AVIN TV

Latest Online Breaking News

“”ನಿದ್ದೆ ಬಿಟ್ಟು ಎದ್ದು ಬಾರೋ ಕೆಚ್ಚೆದೆಯ ಕನ್ನಡಿಗ ಎಂದು ಕರೆಕೊಟ್ಟ “ಡಾ, ಕೋ, ವೆಂ, ರಾಮಕೃಷ್ಣೇಗೌಡ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ #avintvcom

ಕನ್ನಡ ಸಾಹಿತ್ಯ ಪರಿಷತ್ತು,
ಶರಣ ಸಾಹಿತ್ಯ ಪರಿಷತ್ತು,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ,
ಜಿಲ್ಲಾ ಘಟಕ, ಚಿಕ್ಕಮಗಳೂcರು,,,ವತಿಯಿಂದ

“”ನಿದ್ದೆ ಬಿಟ್ಟು ಎದ್ದು ಬಾರೋ ಕೆಚ್ಚೆದೆಯ ಕನ್ನಡಿಗ ಎಂದು ಕರೆಕೊಟ್ಟ “”

ಡಾ, ಕೋ, ವೆಂ, ರಾ, ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ
🌹 🙏🙏🙏 🌹
====================

“ಇದೊಂದು ದುರಿತಕಾಲ
ವಿಚಲಿತರಾಗದೆ ಎದುರಿಸೋಣ,
ಬಾರವಾದ ಹೃದಯದಿಂದ ಕನ್ನಡ ಚಳುವಳಿಗಾರ ಡಾ, ಕೋ, ವೆಂ,ರಾಮಕೃಷ್ಣೇಗೌಡ ಅವರಿಗೆ ಈ ನುಡಿ ನಮನಗಳು,

ನುಡಿ ಸಮರ್ಪಣೆ :-
ಡಿ, ಎಂ, ಮಂಜುನಾಥಸ್ವಾಮಿ,

90ರ ದಶಕದ ದಂಡು ಪ್ರದೇಶದಲ್ಲಿ ನಿದ್ದೆ ಬಿಟ್ಟು ಎದ್ದು ಬಾರೋ ಕೆಚ್ಚೆದೆಯ ಕನ್ನಡಿಗ ಎಂದು ಕರೆಕೊಟ್ಟಿದ್ದ, ಡಾ, ಕೋ, ವೆಂ, ಎಂದೇ ಕರ್ನಾಟಕ ರಾಜದಾದ್ಯಂತ ಸಾಹಿತ್ಯ, ಸಾಂಸ್ಕೃತಿಕ, ಕನ್ನಡಪರ ಹೋರಾಟದ ವಲಯಗಳಲ್ಲಿ ಮನೆ -ಮನದ ಮಾತಾಗಿದ್ದವರು ಡಾ, ಕೋ, ವೆಂ, ಅವರು,

ತನ್ನ ಬದುಕಿನ್ನುದ್ದಕ್ಕೂ ಕ್ರಿಯಾತ್ಮಕವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ಅಪ್ಪಟ ಖಾಸಾ ಪರಿಚಾರಿಕೆ ಮಾಡುತಿದ್ದ
ಡಾ, ಕೋ, ವೆಂ, ಅವರ ಅಕಾಲಿಕ ಅಗಲಿಕೆ ಸಾಹಿತ್ಯ, ಸಾಂಸ್ಕೃತಿಕ ಮತ್ತು ಕನ್ನಡಪರ ಹೋರಾಟ ವಲಯಕ್ಕೆ ಬರ ಸಿಡಿಲು ಎದೆಗೆ ಬಂದು ಬಡಿದಂತೆ ಆಗಿದೆ,

ಡಾ, ಕೋ, ವೆಂ, ರವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಗೌರವ ಅಧ್ಯಕ್ಷರಾಗಿ, ಶಿಕ್ಷಣ ಶಿಲ್ಪಿ ಮಾಸ ಪತ್ರಿಕೆ ಸಂಪಾದಕರಾಗಿ, ಬೆಂಗಳೂರು ನಗರ ಜಿಲ್ಲಾ ಕ, ಸಾ, ಪ, ಮಾಜಿ ಅಧ್ಯಕ್ಷರಾಗಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿಯಾಗಿ ಅಲ್ಲದೆ ಬೆಂಗಳೂರು ವಿ, ವಿ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಹಾಲಿ ಅಧ್ಯಕ್ಷರಾಗಿ, ತನ್ನ ಅಧ್ಯಾಪಕ ವೃತ್ತಿ ಬದುಕಿನ ಜೊತೆಗೆ ಪ್ರವೃತ್ತಿಯಾಗಿ ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದರು,

ಡಾ, ಕೋ, ವೆಂ ಅವರು ಅಧ್ಯಾಪಕರು ಮಾತ್ರವಲ್ಲ, ಸಾಹಿತಿ, ಕವಿ, ಗಾಯಕ, ಸಂಘಟಕ, ಲೇಖಕ, ಅಪ್ಪಟ ಕನ್ನಡಪರ ಹೋರಾಟಗಾರನಾಗಿದ್ದರು,

ಸಾಹಿತ್ಯ ಮತ್ತು ಕನ್ನಡಚಳುವಳಿಯ ಕೈಂಕರ್ಯದೊಂದಿಗೆ 40ಕ್ಕೂ ಹೆಚ್ಚು ಕೃತಿ ರಚಿಸುವುದರೊಂದಿಗೆ,
ಕೆಂಪೇಗೌಡ ಪ್ರಶಸ್ತಿ,
ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,
ಉತ್ತಮ ಉಪನ್ಯಾಸಕ ಪ್ರಶಸ್ತಿ,
ಕನ್ನಡ ಭೂಷಣ ಪ್ರಶಸ್ತಿ,
ಹೀಗೆ ಹತ್ತು ಹಲವು ಪ್ರಶಸ್ತಿ -ಗೌರವಕ್ಕೆ ಬಾಜನರಾಗಿದ್ದರು,

ಕನ್ನಡ ನಾಡಿನ ಚಿಂತಕರಲ್ಲಿ ಒಬ್ಬರಾಗಿದ್ದ ಗೌಡರು ಆನೇಕ ದಿಟ್ಟ ಹೋರಾಟ ಮಾಡಿದ್ದರು ಎಂಬುದಕ್ಕೆ ಒಂದು ಸಾಕ್ಷಿ ಎಂದರೆ,,,,,

ಕನ್ನಡ ಸಾಹಿತ್ಯ ಪರಿಷತ್ತು ಬೈಲಾ ಪ್ರಕಾರ ಅ ಸಂಸ್ಥೆಯ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷವಿತ್ತು, ಆದರೆ ಹಾಲಿ ಅಧ್ಯಕ್ಷರಾದ ನಾಡೋಜ ಡಾ, ಮನುಬಳಿಗಾರ್ ಅವರು ಮೂರು ವರ್ಷದ ಆವದಿ ಮುಕ್ತಾಯವಾಗುವ ಹೊತ್ತಿಗೆ ಅ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಿದ ವಿರುದ್ಧ ರಾಜ್ಯಾದ್ಯಂತ ಧ್ವನಿಮಾಡಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಪ್ರಶ್ನಿಸುವ ಮೂಲಕ ಅರ್ಜಿ ಸಲ್ಲಿಸಿದ್ದರು,

ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ತನ್ನದೇ ಅದ ಹೊಸಮನೆ ಗೃಹಪ್ರವೇಶ, ಮಗಳ ಮದುವೆ ಒಟ್ಟಿಗೆ ಸರಳವಾಗಿ ಮಾಡಿ ಮುಗಿಸಿದ್ದರು, ಇನ್ನೂ ಒಂದೂವರೆ ವರ್ಷದ ನಂತರ ನಿವೃತ್ತಿಯಾಗುತ್ತಿದ್ದು, ನಿವೃತ್ತಿ ನಂತರ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹುರುಪಿನಿಂದ ಹೇಳಿಕೊಂಡಿದ್ದರು,

ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತಿದ್ದ ಡಾ, ಕೋ, ವೆಂ ಅವರು ಇಂದು ಸಂಜೆ 6-00ಗಂಟೆ ಸುಮಾರಿಗೆ ಬೆಂಗಳೂರಿನ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಕೊರೊನ ಸೊಂಕಿಗೆಗೆ ಬಲಿಯಾಗಿದ್ದು, ಮೃತರು ಪತ್ನಿ, ಓರ್ವ ಮಗ, ಓರ್ವ ಮಗಳು ಅಲ್ಲದೆ ಸಾವಿರಾರು ಸಾಹಿತ್ಯ ಸ್ನೇಹಿತರನ್ನು ಬಿಟ್ಟು ನಮ್ಮನ್ನೆಲ್ಲ ಅಕಾಲಿಕವಾಗಿ, ಅದರಲ್ಲೂ ಕೊರೊನದಂತ ಹೆಮ್ಮಾರಿಗೆ ತುತ್ತಾಗಿದ್ದು ಅತ್ಯಂತ ಸಂಕಟಮಯ ವಿಚಾರವಾಗಿದೆ,

ನ್ಯಾಯವಲ್ಲದ ಈ ಸಾವನ್ನು ದಿಕ್ಕರಿಸಿದರು ಕೊಡ ಒಪ್ಪಿಕೊಳ್ಳಲೇಬೇಕಾದ ಸತ್ಯವಾಗಿರುವುದರಿಂದ, ಅಗಲಿದ,,,,,,,,,

ಡಾ, ಕೋ, ವೆಂ, ರಾಮಕೃಷ್ಣೇಗೌಡರಿಗೆ ಈ ಮೇಲ್ಕಂಡ ಮೂರು ಸಂಸ್ಥೆ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದೆ.
====================
ನುಡಿ ಸಮರ್ಪಣೆ :-
ಡಿ, ಎಂ, ಮಂಜುನಾಥಸ್ವಾಮಿ, ದಿಣ್ಣೆಕೆರೆ
ಚಿಕ್ಕಮಗಳೂರು.

ವರದಿ :-
ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್.

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!