AVIN TV

Latest Online Breaking News

ಲಾರಿಗೆ ವಿದ್ಯುತ್ ತಂತಿ ಸ್ಪರ್ಶ :ಕೂದಲೆಳೆಯಲ್ಲಿ ಪಾರಾದ ಲಾರಿ ಚಾಲಕ#avintvcom

Featured Video Play Icon

ಕೂದಲೆಳೆಯಲ್ಲಿ ಪಾರಾದ ಲಾರಿ ಚಾಲಕ

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ಬಣಕಲ್ ಹೋಬಳಿ
ಹಳ್ಳಿಕೆರೆಯಲ್ಲಿ ಲಾರಿಗೆ ವಿದ್ಯುತ್ ತಂತಿ ಸ್ಪರ್ಶ :
ಕೂದಲೆಳೆ ಅಂತರದಲ್ಲಿ ಪಾರಾದ ಲಾರಿ ಚಾಲಕ

:ಬಾಳೂರು ವಿಭಾಗದ ಚನ್ನಹಡ್ಲುವಿನಿಂದ ಬಣಕಲ್ ರಸ್ತೆಯ ಹಳ್ಳಿಕೆರೆಯಲ್ಲಿ ರಸ್ತೆಗೆ ವಿದ್ಯುತ್ ತಂತಿ ಜೋತು ಬಿದ್ದಿದ್ದು, ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಕೂದಲೆಳೆ ಅಂತರದಲ್ಲಿ ಲಾರಿ ಚಾಲಕ ಪಾರಾದ ಘಟನೆ ಸೋಮವಾರ ನಡೆದಿದೆ.
ಇಟಾಚಿ ತುಂಬಿದ ಲಾರಿಯು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದಾಗ ಬೆಂಕಿ ಬಂದಿದ್ದು, ಕೂಡಲೇ ಲಾರಿ ಚಾಲಕ ಲಾರಿಯಿಂದ ಜಿಗಿದು ಪಾರಾಗಿದ್ದಾರೆ. ಹಲವಾರು ವರ್ಷಗಳಿಂದ ಈ ಬಾಗದಲ್ಲಿ ವಿದ್ಯುತ್ ತಂತಿ ರಸ್ತೆಗೆ ಜೋತು ಬಿದ್ದು ಅಪಾಯ ತರುತ್ತಿದೆ. ಹಲವಾರು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜೋತು ಬಿದ್ದಿರುವ ತಂತಿಯನ್ನು ಅಪಾಯ ಆಗುವವರೆಗೂ ಬಿಟ್ಟಿರುವುದು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೂಡಲೇ ಹಳ್ಳಿಕೆರೆ ಭಾಗದ ಜೋತು ಬಿದ್ದ ವಿದ್ಯುತ್ ತಂತಿಯನ್ನು ಸರಿ ಪಡಿಸಿ ಅಪಾಯವನ್ನು ತಪ್ಪಿಸಬೇಕೆಂದು ಗ್ರಾಮಸ್ಥ ವಿಜೇಂದ್ರ ಹಳ್ಳಿಕೆರೆ ಒತ್ತಾಯಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!