AVIN TV

Latest Online Breaking News

ಕೊರೊನಾ ಜಾಗೃತಿ ಮೂಡಿಸುತ್ತಿರುವ ತಡಸ ಪೊಲೀಸ್ ಠಾಣೆಯ ಸಿಬ್ಬಂದಿ #avintvcom

Featured Video Play Icon

ಕೊರೊನಾ ಜಾಗೃತಿ ಮೂಡಿಸುತ್ತಿರುವ ತಡಸ ಪೊಲೀಸ್ ಠಾಣೆಯ ಸಿಬ್ಬಂದಿ ಹುಬ್ಬಳ್ಳಿ- ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಸೊಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿದೆ. ಪಟ್ಟಣದಲ್ಲಿ ಅಷ್ಟೇ ಅಲ್ಲದೆ, ಹಳ್ಳಿಯಲ್ಲೂ ಕೂಡಾ ಕೊರೊನಾ ಸೋಂಕು ಹರಡುತ್ತಿರುವುದಿಂದ, ಪೊಲೀಸರು ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಹೌದು,,, ಹಾವೇರಿ ಜಿಲ್ಲಾ ಶಿಗ್ಗಾಂವ ತಾಲ್ಲೂಕಿನ ತಡಸ ಪೊಲೀಸ್ ಠಾಣೆಯ ಪಿಎಸ್ಐ ಎಸ್.ಕೆ ಪೊಲೀಸಗೌಡ್ರ ನೇತೃತ್ವದಲ್ಲಿ, ಎಚ್.ಬಿ ಕೋಟಿ , ಇಎಸ್‌ಐ ವಿಠ್ಠಣ್ಣವರ, ಸೇರಿದಂತೆ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರತಿ ಹಳ್ಳಿಗಳಿಗೆ ಹೋಗಿ, ಗ್ರಾಮದ ಹಿರಿಯರನ್ನು ಒಂದೆಡೆ ಸೇರಿಸಿ ಸಭೆ ಮಾಡುವುದು ಮತ್ತು ಹಳ್ಳಿಯ ಪ್ರತಿ ಓಣಿಯಲ್ಲಿ ಮೈಕ್ ಮೂಲಕ ಹೇಳುತ್ತಾ, ಪಾದಯಾತ್ರೆ ಮಾಡುವುದರ ಮೂಲಕ, ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಅನಾವಶ್ಯಕವಾಗಿ ಯಾರು ಹೊರಗಡೆ ಓಡಾಡಬೇಡಿ, ಎಂದು ಕೊರೊನಾ ಎರಡನೇ ಅಲೆಯ ಬಗ್ಗೆ ತಡಸ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಹಳ್ಳಿಯ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.ವರದಿ.ಸುರೇಶ್ ಜಾದವ್ ಹುಬ್ಬಳ್ಳಿ

Career | job

Navachaithanya Old Age Home

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!