AVIN TV

Latest Online Breaking News

ರಾಮಾನುಜಾಚಾರ್ಯ ಅವರ ಜಯಂತಿಯನ್ನು ಗ್ರಾಮ ಪಂಚಾಯತಿ ಕೆ, ಆರ್, ಪೇಟೆ,ಯಲ್ಲಿ ನೆಡೆಸಲಾಯಿತು, #avintvcom

Featured Video Play Icon

ರಾಮಾನುಜಚಾರ್ಯರ ಜಯಂತಿ

ಕರ್ನಾಟಕ ಜ್ಞಾನವಿಜ್ಞಾನ ಸಮಿತಿ
ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಷ್ಠಾನ,
ಗ್ರಾಮ ಪಂಚಾಯತಿ ಕೆ, ಆರ್, ಪೇಟೆ, ಚಿಕ್ಕಮಗಳೂರು ಜಿಲ್ಲೆ, ಇವರ ಸಹಯೋಗದಲ್ಲಿ,,,,,,,,,,,
===================
ಜಾತ್ಯತೀತ ಮನೋಧರ್ಮ ಹೊಂದಿದ್ದ, ಮತ -ಪಂಗಡ ಮೀರಿ ಭಕ್ತಿ ಮುಖ್ಯ ಎಂದು ಕೋಮುಸೌಹಾರ್ದತೆ ಮೆರೆದಿದ್ದ ವೈಷ್ಣವ ಧರ್ಮದ ದರ್ಶಕ ಸ್ಥಾಪಕಾಚಾರ್ಯ ಶ್ರೀ ರಾಮಾನುಜಾಚಾರ್ಯ ಅವರ ಜಯಂತಿಯನ್ನು ಈ ಮೇಲ್ಕಂಡ ಸಂಸ್ಥೆ ವತಿಯಿಂದ
ಕೆ, ಆರ್ ಪೇಟೆ ಶಾಲಾ ಆವರಣದಲ್ಲಿ ಇತ್ತೀಚಿಗೆ ಆಚರಿಸಿ ಶ್ರೀ ವೈಷ್ಣವ ಮತಧರ್ಮದ ಮೌಲ್ಯ ಮತ್ತು ಆಶಯಗಳನ್ನು ಕುರಿತು ಉಪನ್ಯಾಸ ಮತ್ತು ಸಂವಾದ ನೆಡೆಸಲಾಯಿತು,

ಬಸವಣ್ಣನವರಿಗಿಂತ ಪೂರ್ವದಲ್ಲಿಯೆ ಜಾತ್ಯತೀತವಾದ, ಸಮಾನತೆಯ ಸತ್ವವನ್ನು ಪ್ರಚುರಪಡಿಸಿ ಕೋಮು ಸೌಹಾರ್ದತೆಗೆ ಉದಾಹರಣೆ ಆದವರು ಶ್ರೀ ರಾಮಾನುಜರು,

ಕನ್ನಡ ದೇಶದ ಅಪ್ರತಿಮ ರಾಜ ಬಿಟ್ಟಿದೇವನನ್ನು ವಿಸ್ನುವರ್ದನನ್ನಾಗಿ ಮಾಡಿ, ಕನ್ನಡ ನಾಡಿನ ಆನೇಕ ಕಡೆ ಜಗದ್ಪ್ರಸಿದ್ದ ಸುಂದರವಾದ, ಶಾಶ್ವತವಾದ ಶಿಲಾದೇಗುಲಗಳನ್ನು ನಿರ್ಮಿಸಲು ನಿರ್ದೇಶಿಸಿ ಕರ್ನಾಟಕವನ್ನು ಶಿಲ್ಪಕಲೆಗಳನಾಡನ್ನಾಗಿಸಿದ ಕೀರ್ತಿಯ ಹಿಂದೆ ಶ್ರೀ ರಾಮಾನುಜರ ಪಾಲನ್ನು ಯಾರು ಮರೆಯುವಂತಿಲ್ಲ,

ಅಸ್ಪೃಶ್ಯರು ನಮ್ಮನ್ನು ಮುಟ್ಟಿದರೆ ಮೈಲಿಗೆ ಹರಡುತ್ತದೆ ಎಂದಾದರೆ ಮಡಿಯು ಹರಡಲಿ ಎಂದು ಅವರನ್ನು ತಬ್ಬಿಕೊಂಡು ಸರ್ವ ಸಮಾನತೆ ಸಾರಿದವರು ಶ್ರೀ ರಾಮಾನುಜರು,

ಚೆಲುವ ನಾರಾಯಣನ ಪರಮ ಭಕ್ತೆಯಾದ ಮುಸಲ್ಮಾನ ಧರ್ಮದ ಸಹೋದರಿ ಬೀಬಿ ನಾಚಿಯಾರ್ ಗೆ ದೇವಿ ಪಟ್ಟ ಕೊಟ್ಟು ಕೋಮು ಸೌಹಾರ್ದತೆ ಸ್ಥಾಪಿಸಿದ ಕೀರ್ತಿ ಸಹ ಸವ್ಯಸಾಚಿ ರಾಮಾನುಜರಿಗೆ ಸಲ್ಲುತ್ತದೆ,

ಯಾವುದೇ ಶ್ಲೋಕ ಅರ್ಥವಾದರೆ ಮಾತ್ರ ಅದು ಮಂತ್ರ, ಅರ್ಥವಾಗದೆ ಹೋದರೆ ಅದೊಂದು ಕೇವಲ ಶಬ್ದ ಅಷ್ಟೆ ಎಂದು ತಿಳಿದು, ದೇವಭಾಷೆ ಸಂಸ್ಕೃತದಲ್ಲಿದ್ದ ಮಂತ್ರಗಳನ್ನು ತಮ್ಮ ಮಾತೃ ಭಾಷೆಗೆ ತರ್ಜುಮೆ ಮಾಡಿ ಭಾಷಾಭಿಮಾನವನ್ನು ಹರಡಿದವರು ಶ್ರೀ ರಾಮಾನುಜರು,

ಜಾತ್ಯತೀತವಾದ ತತ್ವ ಸಿದ್ದಾಂತವನ್ನು ಬೋಧಿಸಿ ಪ್ರಚುರಪಡಿಸಿ, ತಮ್ಮ 120 ವರ್ಷಗಳ ಜೀವಿತಾವಧಿಯಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದು, 32ವರ್ಷ ಕನ್ನಡ ನಾಡನ್ನು ಕರ್ಮಭೂಮಿಯಾನ್ನಾಗಿ ಮಾಡಿಕೊಂಡ ಸಂದರ್ಭದಲ್ಲಿ ಕನ್ನಡಿಗರು ಅವರನ್ನು ಬರಮಾಡಿಕೊಂಡು ಆಶ್ರಯ ಕೊಟ್ಟಿದ್ದು ಕನ್ನಡಿಗರ ಹೆಗ್ಗಳಿಕೆ ಕೂಡ ಆಗಿದೆ,

ಇಂತಹ ವಿಶೇಷ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವೈಷ್ಣವ ಸಮಾಜದ ಮುಖಂಡ ಶ್ರೀ ನವನೀತ ವಹಿಸಿದ್ದರು,

ಶ್ರೀ ರಾಮಾನುಜರ ಕುರಿತು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಡಿ, ಎಂ, ಮಂಜುನಾಥಸ್ವಾಮಿ ಉಪನ್ಯಾಸ ನೀಡಿದರು,

ಕಾರ್ಯಕ್ರಮ ಉದ್ಘಾಟನೆಯನ್ನು ಕೆ ಆರ್ ಪೇಟೆ ಗ್ರಾ, ಪಂ, ಸದಸ್ಯ ಮಂಜುನಾಥಪ್ರಸಾದ್ ನೆರವೇರಿಸಿದರು,

ಕೆ ಜೆ ವಿ ಎಸ್ ಜಿಲ್ಲಾ ಉಪಾಧ್ಯಕ್ಷ ಕೆ, ಮೋಹನ್ ಪ್ರಾಸ್ತಾವಿಕ ಮಾತನಾಡಿದರು,

ಮಾವಿನಕೆರೆ ದಯಾನಂದ ಸ್ವಾಗತಮಾಡಿದರೆ, ಚಿಕ್ಕಮಗಳೂರು ತಾಲ್ಲೂಕು ಕೆ ಜೆ ವಿ ಎಸ್ ಅಧ್ಯಕ್ಷರಾದ ಕೃಷ್ಣಮೂರ್ತಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು,

ಸಭೆಯಲ್ಲಿ ಸಿದ್ದರಹಟ್ಟಿ ಮಲ್ಲೇಶಪ್ಪ ಅವರಿಂದ ತತ್ವಪದಗಳು ಮತ್ತು ಶಾಲಾ ಮಕ್ಕಳಿಂದ ನೃತ್ಯರೂಪಕ ನೆಡೆಯಿತು,

ಕೃಪೆ..
ಡಿ, ಎಂ, ಮಂಜುನಾಥಸ್ವಾಮಿ

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!