AVIN TV

Latest Online Breaking News

ವ್ಯಾಪಾರ ಮಾಡಿ ಸಹಕರಿಸಿ ಎಂದು ಕೋರಿಕೆ ಚೆಂಡು ಹೂವು ಬೆಳೆದ ರೈತನ ಕಣ್ಣೀರು;#avintvcom

Featured Video Play Icon

ವ್ಯಾಪಾರ ಮಾಡಿ ಸಹಕರಿಸಿ ಎಂದು ಕೋರಿಕೆ ಚೆಂಡು ಹೂವು ಬೆಳೆದ ರೈತನ ಕಣ್ಣೀರು;
ಕೋಲಾರ ಜಿಲ್ಲೆಯ ಕೆಜಿಎಫ್​ ತಾಲೂಕಿನ ಮದನಾಯಕನ ಹಳ್ಳಿ ಗ್ರಾಮದ ಪೃಥ್ವಿ ಹೆಸರಿನ ರೈತ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. 4 ಲಕ್ಷ ರೂಪಾಯಿ ಸಾಲ ಮಾಡಿ ನಾಲ್ಕೂವರೆ ಎಕರೆ ಜಾಗದಲ್ಲಿ ಚೆಂಡು ಹೂವು ಬೆಳೆದಿದ್ದೇನೆ. ಬೆಳೆ ಸಮೃದ್ಧವಾಗಿ ಬಂದಿದೆ. ಆದರೆ ಈಗ ಯಾವುದೇ ವ್ಯಾಪಾರಸ್ಥ ಹೂವನ್ನು ಕೊಂಡೊಯ್ಯಲು ಮುಂದೆ ಬರುತ್ತಿಲ್ಲ. ಈಗಾಗಲೇ ಸಾಲಗಾರರು ಹಣಕ್ಕಾಗಿ ಪ್ರಶ್ನೆ ಕೇಳಲಾರಂಭಿಸಿದ್ದಾರೆ. ಹೀಗಾದರೆ ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದಾರೆ.
ಹಣ್ಣು, ತರಕಾರಿ ಬೆಳೆಯಾದರೆ ಎಪಿಎಂಸಿಗಾದರೂ ಹಾಕಿಬಿಡಬಹುದು. ಆದರೆ ಹೂವನ್ನು ಎಲ್ಲಿಯೂ ಹಾಕಲಾಗುತ್ತಿಲ್ಲ ಎಂದು ಅವರು ನೋವನ್ನು ಹೇಳಿಕೊಂಡಿದ್ದಾರೆ. ಲಾಕ್​ಡೌನ್​ ಎಲ್ಲ ವರ್ಗದ ಜನರಿಗೆ ಒಂದೇ ರೀತಿ ಪರಿಣಾಮ ಬೀರುವುದಿಲ್ಲ. ಅನೇಕ ವರ್ಗದ ಜನರ ಬದುಕು ಈ ಲಾಕ್​ಡೌನ್​ನಿಂದಾಗಿ ಬೀದಿಗೆ ಬಂದಿದೆ ಎನ್ನುವುದು ಸುಳ್ಳಲ್ಲ. ಕೆಲ ರೈತರೂ ಅದರಿಂದ ಹೊರತಾಗಿಲ್ಲ.
ಯಾರಾದರೂ ವ್ಯಾಪಾರಸ್ಥರಿಗೆ ಹೂವು ಬೇಕಿದ್ದರೆ ದಯಮಾಡಿ ಮುಂದೆ ಬಂದು ಹೂವು ಖರೀದಿಸಿ ಎಂದು ಅವರು ಬೇಡಿಕೊಂಡಿದ್ದಾರೆ.
ಹೂವು ಖರೀದಿಸಲು ಸಂಪರ್ಕ: 9900690057 (ಪೃಥ್ವಿ, ನೊಂದಿರುವ ರೈತ)

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!