AVIN TV

Latest Online Breaking News

ನಿಪ್ಪಾಣಿ ನಗರಸಭೆಯಲ್ಲಿ *ಶಶಿಕಲಾ ಜೊಲ್ಲೆ ಜಿ,* ಯವರು ಸಭೆ ನಡೆಸಿ, ಕೊರೊನಾ ನಿಯಂತ್ರಣ ಕುರಿತಾಗಿ ಸಮಾಲೋಚನೆ#avintvcom

Featured Video Play Icon

ನಿಪ್ಪಾಣಿ

“ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ”

ಇಂದು ನಿಪ್ಪಾಣಿ ನಗರಸಭೆಯಲ್ಲಿ, ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಭೆ ನಡೆಸಿ, ಕೊರೊನಾ ನಿಯಂತ್ರಣ ಕುರಿತಾಗಿ ಸಮಾಲೋಚನೆ ನಡೆಸಿ, ಅಗತ್ಯ ಸಲಹೆ- ಸೂಚನೆಗಳನ್ನು ನೀಡಿದರು.

ರಾಜ್ಯದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಎಲ್ಲಾ ನಾಗರಿಕರು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಸೇರಿದಂತೆ ಇತರೆ ಕೊರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಗ್ರಾಮೀಣ ಭಾಗಗಳ ಜನರ ಸಂಕಷ್ಟಕ್ಕೆ ಧ್ವನಿಯಾಗಿ, ಪ್ರಾಥಮಿಕ ಚಿಕಿತ್ಸೆಗೆ ತೊಂದರೆಗಳಾಗದಂತೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧಕ್ಷರು, ಸದಸ್ಯರು, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಇತರೆ ಸದಸ್ಯರು ಹಾಜರಿದ್ದರು.

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!