೇರೆ ಕೆಲಸ ಕೊಡಿಸ್ತೀನಿ ಬಾ ಅಂತಿದ್ದೆ. ಆದ್ರೆ ಅವ್ಳು ಅವ್ರ ಚಿಕ್ಕಪ್ಪನ ಮನೇಲಿ ಇದ್ದಿದ್ರಿಂದ ಅವಳ ಗಾರ್ಮೆಂಟ್ಸ್​ಗೂ ಅವಳ ಮನೆಗೂ ​ಹತ್ತಿರ ಆಗ್ತಿತ್ತು.. ಹಾಗಾಗಿ ಕಷ್ಟ ಆದ್ರೂ ಅಲ್ಲೇ ಕೆಲಸ ಮಾಡ್ತಿದ್ಲು.

ಹೀಗೆ ಒಂದು ದಿನ ಅವ್ಳಿಗೆ ನಾನು ಸಣ್ಣ ಸಲಹೆ ಕೊಟ್ಟೆ. ಅದೇನು ಅಂದ್ರೆ ಒಂದು ಮಾಸ್ಕ್ ತಗೊಂಡು ಹಾಕಿಕೋ ಅನ್ನೋದು. ನಾನು ಹೇಳಿದೆ ಅಂತ ಮೆಡಿಕಲ್ ಗೆ ಹೋಗಿ ಮಾಸ್ಕ್ ತಂದು ಒಂದು ದಿನ ಪೂರ್ತಿ ಹಾಕಿ ಕೆಲ್ಸ ಕೂಡ ಮಾಡಿದ್ಲು..
ಕೆಲ್ಸ ಮುಗಿಸಿ ಸಂಜೆ ಮನೆಗೆ ಬಂದ ತಕ್ಷಣ ನನ್ಗೆ ಕಾಲ್ ಮಾಡಿದ್ಲು.. ಈಗ ಓಕೆನಾ ಅಂದೆ. ಅದ್ಕೆ ಅವ್ಳು ಅಯ್ಯೋ ಅದೆಂತ ಕರ್ಮ.. ಮಾಸ್ಕ್ ಬೇಡ ಏನೂ ಬೇಡ.. ದಿನ ಪೂರ್ತಿ ಶೆಕೆ ಆಯ್ತು ಗೊತ್ತಾ. ಉಸಿರಾಡೋಕೆ ಆಗ್ತಿರಲಿಲ್ಲ. ಎಷ್ಟು ಕಷ್ಟ ಆಯ್ತು ಗೊತ್ತಾ..? ಅಷ್ಟೇ ಅಲ್ಲ, ನಾನು ಮಾಸ್ಕ್ ಹಾಕಿನಿ ಅಂತ ಅಲ್ಲಿನ ವರ್ಕರ್ಸ್ ಎಲ್ಲಾ ನನ್ನನ್ನೇ ತಿನ್ನೋ ತರ ನೋಡ್ತಾ ಇದ್ರು ಗೊತ್ತಾ.. ಎಷ್ಟು ಹಿಂಸೆ ಆಯ್ತು ಅಂದ್ರೆ.. ಕೊನೆಗೂ ಮಾಸ್ಕ್ ಕಿತ್ತು ಎಸೆದೆ ಅಂತ ಗುರ್ರ್ ಅಂದ್ಲು..

ಅಯ್ಯೋ ಇನ್ನೇನು ಮಾಡ್ತಿಯ.. ನಾಳೆಯಿಂದ ಹಂಗೆ ಡ್ಯೂಟಿಗೆ ಹೋಗು ಎಂದೆ. ಆ ಬಳಿಕ ಅವ್ಳು ಬೆಂಗಳೂರು ಬಿಟ್ಟು ಹಳ್ಳಿಗೆ ಬಂದು ಯಾವುದೋ ಪ್ರೈವೇಟ್ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡೋಕೆ ಶುರು ಮಾಡಿದ್ಲು..

ಕಾಲ ಎಷ್ಟು ಬದಲಿಸಿ ಬಿಡ್ತು ನೋಡಿ. ಕಳೆದ ವರ್ಷ ಕಾಲಿಟ್ಟ ಡೆಡ್ಲಿ ವೈರಸ್ ಕೊರೊನ ಇಡೀ ಮನುಕುಲಕ್ಕೆ ದೊಡ್ಡ ಪಾಠ ಕಲಿಸ್ತು. ಎಲ್ಲವೂ ತತ್ ತಕ್ಷಣ ಗತಿಸಿ ಹೋಯ್ತು. ಒಂದು ಕಾಲದಲ್ಲಂತೂ ಮಾಸ್ಕ್ ಪರಿಕಲ್ಪನೆಯೇ ಇರಲಿಲ್ಲ..
TV ಯುಗ ಆರಂಭದ ಬಳಿಕ, ಡಾಕ್ಟರ್ ಆಪರೇಷನ್ ಮಾಡುವಾಗ ಇದನ್ನ ಹಾಕಿಕೊಳ್ತಾರೆ ಅಂತ ಅರಿತುಕೊಂಡಿದ್ವಿ. ಆದ್ರೆ ಇಡೀ ಪ್ರಪಂಚವೇ ಮಾಸ್ಕ್ ಇಲ್ಲದೆ ಬದುಕಲ್ಲ ಅನ್ನೋದನ್ನ ಯಾವತ್ತೂ ಊಹಿಸಿರಲಿಲ್ಲ.
2 ವರ್ಷಗಳ ಹಿಂದೆ ಮಾಸ್ಕ್ ಹಾಕಿದ್ದವರನ್ನ ವಿಶೇಷವಾಗಿ ನೋಡ್ತಾ ಇದ್ದ ಅದೇ ಜನ, ಈಗ ಮಾಸ್ಕ್ ಹಾಕದೇ ಇದ್ದವನನ್ನ ದಿಟ್ಟಿಸಿ ನೋಡೋ ತರ ಆಗಿದೆ.

ಮಾಸ್ಕ್ ಅಂದ್ರೆ ಏನು ಅಂತ ಗೊತ್ತಿಲ್ಲದವರಿಗೆ ಮಾಸ್ಕ್ ಇಲ್ಲದೇ ಅವ್ರೇ ಇಲ್ಲ ಅನ್ನೋ ತರ ಆಗಿದೆ..
ಅದ್ರ ಜೊತೆ N95 ಅನ್ನೋ ಪ್ರತಿಷ್ಠೆ ಬೇರೆ. ಅದನ್ನ ಹಾಕಿದ್ರೆ ಮಾತ್ರ ಹಣವಂತರು ಅನ್ನೋ ಪಟ್ಟ ಬೇರೆ..!!
ದಿನಾ ಅದನ್ನೂ ಬದಲಿಸಲು ಆಗಲ್ಲ ಅಂತ ತಿಳಿದ ಮೇಲೆ ಅವ್ರು ಕೂಡ ಈಗ ತೆಪ್ಪಗಿದ್ದಾರೆ.

ನಮ್ ಜನ ಅಂತೂ ಕೊರೊನ ಹರಡುತ್ತೆ ಅನ್ನೋ ಭಯಕ್ಕಿಂತ, ಜನ ಏನು ಅಂದುಕೊಳ್ತಾರೆ ಅನ್ನೋ ಭಯಕ್ಕೆ, ಮಾಸ್ಕ್ ಹಾಕಿಕೊಳ್ಳುವವರೇ ಹೆಚ್ಚು. ಅದ್ರ ಗುಣಮಟ್ಟ ಅಲ್ಲಿ ಲೆಕ್ಕಕ್ಕೆ ಬರಲ್ಲ.. ಅವನು ಮಾಸ್ಕ್ ಹಾಕಿದ್ದಾನಾ ಅನ್ನೋದು ಅಷ್ಟೇ ಲೆಕ್ಕಾ. ಅದ್ರಲ್ಲೂ ಈ ಮಾಸ್ಕ್ ಹಾಕಿ, ನಮಗೆ ಕೊರೊನಾ ಬರೋದೆ ಇಲ್ಲ ಅಂತ ಬೀಗುತ್ತಾ ತಿರುಗೋರನ್ನ ಕಂಡ್ರೆ ನಗು ಬರುತ್ತೆ. ಅವ್ರು ಕಾಮಿಡಿ ಪೀಸ್ ತರ ಕಾಣೋದ್ರಲ್ಲಿ ಎರಡು ಮಾತಿಲ್ಲ.. ಇದನ್ನೇ ಬಂಡವಾಳ ಮಾಡಿಕೊಂಡಿರೋ ಟೈಲರಿಂಗ್ ಮಾಡೋ ಮಂದಿ, ಅಳಿದುಳಿದ ಬಟ್ಟೆ ಪೀಸ್ ಗಳಿಂದ ಕಡಿಮೆ ಗುಣಮಟ್ಟದ ಮಾಸ್ಕ್ ತಯಾರಿಸಿ ಕಡಿಮೆ ಬೆಲೆಗೆ ಮಾರಿ ಹಣ ಮಾಡ್ತಿದ್ದಾರೆ.

ಹೀಗೆ ಮೊನ್ನೆ ಮೊನ್ನೆ ಒಬ್ಬರು ನನ್ನ ಬಳಿ ಮಾತಾಡ್ತಾ ಇದ್ರು. ಕೊರೊನ ಬಂದಿರೋ ವ್ಯಕ್ತಿಗಳ ಜೊತೆ ಮಾತಾಡಿದ್ರೆ ನಮ್ ಊರಿನವರು ಬೈತಾರೆ.. ಅದ್ಕೆ ನಾನು ಅವರನ್ನ ಕದ್ದು ಮಾತಾಡಿಸಿದೆ ಅಂದ್ರು.. ಆಗ ಅವರ ಉದಾರ ಭಾವನೆ ನೋಡಿ ಖುಷಿ ಆಯ್ತು, ಕೊರೊನಾ ರೋಗಿ ಜೊತೆಗಿದ್ದ ಆತ್ಮೀಯತೆ ಅರ್ಥ ಆಯ್ತು.. ಆದ್ರೆ ನನಗನ್ನಿಸಿದ್ದು, ಕೋವಿಡ್ ರೋಗಿಗಳ ಜೊತೆ ಯಾಕೆ ಮಾತಾಡಬಾರದು..? ಮಾತಾಡಿದ್ರು ಹೇಗೆ ಮಾತಾಡಬೇಕು..? ಅವರ ಬಳಿ ಎಷ್ಟು ಅಂತರ ಕಾಯ್ದುಕೊಳ್ಳಬೇಕು..?
ಅವರನ್ನ ಮಾತಾಡಿಸಿದ ತಕ್ಷಣ ಕೊರೊನಾ ಬರುತ್ತಾ..?
ಕೊರೊನ ‘ವೈರಸ್’ ಒಂದು ವಸ್ತು ಮೇಲೆ ಎಷ್ಟು ದಿನ ಜೀವಂತ ಇರುತ್ತೆ..?
ಒಬ್ಬ ರೋಗಿಯ ಸಂಪರ್ಕದ ಬಳಿಕ ಇನ್ನೊಬ್ಬ ವ್ಯಕ್ತಿಗೆ ಎಷ್ಟು ದಿನದೊಳಗೆ ಕೊರೊನ ಲಕ್ಷಣ ಕಾಣಿಸಿಕೊಳ್ಳುತ್ತೆ..?
14 ರಿಂದ 17 ದಿನ ಯಾಕೆ ಕ್ವಾರಂಟೈನ್ ಮಾಡ್ತಾರೆ..?

ಇದ್ಯಾವುದು ಹಳ್ಳಿಲಿ ಇರೋ ಜನಕ್ಕೆ ಅರಿವಿಲ್ಲ ಅನ್ನಿಸ್ತು.. ಈ ಮಹಾಮಾರಿ ವೈರಸ್ ಕಾಲಿಟ್ಟು 2 ವರ್ಷಗಳಾಗ್ತಾ ಬಂತು.. ಅದೆಷ್ಟು ಜಾಗೃತಿ ಮೂಡಿಸಿದ್ರೂ, ಕೊರೊನಾ ಕಾಲರ್ ಟ್ಯೂನ್ ಹಾಕಿ ವರ್ಷವಿಡೀ ಚಿತ್ರಹಿಂಸೆ ಕೊಟ್ರು, ಜನಕ್ಕೆ ಕೋರೋನಾ ಬಗ್ಗೆ ಇನ್ನೂ ಅರಿವು ಬಂದಿಲ್ಲ ಅನ್ನಿಸ್ತು. ಪಾಪ ಅವಿದ್ಯಾವಂತರು ಏನ್ ಮಾಡ್ತಾರೆ ಅಲ್ವ..? ಆದ್ರೆ ವಿದ್ಯಾವಂತರೇ ಆ ತರ ಮಾಡಿದ್ರೆ ಏನನ್ನಬೇಕು..??

ಮೊನ್ನೆ ಮೊನ್ನೆ ನಮ್ಮ ಪಕ್ಕದ ಊರಿನ ಒಬ್ಬ ಹುಡುಗ ಅಣ್ಣಾ ಮದ್ವೆಗೆ ಬನ್ನಿ ಅಂತ ಮೆಸೇಜ್ ಹಾಕಿದ್ದ.. ಅಷ್ಟೇ ಅಲ್ಲ ಲಾಕ್ದೌನ್ ಮತ್ತು ಕೊರೊನಾ ಹೆಚ್ಚಳದ ಅರಿವಿದ್ರೂ ಮನೆ ಮನೆಗೆ ಬಂದು ಮದ್ವೆ ಕಾರ್ಡ್ ಕೊಟ್ಟು ಹೋದ.. ಜೊತೆಗೆ ನಮ್ಮ ಮಲೆನಾಡು ಭಾಗದಲ್ಲಿ ಈ ಸಮಯದಲ್ಲಿ ಸುಗ್ಗಿಹಬ್ಬ ಬೇರೆ ಜೋರಾಗಿ ನಡೆಯುತ್ತೆ.. 12 ದಿನಗಳ ಕಾಲ ನಡೆಯೋ ಹಬ್ಬವನ್ನು ನಮ್ಮ ಮಹಾಜನಗಳು ಅದೇನು ಸಡಗರದಿಂದ ಆಚರಿಸುತ್ತಾ ಇದ್ದಾರೆ ಗೊತ್ತಾ..?!! ಮೂಡಿಗೆರೆ ಭಾಗದಲ್ಲಿ ಬಂದು ಈಗ ನೀವು ನೋಡ್ಬೇಕು ಅದೆಷ್ಟು ನಿಷ್ಠೆಯಿಂದ ಆಚರಿಸ್ತಾ ಇದ್ದಾರೆ ಅಂತ.

ಅಂತವರನ್ನ ನೋಡಿದ್ರೆ ಎಲ್ಲಿಲ್ಲದ ಕೋಪ ನೆತ್ತಿಗೆ ಏರುತ್ತೆ . ಅಷ್ಟೇ ಅಲ್ಲ, ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 20ರಿಂದ 30ರ ಒಳಗೆ 200ಕ್ಕೂ ಹೆಚ್ಚು ಮದುವೆಗಳು ನೋಂದಣಿ ಆಗಿವೆ. ಇದ್ರ ಜೊತೆಗೆ ಬರ್ತ್ ಡೇ ಆಚರಣೆ ಕೇಳಬೇಕಾ..? ಒಂದೆರಡು ಜನ ಮಾತ್ರ ಸೇರಿಸ್ತೀವಿ ಅಂತ ಇಡೀ ಊರಿನವರನ್ನ ಸೇರಿಸಿ ಸದ್ದಿಲ್ಲದಂತೆ ಆಚರಣೆ ಮಾಡ್ತಾ ಇದ್ದಾರೆ.. ಎಂಥ ದುರಂತ ಅಲ್ವಾ..??

ಇಂಥ ಸಮಾರಂಭಗಳಿಗೆ ಅಷ್ಟು ಜನ ಸೇರೋಕೆ ಕಾರಣ ಇಷ್ಟೇ. ನಾನು ಮಾಸ್ಕ್ ಹಾಕಿನಿ ಅಂತ.. ಆ ಮಾಸ್ಕ್ ನಿಂದ ಎಷ್ಟರ ಮಟ್ಟಿಗೆ ಕೊರೊನ ವೈರಸ್ ನಿಂದ ರಕ್ಷಣೆ ಸಿಗುತ್ತೆ ಅನ್ನೋ ಅರಿವಿಲ್ಲ. ಆದ್ರೆ ಎದೆ ಹುಬ್ಬಿಸಿಕೊಂಡು, ನಾನು ಮಾಸ್ಕ್ ಹಾಕಿನಿ ಕೊರೊನ ಬರಲ್ಲ ಅಂತ ಸಿಕ್ಕಿದ ಕಡೆ ಕದ್ದು ಕದ್ದು ತಿರುಗ್ತಾ ಇದ್ದಾರೆ.. ಹಳ್ಳಿಗಳ ಒಳದಾರಿಗಳು ಕೇಳಬೇಕಾ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೋಗೋ ಜನರನ್ನ ಕೇಳಬೇಕಾ.. ಪೊಲೀಸರು ಇಂಥ ಸ್ಥಳದಲ್ಲೇ ಬರ್ತಾ ಇದ್ದಾರೆ ಅಂತ ಸಿಗ್ನಲ್ ಕೊಡೋ ಜನರನ್ನ ಕೇಳ್ಬೇಕಾ…!! ಹಬ್ಬಾಬ್ಬ….

ಇಷ್ಟೆಲ್ಲಾ ಮಾಡ್ತಾ ಬೀಗೋಕೆ ಕಾರಣ ಇಷ್ಟೇ.. ನಾನು ಮಾಸ್ಕ್ ಹಾಕಿನಿ ನನ್ಗೆ ಕೊರೊನಾ ಬರಲ್ಲ ಅಂತ. ಇಲ್ಲಿ ಮಾಸ್ಕ್ ಅನ್ನೋದು ಎಷ್ಟು ತಮಾಷೆಯಾಗಿ ಕಾಣ್ತಾ ಇದೆ ಅಲ್ವಾ..??

ಏನೇ ಆಗ್ಲಿ ಮಾಸ್ಕ್ ಹಾಕಿರುವ ನೆಪದಲ್ಲಿ ನನ್ಗೆ ಕೊರೊನಾ ಬರಲ್ಲ ಎಂಬ ಭ್ರಮೆ ಬಿಡಿ. ಮನೆಯಲ್ಲೇ ಇರಿ ಸುರಕ್ಷಿತವಾಗಿ ಇರಿ. ಕೊರೊನಾ ವೈರಸ್ ಹೇಗೆ ಹರಡುತ್ತೆ, ಸೋಂಕು ಅಟ್ಯಾಕ್ ಆದ್ರೆ ಏನು ಮಾಡಬೇಕು ಅಂತ ತಿಳಿದುಕೊಳ್ಳಿ.. ಆದ್ರೆ ಮಾಸ್ಕ್ ಹಾಕೋದನ್ನೂ ಮರೀಬೇಡಿ.

ಸಾಮಾಜಿಕ ಅಂತರವೇ ನಮಗೆ ಶ್ರೀರಕ್ಷೆ.. ಒಳ್ಳೆಯದಾಗ್ಲಿ 🤝

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

 

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!