AVIN TV

Latest Online Breaking News

*ನೈಜ್ಯ ಹೋರಾಟಗಾರರ ವೇದಿಕೆ**ದುಷ್ಟಕೂಟದ ಬಲಾಢ್ಯರು*#avintvcom

Featured Video Play Icon

ನೈಜ್ಯ ಹೋರಾಟಗಾರರ ವೇದಿಕೆ

ದುಷ್ಟಕೂಟದ ಬಲಾಢ್ಯರು

ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಣ-ಹೆಂಡ ಹಂಚಿ ವಾಮಮಾರ್ಗದಿಂದ ವಿಧಾನಸೌಧದ ಮೆಟ್ಟಿಲನ್ನು ಹತ್ತಿ ಅಧಿಕಾರದ ಮದದಿಂದ, ಲಂಚ ರುಷುವತ್ತುಗಳಿಂದ ಆಸ್ತಿ ಅಂತಸ್ತುಗಳನ್ನು ಗಳಿಸಿ ಕಾಮದಾಹಕಾಗಿ ಅಮಾಯಕ ಹೆಣ್ಣು ಮಕ್ಕಳ ನ್ನು ಉಪಯೋಗಿಸಿಕೊಂಡು ನಿರ್ಲಜ್ಜ ತನದಿಂದ ನಾವು ಸಾಚಾ ಗಳೆಂದು ಸಾರ್ವಜನಿಕರೆದುರು ಬಿಂಬಿಸಿಕೊಳ್ಳುತ್ತ ಮಾಧ್ಯಮಗಳ ಮುಂದೆ ಬೆತ್ತಲಾಗಿ ನಿಲ್ಲುತ್ತಿರುವುದು ನೋಡಿದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವನ್ನು ಅಣಕಿಸುವಂತಿದೆ. ತಮ್ಮ ಕಾಮದಾಹಕ್ಕೆ ದೇಹ ಸುಖವನ್ನು ಅನುಭವಿಸುತ್ತಿರುವವರ ವಿಡಿಯೋಗಳು ಸ್ವಸ್ಥ ಸಮಾಜವನ್ನು ಹಾಳುಗೆಡವುತ್ತಿವೆ.
ಒಂದು ದುಷ್ಟ ಕೂಟ ನನ್ನ ತೇಜೋವಧೆ ಮಾಡುವುದಕ್ಕಾಗಿಯೇ ಷಡ್ಯಂತ್ರಗಳನ್ನು ರೂಪಿಸುತ್ತಿವೆ. ಎಂದು ಮಾಧ್ಯಮ ಮುಂದೆ ಹೇಳಿಕೊಳ್ಳುತ್ತಿರುವವರು ಒಂದು ಕಡೆಯಾದರೆ ಕೆಲವರಂತೂ ತಮ್ಮ ದೇಹ ಸುಖವನ್ನು ಅನುಭವಿಸುತ್ತಿರುವ ವಿಡಿಯೋಗಳು ಹೊರಪ್ರಪಂಚಕ್ಕೆ ಗೊತ್ತಾಗದಂತೆ ತಡೆಹಿಡಿಯಲು ನ್ಯಾಯಾಲಯದ ಮೊರೆ ಹೋಗಿರುತ್ತಾರೆ.
ಯಾವುದೇ ಶತ್ರುಗಳಾಗಲಿ ಮಿತ್ರರಗಿರಲಿ ನನ್ನ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿರುವವರು *ತಮ್ಮ ಕಚ್ಚೆ ಯನ್ನು ಭದ್ರವಾಗಿ ಇಟ್ಟು ಕೊಂಡಿದ್ದರೆ ಬೇರೆ ದುಷ್ಟಕೂಟದ ಬಲಾಢ್ಯರು ಏನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಎಂಬ ಸಾಮಾನ್ಯ ಜ್ಞಾನ ಬೇಕಾಗಿತ್ತು.

ಈಗಂತೂ ಈ ದುಷ್ಟ ಕೂಟಗಳು ನಿನಗಿಂತ ನಾನೇ ಬಲಾಡ್ಯ ಎಂದು ಪೈಪೋಟಿ ಮಾಡುತ್ತಿರುವುದನ್ನು ನೋಡಿದರೆ ನಮಗೆಲ್ಲಾ ನಾಚಿಕೆಯಾಗುತ್ತಿದೆ. ಈ ಬಲಾಢ್ಯರು ತಿಂದು ತೇಗಿದ ಮದ್ಯವನ್ನು ಅಮೇಧ್ಯ ವನ್ನು ಕೈಯಲ್ಲಿ ಬಾಚಿ ತಿನ್ನುತ್ತಿರುವ ಅವರ ಚೇಲಾಗಳು ಸ್ವಸ್ಥ ಸಮಾಜಕ್ಕೆ ಮಾರಕವಾಗಿರುತ್ತರೆ.

ನಾಗರಿಕ ಸಮಾಜದಲ್ಲಿ ನೊಂದ, ದೀನ ದುರ್ಬಲರು, ಅಸಹಾಯಕರಿಗೆ, ಬಡಬಗ್ಗರಿಗೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿದ್ದ ಪೋಲೀಸಿನವರು ದುಷ್ಟಕೂಟದ ಮನೆಬಾಗಿಲಲ್ಲಿ ಅವರಿಗೆ ರಕ್ಷಣೆ ನೀಡುತ್ತಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಅಣಕಿಸಿದಂತೆ.

ಆದರೆ ಸಾಮಾನ್ಯ ನಾಗರಿಕರು ಇಂತಹ ತಪ್ಪುಗಳನ್ನು ಎಸಗಿದಾಗ ಅವರ ಚಡ್ಡಿಯನ್ನು ಬಿಚ್ಚಿಸಿ, ಕೈಕೊಳ ತೊಡಿಸಿ ಮೆರವಣಿಗೆ ಮಾಡುವ ಪೋಲೀಸಿನವರು ಈಗ ಅವರು ತಮ್ಮ ಆತ್ಮಸಾಕ್ಷಿಯನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ. ಪೋಲೀಸಿನವರಿಗೆ ನೀಡಿದ ಲಾಟಿ, ಬಂದೂಕು ರಿವಲ್ವಾರ್, ಕೈ ಕೊಳಗಳು ಸಾಮಾನ್ಯ ವ್ಯಕ್ತಿಗಳಿಗೆ ಮಾತ್ರ ಎಂಬುದನ್ನು ಬಹಳಷ್ಟು ಬಾರಿ ಸಾಬೀತು ಮಾಡಿದ್ದಾರೆ. ಇಂತಹ ಬಲಾಢ್ಯರ, ಸೆಲೆಬ್ರೆಟಿಗಳ ಪ್ರಕರಣಗಳಲ್ಲಿ ಪೋಲಿಸ್ ಅರೆಬೆತ್ತಲಾಗಿ ಸಾರ್ವಜನಿಕರೆದುರು ನಿಂತಿರುವುದು ದುರಾದೃಷ್ಟಕರ ಎಂದೇ ಭಾವಿಸಲಾಗುತ್ತಿದೆ
ಪೊಲೀಸ್ ನವರಿಗೆ ಸರ್ಕಾರ ನೀಡಿದ ಆಯುಧ ಗಳೆಲ್ಲ ಆಯುಧಪೂಜೆಗೆ ಮಾತ್ರ ಸೀಮಿತವಲ್ಲ ಎಂದು ಹೇಳಿದ ಪೊಲೀಸ್ ಅಧಿಕಾರಿಗಳು ಈಗ ಎಲ್ಲಿಗೆ ಹೋಗಿದ್ದಾರೆ.

ಸಾಹಿತಿಗಳು, ಕವಿಗಳು, ವಿಮರ್ಶಕರು, ಬುದ್ಧಿವಂತರು ದಾರ್ಶನಿಕರು, ಚಿಂತಕರು, ಬುದ್ಧಿಜೀವಿಗಳು, ಸಾಮಾಜಿಕ ಹೋರಾಟಗಾರರು ಸಮಾಜದ ಅಸ್ವಸ್ಥತೆಯನ್ನು ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಕುಳಿತಿರುವುದೇ ಈ ದುಷ್ಟ ಕೂಟಗಳು ಬಲವಾಗಲು ಕಾರಣರಾದರೆ ಇಂಥ ಸಮಾಜವನ್ನು ಪರಿವರ್ತಿಸಿ ಉತ್ತಮ ಸಮಾಜ ನಿರ್ಮಾಣದ ಡಗೆ ಹೋರಾಟ ಮಾಡುತ್ತಿರುವವರ ಉತ್ಸವವನ್ನು ಕುಗ್ಗಿಸಿ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ಕೂಡ ಆಗುತ್ತಿರುವುದು ದುರಾದೃಷ್ಟಕರ ವಿಷಯವಾಗಿದೆ.
ಇನ್ನಾದರೂ ಎಚ್ಚೆತ್ತುಕೊಳ್ಳಿ ದುಷ್ಟ ಕೂಟಗಳ ವಿರುದ್ಧ ಹೋರಾಟ ಮಾಡುತ್ತಿರುವವರ ಕೈ ಬಲಪಡಿಸಿ
ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ

ಹೆಚ್ ಎಂ.ವೆಂಕಟೇಶ್ ಸಾಮಾಜಿಕ ಹೋರಾಟಗಾರರು
ನ್ಯಾಯಾಂಗ ಬಡಾವಣೆ ಬೆಂಗಳೂರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

April 2021
M T W T F S S
 1234
567891011
12131415161718
19202122232425
2627282930  
error: Content is protected !!