AVIN TV

Latest Online Breaking News

ಡಾ!! ಬಿ ಆರ್ ಅಂಬೇಡ್ಕರ್ ರವರ 130ನೇ ಹುಟ್ಟು ಹಬ್ಬದ ಕಾರ್ಯಕ್ರಮ #avintvcom

Featured Video Play Icon

ಡಾ!! ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಬಿ ಹೊಸಹಳ್ಳಿ ಇವರ ವತಿಯಿಂದ ಡಾ!! ಬಿ ಆರ್ ಅಂಬೇಡ್ಕರ್ ರವರ 130ನೇ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಬಿ ಹೊಸಹಳ್ಳಿ ಸಮುದಾಯ ಭವನದಲ್ಲಿ ದಿನಾಂಕ 28-04-2021ರ ಬುಧವಾರದoದು ಹಮ್ಮಿಕೊಳ್ಳಲಾಯಿತು
ಈ ಕಾರ್ಯಕ್ರಮದಲ್ಲಿ ಸಮಿತಿಯ ಮಹಾಪೋಷಕರಾದ ಶ್ರೀಯುತ ಗೋಪಾಲ್ ರವರು ಪ್ರಾಸ್ತಾವಿಕವಾಗಿ ಮಾತಾನಾಡಿ ನಮ್ಮ ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿಯು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳನ್ನ ಒಂದೂ ಕಡೆ ಸೇರಿಸಿ ಒಂದೇ ವೇದಿಕೆ ಅಡಿಯಲ್ಲಿ ಮಾಡುವ ಕಾರ್ಯಕ್ರಮವಾಗಿದೆ, ಕೇವಲ ಆಚರಣೆ ಅಲ್ಲದೆ ಯಾರಿಗಾದರೂ ಸಮಸ್ಯೆ ಆದಾಗ ಅವರಿಗೆ ಸ್ಪಂದಿಸುವುದು, ಪರಿಹಾರಕ್ಕಾಗಿ ಹೋರಾಟ, ಚರ್ಚೆ, ಸಭೆ ಸೇರುವುದು ಇತ್ಯಾದಿ ಕಾರ್ಯಗಳನ್ನ ಮಾಡುವ ಮೂಲಕ ಗ್ರಾಮದ ಒಗ್ಗಟ್ಟನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ,
ಈ ಬಾರಿ ಕೊರೋನ ಹೆಚ್ಚು ಹರಡುತ್ತೀರುವುದರಿಂದ ಬಹಳ ಸರಳವಾಗಿ, ಮುಂಜಾಗ್ರತಾವಾಗಿ ಅಂಬೇಡ್ಕರ್ ಅವರ ಹುಟ್ಟು ಹಬ್ಬವನ್ನ ಆಚರಿಸುತಿದ್ದೇವೆ ಎಂದು ಮಾತನಾಡಿದರು,

ಈ ಕಾರ್ಯಕ್ರಮದಲ್ಲಿ
ಬಿ ಹೊಸಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಜನಪ್ರತಿನಿಧಿಗಳಿಗೆ ಅಭಿನಂದನೆಯನ್ನು ಹಾಗೂ ಅಂಬೇಡ್ಕರ್ ತರಗತಿಯಲ್ಲಿ ಉತ್ತಿರ್ಣರಾದ SSLC, ದ್ವಿತೀಯ PUC, ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಗೌರವವನ್ನ ಸಲ್ಲಿಸಲಾಯಿತು,

ಕಾರ್ಯಕ್ರಮವನ್ನ ಉದ್ಘಾಟಿಸಿದ
ಬಿ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಸುನಿತಾ ರವರು ಅಂಬೇಡ್ಕರ್ ಅವರು ಕೇವಲ ದಲಿತ ಜನಾಂಗಕ್ಕೆ ಮಾತ್ರ ಸೀಮಿತ ನಾಯಕರಲ್ಲ, ಅವರು ಇಡೀ ಪ್ರಪಂಚಕ್ಕೆ ಶ್ರೇಷ್ಠ ನಾಯಕರು, ಅವರು ಅಂದು ದೇಶಕ್ಕಾಗಿ ಸಂವಿಧಾನ ಬರೆಯಲಿಲ್ಲ ಅಂದಿದ್ದರೆ ಇಂದು ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗುತ್ತಿರಲಿಲ್ಲ ಆಗಾಗಿ ಅವರ ಆದರ್ಶ ತತ್ವಗಳನ್ನ ಸರ್ವರೂ ಪಾಲನೆ ಮಾಡಬೇಕು.
ಹಾಗೂ ಈಗಿನ ಕೊರೊನ ಮಹಾಮಾರಿಯಿಂದ ದೂರ ಉಳಿಯಲು ಮುಂಜಾಗ್ರತೆ ವಹಿಸಬೇಕು ಎಂದು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,
ನೂತನ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಯುತ ಅಶ್ರೀತ್ HM ರವರು ಮಾತನಾಡಿ ಅಂಬೇಡ್ಕರ್ ರವರು ದೀನ ದಲಿತರ ಎಳ್ಗೆಗಾಗಿ, ತನ್ನ ಜೀವನವನ್ನೇ ಮುಡಿಪಾಗಿಟ್ಟವರು, ದೇಶದ ಉದ್ಧಾರಕ್ಕಾಗಿ ಪ್ರಪಂಚದಲ್ಲೇ ತಮ್ಮ ಹೆಸರನ್ನು ಅಚ್ಚಳಿಯುವಂತೆ ಮಾಡಿರುವವರು ಇಂದು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಉಳಿವಿಗಾಗಿ ಅಂಬೇಡ್ಕರ್ ರವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ,
ಇದು ದುರಂತ ಹಾಗೂ ಅನಿವಾರ್ಯವಾಗಿದೆ, ಇಂದು ದೇಶ ಸುಭದ್ರವಾಗಿದೆ ಎಂದರೆ ಅದಕ್ಕೆ ಅಂಬೇಡ್ಕರ್ ರವರು ಬರೆದ ಸಂವಿಧಾನವೇ ಕಾರಣ, ಆಗಾಗಿ ಇಂತ ಮಹಾನ್ ನಾಯಕರ ಹುಟ್ಟು ಹಬ್ಬ ಆಚರಿಸುತ್ತಿರುವುದು ತುಂಬ ಸಂತೋಷ ಆಗುತ್ತದೆ, ಹಾಗೆಯೆ ಗ್ರಾಮ ಪಂಚಾಯಿತಿಗಳಲ್ಲಿ ತಮಗೆ ಹಾಗೂ ತಮ್ಮ ಗ್ರಾಮಕ್ಕೆ ಸಂಬಂಧಿಸಿದಂತೆ ಏನಾದರು ಮನವಿಗಳು ಇದ್ದರೆ ಅದನ್ನ ತಿಳಿಸಿ ನಮಗೆ ಸಾಧ್ಯವಾದಷ್ಟು ಪ್ರಾಮಾಣೀಕವಾಗಿ ಅದನ್ನ ಪರಿಹರಿಸಲು ಎಲ್ಲರು ಪ್ರಯತ್ನಿಸುತ್ತೇವೆ, ಕೊರೊನ ಮುಂಜಾಗ್ರತೆಯಾಗಿ ತಾವೆಲ್ಲರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ನಂತರ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು ಹಾಗೂ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಉಪಾದ್ಯಕ್ಷರು ಆದಂತಹ ಶ್ರೀಯುತ ಶಿವಪ್ರಸಾದ್ ರವರು ಮಾತನಾಡಿ ಗ್ರಾಮಗಳು ಅಭಿವೃದ್ದಿ ಆಗಬೇಕಾದರೆ ಗ್ರಾಮದ ಜನತೆ ಅಯ್ಕೆ ಆದ ಜನಪ್ರತಿನಿಧಿಗಳು, ಪ್ರಾಮಾಣಿಕರಾಗಿ ನಿಸ್ವಾರ್ಥ ಸೇವೆ ಮಾಡಬೇಕು, ನಮ್ಮ ಸೇವೆ 5 ವರ್ಷದ ಅವಧಿ ಈ ಅವಧಿಯಲ್ಲಿ ನಾನೇನು ಮಾಡಿದೆ, ನಾವೆಷ್ಟು ಮಾಡಿದ್ದೀವೀ ಅನ್ನೋ ಬದಲು ನಾವೆಲ್ಲರೂ ಸೇರಿ ಮಾಡಿದಂತಹ ಕೆಲಸಗಳು ಮುಂದೆಯೂ ಉಳಿಯುವಂತೆ, ಜನತೆಗೆ ಉಪಯೋಗ ಆಗುವಂತೆ ಮಾಡಬೇಕು ಅದಕ್ಕೆ ತಮ್ಮೆಲ್ಲರ ಸಲಹೆ-ಸಹಕಾರದಿಂದ ಸಾದ್ಯವೆoದರು. ಅಂಬೇಡ್ಕರ್ ರವರ ಕೊಡುಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ, ಸಮಾನತೆಗಾಗಿ ತನ್ನ ಸರ್ವಸ್ವವನ್ನೇ ತ್ಯಜಿಸಿ ದೇಶವನ್ನ ಸುಭದ್ರವಾಗಿ ನಿರ್ಮಾಣ ಮಾಡುವ ಎಲ್ಲ ಕಾನೂನುಗಳನ್ನ ರಚಿಸಿದರು,
ಪ್ರಥಮ ಕಾನೂನು ಮಂತ್ರಿಯಾದರು, ಕೇವಲ ಒಂದೂ ವರ್ಗಕ್ಕೆ ಸೀಮಿತವಾಗದೆ ಸರ್ವ ಜನಾಂಗಕೂ ಸಮಾನವಾದ ಸಂವಿಧಾನ ರಚಿಸಿದರು ಸಂವಿದಾನ ಶಿಲ್ಪಿಯಾದರು ಇಂತಹ ಮಹಾನ್ ನಾಯಕರ ಹುಟ್ಟು ಹಬ್ಬವನ್ನ ನಮ್ಮ ಗ್ರಾಮದಲ್ಲಿ ನಡೆಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿ ಕೊರೊನ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದರು,

ನಂತರ ನೂತನ ಸದಸ್ಯರಾದ ಶ್ರೀಮತಿ ನಾಟ್ಯ ರಂಜಿತ್ ಹಾಗೂ ಉಪಾದ್ಯಕ್ಷರಾದ ಶ್ರೀಮತಿ ಸರಸ್ವತಿ, ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಗೌರಮ್ಮರವರು ಕಾರ್ಯಕ್ರಮಕ್ಕೆ ಶುಭಹಾರೈಕೆಯನ್ನ ತಿಳಿಸಿದರು.
ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಜಯಪಾಲ್ ಹೊಸಹಳ್ಳಿ ಇವರು ಮಾತನಾಡಿ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನ ಸರ್ವರೂ ಪಾಲಿಸಬೇಕು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರು ಸಾಗಬೇಕು,
ಎಲ್ಲಿ ಮಹಿಳೆಯರು ಸಂಘಟಕ ರಾಗುತ್ತಾರೊ ಅಲ್ಲಿಯ ವಾತಾವರಣವು ಸುಂದರವಾಗಿರುತ್ತದೆ ಹಾಗೂ ಸಂಸ್ಕೃತಿಯಿಂದ ಕೂಡಿರುತ್ತದೆ ಹಾಗೆಯೆ ಸಾಂಸ್ಕೃತಿಕವಾಗಿಯೂ ಬಿಂಬಿತವಾಗಿರುತ್ತದೆ ಹೆಚ್ಚಾಗಿ ಮಹಿಳೆಯರು ಸಂಘಟಿತರಾಗಬೇಕು, ಪುರುಷರು ಹಾಗೂ ಯುವಕರು ಗ್ರಾಮದ ಸುವ್ಯವಸ್ಥೆಗಾಗಿ ಶ್ರಮ ವಹಿಸಬೇಕು,
ನಮ್ಮ ದೇಹವು ಸದೃಢವಾಗಿರ ಬೇಕು ಎಂದರೆ ನಮ್ಮ ಆರೋಗ್ಯವು ಚೆನ್ನಾಗಿರಬೇಕು ಆಗಾಗಿ ಎಲ್ಲರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಿ. ಏಕೆಂದರೆ ನಾವು ಆರೊಗ್ಯವಾಗಿದ್ದರೆ ನಮ್ಮ ಮನೆ, ಸಮುದಾಯ, ಗ್ರಾಮ ಆರೋಗ್ಯವಾಗಿರುತ್ತದೆ, ಹಾಗಾಗಿ ಈಗ ಕೊರೊನ ಎಂಬ ಮಹಾಮಾರಿ ಇಂದ ಯಾರಿಗೆ ಭಯ ಬೇಡ ಎಚ್ಚರಿಕೆಯಿಂದ ಇರಿ, ಮನೆಯಿಂದ ಹೊರಗೆ ಹೋಗದೆ ಸರ್ಕಾರದ ನಿಯಮಗಳನ್ನ ಪಾಲನೆ ಮಾಡುವ ಮೂಲಕ ತಾವೆಲ್ಲರೂ ಎಚ್ಚರ ವಹಿಸಬೇಕು,
ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳಿಗೆ ತಮ್ಮ ಕರ್ತವ್ಯವನ್ನ ಪ್ರಾಮಾಣಿಕವಾಗಿ ಸೇವೆಯನ್ನ ಸಲ್ಲಿಸುವ ಮೂಲಕ ಗ್ರಾಮವನ್ನ ಆದರ್ಶ ಗ್ರಾಮವನ್ನಾಗಿ ಮಾಡಲು ತಾವುಗಳು ಶ್ರಮವಹಿಸಬೇಕಾಗಿ ವಿನಂತಿಯನ್ನ ಮಾಡಲಾಯಿತು.
ಹಾಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿದ ನನ್ನೆಲ್ಲ ಬಂಧುಗಳಿಗೂ ಸಮಿತಿಯ ಪಧಾದಿಕಾರಿಗಳಿಗೂ, ವೇದಿಕೆ ಗಣ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನ ಸಲ್ಲಿಸಲಾಯಿತು,

ಈ ಸಂದರ್ಭದಲ್ಲಿ ಅಂಬೇಡ್ಕರ್ ಗೀತೆಗಳಿಗೆ ಊರಿನ ಪುಟಾಣಿಗಳು , ಹೆಣ್ಣು ಮಕ್ಕಳು ನೃತ್ಯ , ಗೀತೆಗಳನ್ನ ಹಾಡುವ ಮೂಲಕ ಎಲ್ಲರನ್ನ ಮತ್ತು ಕಾರ್ಯಕ್ರಮಕ್ಕೆ ಮೆರಗು ತಂದರು, ಕಾರ್ಯಕ್ರಮದಲ್ಲಿ ಊರಿನವರಾದ ಬೋಮ್ಮಯ್ಯರವರು ಸ್ವಾಗತಿಸಿ, ಲಕ್ಷಣ್ ರವರು ವಂದಿಸಿದರು.
ಹರೀಶ್ ರವರು ಕಾರ್ಯಕ್ರಮವನ್ನ ನಿರೂಪಿಸುವ ಮೂಲಕ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

 

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!