AVIN TV

Latest Online Breaking News

ಧಾರವಾಡ ಜಿಲ್ಲಾಡಳಿತದ ಮತ್ತೊಂದು ಸಾಧನೆ:14 ದಿನದಲ್ಲಿ ಸಿದ್ದವಾಯ್ತು 66 ಹಾಸಿಗೆಗಳ ಕೋವಿಡ್ ಕ್ಯಾಜ್ಯೂಲಿಟಿ ಆಸ್ಪತ್ರೆ #avintvcom

ಧಾರವಾಡ ಜಿಲ್ಲಾಡಳಿತದ ಮತ್ತೊಂದು ಸಾಧನೆ:14 ದಿನದಲ್ಲಿ ಸಿದ್ದವಾಯ್ತು 66 ಹಾಸಿಗೆಗಳ ಕೋವಿಡ್ ಕ್ಯಾಜ್ಯೂಲಿಟಿ ಆಸ್ಪತ್ರೆ
ಹುಬ್ಬಳ್ಳಿ- ಧಾರವಾಡ ಜಿಲ್ಲಾಡಳಿತ ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿಯೂ ಮಾಡಲಾಗದ ಸಾಧನೆಯನ್ನು ಹುಬ್ಬಳ್ಳಿಯಲ್ಲಿ ಮಾಡಿ ಸೈ ಎನಿಸಿಕೊಳ್ಳುತ್ತಿದೆ. ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ 14 ದಿನದಲ್ಲಿ 66 ಬೆಡ್ ಗಳ ಕೋವಿಡ್ ಆಸ್ಪತ್ರೆ ನಿರ್ಮಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಹೌದು,,, ಮೇಕ್ ಶಿಫ್ಟ್ ಮಾದರಿಯಲ್ಲಿ ಕೇವಲ 14 ದಿನಗಳಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿದೆ. ಈ ನೂತನವಾಗಿ ನಿರ್ಮಿಸಲಾಗಿರುವ ಆಸ್ಪತ್ರೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯ
66 ಲಕ್ಷ ವೆಚ್ಚದಲ್ಲಿ ಒಟ್ಟು 1500 ಚದುರ ಮೀಟರ್ ವಿಸ್ತೀರ್ಣದ ಮೂರು ಕ್ಯಾಜುಯಾಲಿಟಿ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಕಲ್ಪಿಸಲಾಗಿದೆ. ಪ್ರತಿ ಕೇಂದ್ರ 22 ಹಾಸಿಗೆಗಳ ಸಾಮಾರ್ಥ್ಯ ಹೊಂದಿದೆ. ಕ್ಯಾಜೂಯಾಲಿಟಿ ಕೇಂದ್ರ ಮಧ್ಯದಲ್ಲಿ ವೈದ್ಯರು ಹಾಗೂ ನರ್ಸ್ಗಳು ಕಾರ್ಯ ನಿರ್ವಹಿಸಲು ಪ್ರತ್ಯೇಕ ಸ್ಥಳಾವಕಾಶವಿದೆ. 250 ಚದುರ ಮೀಟರ್ ವಿಸ್ತೀರ್ಣದಲ್ಲಿ
ನಿರ್ಮಿಸಿದ್ದು, ಆಸ್ಪತ್ರೆ 20 ವರ್ಷಗಳ ಕಾಲ ಬಾಳಿಕೆ ಬರಲಿದೆ. ಅಗತ್ಯ ವಿದ್ದೆಡೆ ಆಸ್ಪತ್ರೆಯನ್ನು ಸ್ಥಳಾಂತರಿಸಬಹುದಾಗಿದೆ.
ಬೈಟ್ – ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ
ವಾಯ್ಸ್ ಓ- ಆಸ್ಪತ್ರೆಯನ್ನು ಕೋವಿಡ್ ರೋಗಿಗಳ ತಾತ್ಕಾಲಿಕ ಆರೈಕೆಗೆ ಬಳಕೆ ಮಾಡಬಹುದಾಗಿದೆ. ಜಿಲ್ಲಾಡಳಿತದಿಂದ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸಟ್ರೇಟರ್ಸ್ಗಳನ್ನು ನೀಡಲಾಗಿದೆ. ಕೋವಿಡ್ ಅಲೆ ತ್ರೀವ್ರತೆ ಇಳಿದ ಬಳಿಕ ಆಸ್ಪತ್ರೆಯನ್ನು ಲಿಸಿಕಾ ಕೇಂದ್ರ ಸೇರಿದಂತೆ ಇತರೆ ಉದ್ದೇಶಗಳಿಗೆ ಬಳಸಲಾಗುತ್ತದೆ. ಇಕೋ ಇನ್ ಬಾಕ್ಸ್ ಸ್ಪೇಸ್ ಪ್ರೇವ್ಹೇಟ್ ಲಿಮಿಟೆಡ್ ನಿರ್ಮಾಣ ನಿರ್ವಹಣೆಯ ಜವಬ್ದಾರಿ ಹೊತ್ತಿದ್ದು, ಇದರಿಂದ ಕೊವಿಡ್ ರೋಗಿಗಳು ಪ್ರಾಥಮಿಕ ಚಿಕಿತ್ಸೆ ಪಡೆಯಲು ಹೆಚ್ಚು ಅನುಕೂಲವಾಗಲಿದೆ.
ಬೈಟ್ -ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ
ಈಗಾಗಲೇ ಕಿಮ್ಸ್ ನಲ್ಲಿ ಕೊವಿಡ್ ಗಾಗಿ ಒಂದು ಸಾವಿರ ಬೆಡ್ ಗಳನ್ನು ನಿಯೋಜನೆ ಮಾಡಲಾಗಿದೆ. ಆದ್ರೂ ಕೂಡ ಬೆಡಗ ಕೊರತೆ ತಲೆದೋರುತ್ತಿದೆ. ಈ ಆಸ್ಪತ್ರೆಯಲ್ಲಿ ಸುಮಾರು 66 ರೋಗಿಗಳು ಚಿಕಿತ್ಸೆ ಪಡೆಯುವದರಿಂದ ಒಂದಷ್ಟು ಒತ್ತಡ ಕಡಿಮೆಯಾಗಲಿದೆ.
ವರದಿ.ಸುರೇಶ್ ಜಾದವ್ ಹುಬ್ಬಳ್ಳಿ ಅವಿನ್ ಟಿವಿಯ

Career | job

Navachaitanya Old Age Home

 

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!