AVIN TV

Latest Online Breaking News

ಕಾರ್ಮಿಕರಿಗೆ ಎಸ್ಟೇಟ್ ನಲ್ಲಿ ಸರಿಯಾಗಿ ವ್ಯವಸ್ಥೆ ಇಲ್ಲ ಗುಮ್ಮನಖಾನ್ ಟಿ‌ ಎಸ್ಟೇಟ್ ಖಾಂಡ್ಯ ಎಂಬ ಊರಿನ ಖಾಲಿ‌ ಮನೆಗಳಲ್ಲಿ#avintvcom

ಲಾಕ್ ಡೌನ್ ದಿಕ್ಕರಿಸಿ ಕಾರ್ಮಿಕರ ಪ್ರಯಾಣ

ದಿನಾಂಕ 28/04.2021 ರಂದು ಲಾಕ್ ಡೌನ್ ಇರುವ ಪ್ರಥಮ‌ ದಿನ. ಗುಮ್ಮನಖಾನ್ ಟಿ ಎಸ್ಟೇಟ್ ( Joonktolee Tea & Industries ltd) ಇದರ ಮ್ಯಾನೇಜರ್ ಅಲೋಕ್ ಚಿಂಗನಕಂಡಿ ಉತ್ತರ ಭಾರತದ 80ಕ್ಕೂ ಹೆಚ್ಚು ಕಾರ್ಮಿಕರನ್ನು ಯಾವುದೇ ಕರೋನ ಕಾರ್ಯಸೂಚಿಯನ್ನು ಪಾಲಿಸದೆ ಸಮಾಜಿಕ ಅಂತರವು ಇಲ್ಲದೆ ಎಸ್ಟೇಟ್ ಗೆ ಕರೆದುಕೊಂಡು ಬಂದಿರುತ್ತಾರೆ.
ಇವರು ಎಲ್ಲಿಂದ ಬಂದಿದ್ದಾರೆ ಯಾವ ರೀತಿ ಬಂದಿದ್ದಾರೆ ಎಂಬ ಮಾಹಿತಿ ಯಾರಿಗು ಇಲ್ಲ‌.
ಅದು ಮಾತ್ರವಲ್ಲದೇ ‌ಇಲ್ಲಿ ಬಂದಿರುವ ಇವರಿಗೆ ಕೋವಿಡ್ ಟೆಸ್ಟ್ ಆಗಿದಿಯೋ ಇಲ್ಲವೇ ಎಂಬ ಮಾಹಿತಿ ಸಹ ಇಲ್ಲ.

ಇಲ್ಲಿ ಬಂದಿರುವ ಉತ್ತರ ಭಾರತದ ಕಾರ್ಮಿಕರಿಗೆ ಎಸ್ಟೇಟ್ ನಲ್ಲಿ ಸರಿಯಾಗಿ ತಂಗಲು ವ್ಯವಸ್ಥೆ ಇಲ್ಲದ ಕಾರಣ ಇವರನ್ನು ಗುಮ್ಮನಖಾನ್ ಟಿ‌ ಎಸ್ಟೇಟ್ ಬಳಿಯ ಖಾಂಡ್ಯ ಎಂಬ ಊರಿನ ಕೆಲವು ಖಾಲಿ‌ ಮನೆಗಳಲ್ಲಿ ಕೂರಿಸಿದ್ದಾರೆ.
ಇದನ್ನು ಖಾಂಡ್ಯ ಗ್ರಾಮಸ್ಥರು ಬಲವಾಗಿ ವಿರೋದಿಸಿ ಈಗಾಗಲೆ ನೋಡೆಲ್ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ.

ನಮ್ಮ ಕಳಕಳಿ ಇಷ್ಟೆ ಇವರು ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ಇದ್ದರೆ ಎಸ್ಟೇಟ್ ನಲ್ಲಿ ಕೆಲಸ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ.
ಒಂದು ವೇಳೆ ಯಾವುದೆ ಟೆಸ್ಟ್ ಮಾಡದೆ ಅಕ್ರಮವಾಗಿ ಕರೆದುಕೊಂಡು ಬಂದು ಕೆಲಸ ಮಾಡಿಸುವ ಎಸ್ಟೇಟ್ ನವರ ಬೇಜವಾಬ್ದಾರಿಯಿಂದ ಯಾರಿಗಾದರು ಒಬ್ಬರಿಗೆ ಪಾಸಿಟಿವ್ ಇದ್ದರೆ ಉಳಿದವರೆ ಪಾಡೇನು.
ಹಾಗು ದಿನಸಿ,ತರಕಾರಿ ಹಾಗು ಮಾಂಸಹಾರ ತರಲು ಹಿರೇಬೈಲ್, ಮರಸಣಿಗೆ ಹಾಗು ಕಳಸಕ್ಕೆ ಬರುವ ಸಮಯದಲ್ಲಿ ಒಂದು ವೇಳೆ ಪಾಸಿಟಿವ್ ಇದ್ದರೆ ಇದು‌ ಎಲ್ಲರಿಗೂ ಹರಡುವ ಸಾಧ್ಯತೆ ಹೆಚ್ಚು ಇದೆ.
ಹಾಗಾಗಿ ಊರಿನ‌ ಹಿತಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳು ಗಮನ‌ ಹರಿಸಿ ನಮ್ಮ ಊರಿಗೆ ಸೋಂಕು ಹರಡದಂತೆ ತಡೆಯುವ ಕೆಲಸ ಮಾಡಬೇಕಾಗಿ ವಿನಂತಿ .

ಇಂತಿ‌ ಖಾಂಡ್ಯ ಗ್ರಾಮಸ್ಥರು
ಮರಸಣಿಗೆ ಗ್ರಾಮ .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!