AVIN TV

Latest Online Breaking News

ವಿಶ್ವದ ರಂಗಕರ್ಮಿಗಳು, ಆಯಾಯ ದೇಶದ ಅಲ್ಲಲ್ಲಿ ಒಂದೆಡೆ ಸೇರಿ , ರಂಗಭೂಮಿಗೆ ದುಡಿದವರನ್ನು ಗುರುತಿಸಿ -ಗೌರವಿಸಿ -ಸನ್ಮಾನಿಸಿ ದ್ದರು, #avintvcom

59ನೇ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು —🌹✊️
————————————-
ಇಂದು ಇಡಿ ವಿಶ್ವದ ರಂಗಕರ್ಮಿಗಳು, ಆಯಾಯ ದೇಶದ ಅಲ್ಲಲ್ಲಿ ಒಂದೆಡೆ ಸೇರಿ ರಂಗಭೂಮಿಯ ಅರ್ಥ ಮತ್ತು ಆಶಯಗಳನ್ನು ವಿವರಿಸಿ, ರಂಗಭೂಮಿಗೆ ದುಡಿದವರನ್ನು ಗುರುತಿಸಿ -ಗೌರವಿಸಿ -ಸನ್ಮಾನಿಸಿ ಸಮ್ರಮಿಸಿ ಆತಂಕದ ಮದ್ಯೆಯೂ ಸಂತಸಪಡುತಿದ್ದಾರೆ,

ಕಳೆದ ವರ್ಷ ಈ ಸಮ್ರಮವನ್ನು ಕೊರೊನ -19 ನುಂಗಿ ಹಾಕಿತ್ತು, ಕಳೆದ ಬಾರಿ ರಂಗಭೂಮಿ ದಿನಾಚರಣೆ ಮಾಡಲು ಆಗದಿದ್ದರೂ ಸಹ ಈ ವಿಶ್ವಕ್ಕೆ ಸಂದೇಶ ನೀಡುವ ಅವಕಾಶ ನಮ್ಮ ನೆರೆ ದೇಶವಾದ ಪಾಕಿಸ್ತಾನದ ಕವಿ, ಚಿಂತಕ, ನಾಟಕಕಾರ ಶ್ರೀ, ಶಾಹಿದ್ ನದೀಮ್ ಅವರಿಗೆ ಲಭಿಸಿತ್ತು,

ಶಾಹಿದ್ ನದೀಮ್ ಅವರು ಪಾಕಿಸ್ತಾನದ ನೆಲದಿಂದ ವಿಶ್ವ ರಂಗದಿಗ್ಗಜರ ಪರವಾಗಿ ವಿಶ್ವಕ್ಕೆ ಕರೆ ಕೊಟ್ಟಿದ್ದು ಹೀಗೆ,,,,

“”ರಂಗಭೂಮಿ ಎಂಬುದು ದೇವಮಂದಿರ,
ವಿಶ್ವ ಶಾಂತಿಗಾಗಿ ಒಟ್ಟಾಗಿ ಪ್ರಾರ್ಥಿಸೋಣ””ಎಂದು ಕರೆ ನೀಡಿದ್ದರು,

ಈ ಬಾರಿ 2021ರ ಇಂತಹ ವಿಶ್ವ ಸಂದೇಶವನ್ನು ರಂಗಭೂಮಿ ಪರವಾಗಿ ಸಾರುವ ಅವಕಾಶ ಯುನೈಟೆಡ್ ಕಿಂಗ್ ಡಮ್ ಮಾತೃ ಹೃದಯಿ ಸಹೋದರಿ “ಹೆಲೆನ್ ಮಿರ್ರೆನ್ “ಅವರಿಗೆ ದಕ್ಕಿದೆ,

ಯುನೈಟೆಡ್ ಕಿಂಗ್ ಡಮ್ ನೆಲದಿಂದ ಮೇಲೆದ್ದು ನಿಂತು ರಂಗಭೂಮಿ ಪರವಾಗಿ ವಿಶ್ವದ ಜನತೆಗೆ ಈ ಬಾರಿ ಸಹೋದರಿ ಹೆಲೆನ್ ಮಿರ್ರೆನ್ ಅವರು ದನಿಮಾಡಿ ಕರೆ ಕೊಟ್ಟಿದು ಹೀಗಿದೆ,

“”ನಾನು ಅ ದಿನಗಳಿಗಾಗಿ ಕಾಯುತ್ತಲೇ ಇರುತ್ತೇನೆ “”

ಇದು ಪ್ರದರ್ಶನ ಕಲೆಗಳಿಗೆ ಹಾಗೂ ಕಲಾವಿದರಿಗೆ ದುರಿತಕಾಲ, ರಂಗತಂತ್ರಜ್ಞರು ರಂಗಕರ್ಮಿಗಳು, ವಿಶೇಷವಾಗಿ ಮಹಿಳೆಯರು ಸ್ವತಃ ಅಭದ್ರತೆ ಇರುವ ಪ್ರದರ್ಶನ ಕಲೆಯ ವೃತ್ತಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ,

ಈ ಕಾಲದಲ್ಲಿ ರಂಗಕರ್ಮಿಗಳ ಕಲ್ಪನಾ ಶಕ್ತಿ ಮತ್ತಷ್ಟು ಹುರಿಗೊಂಡಿದೆ, ಅದರಿಂದಾಗಿ ಹೊಸ ಮಾದರಿಯ, ಹೊಸ ಮಾಧ್ಯಮಗಳ ಮೂಲಕ ರಂಜನೆಯ ಜೊತೆಗೆ ನೋಡುಗರ ಮನಮುಟ್ಟುವ ಹಲವು ಹೊಸದಾರಿಗಳನ್ನು ರಂಗಕರ್ಮಿಗಳು ಕಂಡುಕೊಂಡಿದ್ದಾರೆ, ಇದಕ್ಕಾಗಿ ನಾವು ಅಂತರ್ಜಾಲ ಎಂಬ ಹೊಸ ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು,

ಈ ಭೂಮಿಯ ಮೇಲೆ ಮನುಷ್ಯ ಕಾಣಿಸಿಕೊಂಡ ಕಾಲದಿಂದ ಒಬ್ಬರಿಗೊಬ್ಬರು ಕತೆಗಳನ್ನು ಹೇಳುವ ಕೇಳುವ ಅಭ್ಯಾಸ ಚಾಲ್ತಿಯಲ್ಲಿದೆ, ಹಾಗಾಗಿ ರಂಗಭೂಮಿ ಎಂಬ ಅತ್ಯಂತ ಸುಂದರವಾದ ಕಲೆಯೂ ಸಹ ಈ ಜಗತ್ತು ಇರುವವರೆಗೆ ಜೀವಂತವಾಗಿ ಇರುತ್ತದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ,

ನಾಟಕಕಾರ, ವಿನ್ಯಾಸಗಾರ, ನೃತ್ಯಗಾರ, ಹಾಡುಗಾರ, ನಟ -ನಟಿಯ ಕ್ರಿಯಾಶಕ್ತಿಯು ಎಂದಿಗೂ ಉಸಿರುಗಟ್ಟುವುದಿಲ್ಲ, ಮತ್ತೆ ಮತ್ತೆ ಹೊಸ ಚೈತನ್ಯದ ಜೊತೆಗೆ ಹೊಸ ಹೊಸ ವ್ಯಾಖ್ಯಾನಗಳ ಜೊತೆಗೆ ಈ ಜಗತ್ತನ್ನು ಹೊಸದಾಗಿ ಅರ್ಥೈಸುವ ರಂಗಪ್ರಯೋಗಗಳು ಬರುತ್ತಲೇ ಇರುತ್ತವೆ ಮತ್ತು ಅವು ನೋಡುಗರ ತಿಳುವಳಿಕೆಯನ್ನು ಹೆಚ್ಚಿಸುತ್ತಲೇ ಇರುತ್ತವೆ,

ನಾನು ಅ ದಿನಗಳಿಗಾಗಿ ಕಾಯುತ್ತಲೇ ಇರುತ್ತೇನೆ,

ಈ ವಿಶ್ವ ರಂಗಸಂದೇಶವನ್ನು ಪ್ರತಿಯೊಬ್ಬ ರಂಗಕರ್ಮಿಯು ಇಂದು ಪಠಿಸುವ ಮೂಲಕ ರಂಗಭೂಮಿಗೆ ಗೌರವ ಸಲ್ಲಿಸಬೇಕಾಗಿದೆ,

ಆತಂಕದ ಮದ್ಯೆಯೂ ಆತ್ಮಸ್ಥೈರ್ಯ ತುಂಬುವ ಕರೆಕೊಟ್ಟ ಯುನೈಟೆಡ್ ಕಿಂಗ್ ಡಮ್ ನ ಸಹೋದರಿ ಹೆಲೆನ್ ಮಿರ್ರೆನ್ ಗೆ ಭಾರತೀಯ ರಂಗಕರ್ಮಿಗಳ ಪರವಾಗಿ ತಾಯಿ ಭಾರತಾಂಬೆಯ ಶುಭಾಶೀರ್ವಾದಗಳು,
ಹಾಗೆ
ಈ ನಾಡಿನ ಎಲ್ಲಾ ಜನತೆಗೂ ಚಿಕ್ಕಮಗಳೂರು ಜಿಲ್ಲೆಯ ಪರವಾಗಿ ವಿಶ್ವ ರಂಗದಿನದ ಶುಭಾಶಯಗಳು,

ರಂಗಭೂಮಿ ಬರಡು ನೆಲವಲ್ಲ, ಅದೊಂದು ಸಂಪದ್ಭರಿತ ಪಲವತ್ತಾದ ಪ್ರದೇಶ, ಇಂತಹ ನೆಲವನ್ನು ಬಿಳು ಬಿಡದೆ ಹದಗೊಳಿಸುತ್ತಾ ಸಾಗೋಣ,

ವಿಶ್ವ ರಂಗದಿನದ ಶುಭಾಶಯಗಳೊಂದಿಗೆ ,,,,,,,,,,,

ನಿಮ್ಮವನೇ ಅದ, ರಂಗಕರ್ಮಿ,

ಡಿ, ಎಂ, ಮಂಜುನಾಥಸ್ವಾಮಿ
ದಿಣ್ಣೆಕೆರೆ
ಚಿಕ್ಕಮಗಳೂರು,

ವರದಿ.
ಮಗ್ಗಲಮಕ್ಕಿಗಣೇಶ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!