day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ನೈಜ ಹೋರಾಟಗಾರರ ವೇದಿಕೆ* *ಶಾಸಕಾಂಗದ ವ್ಯಕ್ತಿಗಳು ಹೀಗೇಕೆ ವರ್ತಿಸುತ್ತಿದ್ದಾರೆ?*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ನೈಜ ಹೋರಾಟಗಾರರ ವೇದಿಕೆ* *ಶಾಸಕಾಂಗದ ವ್ಯಕ್ತಿಗಳು ಹೀಗೇಕೆ ವರ್ತಿಸುತ್ತಿದ್ದಾರೆ?*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನೈಜ ಹೋರಾಟಗಾರರ ವೇದಿಕೆ

ಸಂವಿಧಾನ, ಪ್ರಜಾಪ್ರಭುತ್ವ, ನ್ಯಾಯಾಂಗ ಕಾರ್ಯಾಂಗ ಜನಪ್ರತಿನಿಧಿ

ಒಂದು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ವ್ಯಕ್ತಿ ಇಡೀ ಕ್ಷೇತ್ರದ ಮಾಲೀಕನಂತೆ ವರ್ತಿಸುತ್ತಿರುವುದು ಮತದಾರರ ಆಶಯಗಳ ವಿರುದ್ಧವಾಗಿದೆ. ಕ್ಷೇತ್ರದಲ್ಲಿ ಹಲವಾರು ಜನ ಚುನಾವಣೆಗೆ ಸ್ಪರ್ಧಿಸಿರುತ್ತಾರೆ. 50% ರಷ್ಟು ಜನ ಮತದಾನ ಮಾಡಿದರೆ ಉಳಿದ 50% ರಷ್ಟು ಜನ ಮತದಾನ ಮಾಡಿರುವುದಿಲ್ಲ. ಸ್ಪರ್ಧಿಸಿ ಸೋತವರಮತಗಳನ್ನು ಮತ್ತು ಮತದಾನ ಮಾಡದಿರುವ ಮತಗಳನ್ನು ಒಟ್ಟುಗೂಡಿಸಿದರೆ ಗೆದ್ದ ಅಭ್ಯರ್ಥಿಯ ಮತಗಳು ತೀರ ಕಡಿಮೆಯಾಗಿರುತ್ತದೆ.
ಮತಗಳ ಸಂಖ್ಯೆಗಳ ಆಧಾರದಲ್ಲಿ ಗೆದ್ದ ವ್ಯಕ್ತಿ ಆ ಕ್ಷೇತ್ರದ ಮಾಲಿಕ ನಂತೆ ಹೇಗೆ ವರ್ತಿಸುತ್ತಾನೆ ಎಂದರೆ ನೋಡಿ.

ಒಬ್ಬ ಶಾಸಕಾಂಗದ ಸದಸ್ಯನಾಗಿ ರಾಜ್ಯದ ನಾಗರಿಕರ ಹಿತದೃಷ್ಟಿಯಿಂದ ಶಾಸನಗಳನ್ನು ರಚನೆ ಮಾಡುವುದು ಮತ್ತು ಶಾಸನಗಳಿಗೆ ತಿದ್ದುಪಡಿ ತಂದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ರೂಪಿಸುವುದು ಆತನ ಕೆಲಸ
. ಹೀಗೆ ರಚನೆಯಾದಶಾಸನಗಳನ್ನು ಅನುಷ್ಠಾನಗೊಳಿಸುವುದು ಕಾರ್ಯಾಂಗದ ಕೆಲಸ ಇದನ್ನು ತಿಳಿದುಕೊಳ್ಳುವಷ್ಟು ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಕಾರ್ಯಾಂಗದಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಾ ಕಾರ್ಯಾಂಗದ ಅಧಿಕಾರಿಗಳು ನನ್ನ ಕೈಕೆಳಗಿನ ಜೀತದಾಳುಗಳು ಎಂದೇ ಭಾವಿ ಸುತ್ತಿರುವ ಈ ಶಾಸಕಾಂಗದ ಸದಸ್ಯ ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಹೇಳತೀರದಷ್ಟು ಹಸ್ತಕ್ಷೇಪ ಮಾಡುತ್ತಾ ಅವರ ತಂದೆ ತಾಯಿಯಿಂದ ಮತ್ತು ಪೂರ್ವಜರ ಮನೆಯಿಂದ ತಂದ ಆಸ್ತಿ ಇಂದ ಕ್ಷೇತ್ರದ ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂಬ ಅಹಂನಿಂದ ವರ್ತಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿರುತ್ತದೆ.
ಶಾಸಕಾಂಗದಲ್ಲಿರುವ ಸದಸ್ಯರುಗಳು ಕಾರ್ಯಾಂಗದಲ್ಲಿ ಹೇಳತೀರದ ಹಸ್ತಕ್ಷೇಪ ಗಳನ್ನು ಮಾಡುತ್ತಿದ್ದರು *ಕಾರ್ಯಾಂಗದಲ್ಲಿನ ಹಿರಿಯ ಅಧಿಕಾರಿಗಳು ಬಾಯಿ ಮುಚ್ಚಿ ಕೊಂಡಿರುವುದೇ ಇವರ ಉದ್ಧಟತನಕ್ಕೆ ಕಾರಣವಾಗಿದೆ.
ಶಾಸಕಾಂಗದ ಮುಖ್ಯಸ್ಥನೇ ಕಾರ್ಯಾಂಗದ ಮುಖ್ಯಸ್ಥನಿಗೆ ನೀವೆಲ್ಲ ಕಳ್ಳರು ಎಂದು ಹೇಳಿದಾಗಲೂ ಕಾರ್ಯಾಂಗ ಮುಖ್ಯಸ್ಥರು ಮೌನವಹಿಸಿರುವುದು ನೋಡಿದರೆ ಭ್ರಷ್ಟ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ಪಾಲುದಾರರಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ*

ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಭ್ರಷ್ಟಾಚಾರದ ಹೊಂದಾಣಿಕೆ ಇರುವುದರಿಂದಲೇ ಶಾಸಕಾಂಗದ ವ್ಯಕ್ತಿ ಒಂದು ಮೋರಿ ನಿರ್ಮಾಣ, ರಸ್ತೆ ನಿರ್ಮಾಣ, ರಸ್ತೆಗೆ ಟಾರ್ ಹಾಕಲು, ಆಸ್ಪತ್ರೆ, ಶಾಲಾ ಕಟ್ಟಡ, ವಿದ್ಯುತ್ ದೀಪ, ಕೆರೆ, ಮತ್ತು ಪಾರ್ಕ್ಗಳ ನಿರ್ವಹಣೆ ಇತ್ಯಾದಿ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯಾಂಗಕ್ಕೆ ಸಡ್ಡು ಹೊಡೆದು *ನಾನು ಎಲ್ಲಾ ಮಾಡುತ್ತಿದ್ದೇನೆ ಎಂಬ ಅಹಂನಿಂದ ವರ್ತಿಸುತ್ತಿರುವುದು ಕೂಡ ಸಂವಿಧಾನ ಬಾಹಿರವಾದ ಕಾರ್ಯವಾಗಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಸರ್ಕಾರದ ಯೋಜನೆಗಳಿಗೆ ಶಾಸಕಾಂಗದ ವ್ಯಕ್ತಿ ತನ್ನ ಹೆಸರು ಮತ್ತು ಭಾವಚಿತ್ರಗಳನ್ನು ಹಾಕುತ್ತಿರುವುದನ್ನು ನೋಡಿಯೂ ನೋಡದಂತೆ ಇರುವ ಕಾರ್ಯಾಂಗ, ಶಾಸಕಾಂಗ ಸದಸ್ಯನ ಜೀತದಾಳಿನ ರೀತಿ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಭಾರತದಂತಹ ಅನಕ್ಷರಸ್ಥರೇ ಹೆಚ್ಚಾಗಿರುವ ಮತ್ತು ಸಂವಿಧಾನವನ್ನು ಅರಿಯದೆ ಇರುವ ವ್ಯಕ್ತಿಗಳು ಈ ಸರ್ಕಾರದ ಯೋಜನೆಗಳೆಲ್ಲ ಈ ಶಾಸಕಾಂಗದ ವ್ಯಕ್ತಿಯ ಮನೆಯಿಂದ ತಂದು ನಮಗೆ ಉಪಕಾರ ಮಾಡುತ್ತಿದ್ದಾನೆಂದು ಭಾವಿಸಿರುತ್ತಾರೆ. ಆದರೆ ಇದು ಪ್ರತಿಯೊಬ್ಬ ನಾಗರಿಕನು ಕಟ್ಟುವ ತೆರಿಗೆ ಹಣದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ ಎಂಬ ಸಾಮಾನ್ಯ ಅರಿವು ಮತದಾರನಿಗೆ ಇರುವುದಿಲ್ಲ.

ಆದರೆ ಇಂದಿನ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವಾಸ್ತವತೆಯಲ್ಲಿ ನಾಗರಿಕರು ಅನುಭವಿಸುತ್ತಿರುವುದರೂ ಏನು

ಶಾಸಕಾಂಗ ಮತ್ತು ಕಾರ್ಯಾಂಗ ನಡೆಸುತ್ತಿರುವ ಆಡಳಿತ ವೈಫಲ್ಯಗಳನ್ನು ನೋಡಿ ನ್ಯಾಯಾಂಗ ನಾಗರಿಕರ ರಕ್ಷಣೆ ಗೆ ಬಂದು ನಿಂತೇಬಿಟ್ಟಿತು.

ಶಾಸಕಾಂಗದವರು ಈಗ ನ್ಯಾಯಾಂಗವನ್ನು ಅವಹೇಳನ ಮಾಡುತ್ತಾ ನ್ಯಾಯಾಂಗ ತನ್ನ ವ್ಯಾಪ್ತಿಯನ್ನು ಮೀರಿ ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸುತ್ತಿದೆ.
ಆದರೆ ಶಾಸಕಾಂಗ ಇಲ್ಲಿಯವರೆಗೂ ಮಾಡಿದ್ದಾದರೂ ಏನು?
ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡಲಿಲ್ಲವೇ?
ನಾವು ಮಾಡಿದ್ದೆಲ್ಲ ಸರಿ ಮತ್ತು ನಾವೇ ಶ್ರೇಷ್ಠ, ಕ್ಷೇತ್ರದ ಮಾಲೀಕರು ನಾವೇ ಎಂದು ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ನಾನು ಹೇಳಿದಂತೆ ಮಾಡು ‘ನಾನು ಮಾಡಿದಂತೆ ಮಾಡಬೇಡ’ಎಂಬಂತೆ ವರ್ತಿಸುತ್ತಿರುವ ಇವರ ಉದ್ಧಟತನ ಮೇರೆ ಮೀರಿದೆ
ಕಾರ್ಯಾಂಗ ಮತ್ತು ನ್ಯಾಯಾಂಗಕು ಮೀರಿ ನಿಂತು ಬಿಟ್ಟರೆ ಶಾಸಕಾಂಗ?

ಶಾಸಕಾಂಗದ ವ್ಯಕ್ತಿಗಳು ಹೀಗೇಕೆ ವರ್ತಿಸುತ್ತಿದ್ದಾರೆ?

ಆಡಳಿತದ ಬಗ್ಗೆ ಯಾವುದೇ ರೀತಿ ಶಿಕ್ಷಣ ಪಡೆಯದೆ. ರಿಯಲ್ ಎಸ್ಟೇಟ್, ಗಣಿಗಾರಿಕೆ, ವ್ಯಾಪಾರ-ವ್ಯವಹಾರಗಳಲ್ಲಿ ತಮ್ಮ ಗಳಿಕೆಯ ಹಣ ಹೆಚ್ಚಾದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಹಣ-ಹೆಂಡ ಕುಕ್ಕರ್ ಇತ್ಯಾದಿಗಳನ್ನು ಹಂಚಿದ ಈ ವ್ಯಾಪಾರಿಗಳು ಶಾಸಕಾಂಗದ ಒಳಗೆ ನುಸುಳಿ ಅಧಿಕಾರದಾಹದಿಂದ ಕೆಲವು ಶಾಸಕಾಂಗದ ಸದಸ್ಯರುಗಳು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಸಾರ್ವಜನಿಕರ ಮೇಲೆ ಗುಂಡಾಗಿರಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಲಪಟಾಯಿಸಿ, ಕೋಟ್ಯಾಂತರ ರೂಪಾಯಿಗಳ ಆಸ್ತಿ ಹಣ ಅಂತಸ್ತು ಗಳನ್ನು ಗಳಿಸಿ ಬಿಟ್ಟಿದ್ದಾರೆ ಇಂತಹ ವ್ಯಕ್ತಿಗಳು ಗೆದ್ದು ಬಂದು ವಿಧಾನಸೌಧದಲ್ಲಿ *ರಾಜಕಾರಣವನ್ನು ವ್ಯಾಪಾರೀಕರಣ ಮಾಡಿರುವುದೇ ಅಲ್ಲದೆ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಲ್ಲಿ ಬಹಳ ಮುಖ್ಯವಾಗಿ ಬೇಕಾಗಿರುವ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಎಂದಿಗೂ ಅಭಿವೃದ್ಧಿಪಡಿಸಿದೆ ಸಾಕಷ್ಟು ನಾಗರಿಕರನ್ನು ಅನಕ್ಷರಸ್ಥರ ನಾಗಿಯೇ ಉಳಿಸಿಕೊಂಡು ಅಂದಿನಿಂದಲೂ ಹದಗೆಟ್ಟಿರುವ ಆರೋಗ್ಯ ಕ್ಷೇತ್ರವನ್ನು ಸರಿಪಡಿಸದೆ ಇಂತಹ ಜನರನ್ನು ವಂಚಿಸಿ ಅಧಿಕಾರವನ್ನು ನಡೆಸುತ್ತಿರುವ ಕಾರಣ ಇಂದು ನಾಗರಿಕರು ಅನುಭವಿಸುತ್ತಿರುವ ನಿರಂತರ ಕಷ್ಟಗಳು ಮತ್ತು ಕರೋನ ಅಂತ *ಸಾಂಕ್ರಾಮಿಕ ರೋಗ ಸಾವು ನೋವುಗಳಿಂದ ಸ್ಮಶಾನದೆಡೆಗೆ ಹೋಗುತ್ತಿದ್ದಾನೆ ಮತದಾರ

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಜೆಗಳಿಗಾಗಿ ಆಳ್ವಿಕೆ ನಡೆಸಬೇಕೆಂಬ ಸದುದ್ದೇಶದಿಂದ ರಚನೆಯಾದ ಸಂವಿಧಾನ ಕೂಡ ಈಗ ದಿಕ್ಕು ತಪ್ಪಿರುವುದಕ್ಕೆ ಇಂತಹ ವ್ಯಕ್ತಿಗಳೇ ಕಾರಣೀಭೂತರಾಗಿದ್ದಾರೆ.
ಪ್ರಜೆಗಳ ಸೇವಕರಾಗಿ ಇರುವವರು ಈಗ ಮಾಲೀಕರಂತೆ ವರ್ತಿಸುತ್ತಿದ್ದಾರೆ. ಮಾಲೀಕತ್ವದ ವಿರುದ್ಧ ಸೆಡ್ಡು ಹೊಡೆದು ಮುಂದಿನ ಚುನಾವಣೆಗಳಲ್ಲಿ ಪ್ರಜೆಗಳ ಸೇವಕರಾಗಿ ಕೆಲಸ ನಿರ್ವಹಿಸುವ ಪ್ರಜೆಗಳನ್ನೇ ಆಯ್ಕೆಮಾಡಿ…ಮಾಲೀಕರನ್ನಲ್ಲ.

ಬರಹ ಮತ್ತು ವಿಶ್ಲೇಷಣೆ
ಹೆಚ್. ಎಂ ವೆಂಕಟೇಶ್ ಸಾಮಾಜಿಕ ಹೋರಾಟಗಾರರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

 

Career | job

Navachaitanya Old Age Home

About Author