ಸಮೂಹ ಸಂಪನ್ಮೂಲಕೇಂದ್ರದ ದಲ್ಲಿ ನೆಡೆದ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟನೆ.#avintvcom

ಶಿಕ್ಷಕರ ಸಹಯೋಗದೊಂದಿಗೆ ಗುಣ ಮಟ್ಟದ ಶಿಕ್ಷಣ ಸಾಧ್ಯ. ಶ್ರೀಮತಿ ರಾಜಲಕ್ಮಿ.ಬಿ. ಜೋಷಿ. . ಕಳಸ :ಭಾಷೆ. ವಿಷಯ. ಹಾಗೂ ವಿವಿಧ ವೃತ್ತಿ ಕೌಶಲ್ಯ ಕಲಿಸುವ ಸೇರಿದಂತೆ ಎಲ್ಲಾ ಶಿಕ್ಷಕರ ಸಹಯೋಗದೊಂದಿಗೆ ಮಾತ್ರ ಗುಣ ಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ದ ಧರ್ಮಕರ್ತರ ಧರ್ಮ ಪತ್ನಿ ಶ್ರೀ ಮತಿ ರಾಜಲಕ್ಮಿ. ಬಿ. ಜೋಷಿ ಹೇಳಿದರು. . ಅವರು ಮಂಗಳವಾರ ಕಳಸ ಪಟ್ಟಣ ದ ಸಮೂಹ ಸಂಪನ್ಮೂಲಕೇಂದ್ರದ ದಲ್ಲಿ ನೆಡೆದ ಕಲಿಕೋತ್ಸವ ಕಾರ್ಯಕ್ರಮದಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಮಹಾತ್ಮಾ ಗಾಂಧೀಜಿ ಯವರಿಂದಲ್ಲೇವೃತ್ತಿ ಕೌಶಲ್ಯ ಕ್ಕೆ ಒಂದು ಅರ್ಥ ಬಂದಿದೆ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿ ಗಳಲ್ಲಿ ಅಡಗಿರುವ ವಿವಿಧ ಕೌಶಲ್ಯ. ಪ್ರತಿಭೆ ಯನ್ನು ಹೊರಹಾಕುವುದೇ ಶಿಕ್ಷಣ. ಶಿಕ್ಷಣ ಎಂದರೆ ಕೇವಲ ಮಕ್ಕಳಲ್ಲಿ ಬುದ್ದಿ ತುಂಬುವುದಲ್ಲ. ಬದಲಾಗಿ ಬುದ್ದಿಯ ಬಾಗಿಲು ಗಳನ್ನು ತೆರೆಯಬೇಕು ಎಂದರು.. ಮುಖ್ಯ ಅತಿಥಿ ಗಳಾದ ಜಿಲ್ಲಾ ಪಂಚಾಯತಿ ಸದಸ್ಯರಾದ. ಕೆ. ಆರ್. ಪ್ರಭಾಕರ್. ಮಾತನಾಡುತ್ತ ಎಲ್ಲಾ ವೃತ್ತಿ ಗಿಂತ ಪವಿತ್ರ ವಾದ ವೃತ್ತಿ ಶಿಕ್ಷಕವೃತ್ತಿ ನೇಮಕಾತಿ ಪೂರ್ವದಲ್ಲಿ ನೀಡಲಾಗುವ ಎಲ್ಲಾ ಜ್ಞಾನ ವನ್ನು ತಮ್ಮ ಬೋಧನಾ ಚಟುವಟಿಕೆ ಯಲ್ಲಿ ಬಳಸಿ ಕೊಳ್ಳಬೇಕು ಶಿಕ್ಷಣ ಕ್ಷೇತ್ರ ಸದಾ ಬದಲಾವಣೆ ಹೊಂದುವ ಕ್ಷೇತ್ರ ವಾಗಿದೆ. ಕಲಿಕೆ ಯನ್ನು ಜ್ಞಾನ ವನ್ನು ಬಳಸಿಕೊಂಡಾಗ ಮಾತ್ರ ದಕ್ಷತೆ ಯಿಂದ ಪಾಠ ಪ್ರವಚನ ಮಾಡಲು ಸಾಧ್ಯ ಎಂದರು. ಮುಖ್ಯ ಅತಿಥಿ ಪುಷ್ಪ ಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಮಾತನಾಡುತ್ತಾ ಚಿನ್ನವು ಪುಟಕ್ಕಿಟ್ಟಾಗ ಅಪ್ಪಟ ಬಂಗಾರ ವಾಗುವಂತೆ ವಿದ್ಯಾ ರ್ಥಿ ಗಳ ಪ್ರತಿಭೆ ಗಳು ಹೊರ ಹೊಮ್ಮ ಬೇಕಾದರೆ ಶಿಕ್ಷಣ ಕಾರ್ಯಕ್ರಮ ಗಳು ನೇರವೇರಿದಾಗ ಅವರ ಸಾಮರ್ಥ್ಯ ಗಳಿಗೆ ಹುರುಪು ತುಂಬುವ ವೇದಿಕೆಯಾಗುತ್ತದೆ.ಈ ನಿಟ್ಟಿನಲ್ಲಿ ಕಲಿಕೋತ್ಸವವು ನೇರವಾಗಿ ಹೊಸ ಶಿಕ್ಷಣ ಕಾರ್ಯಕ್ರಮ ಗಳು ಮಕ್ಕಳ ಪ್ರತಿಭೆ ಯ ಅನಾವರಣ ಕ್ಕೆ ಪೂರಕ ವಾಗಿವೆ ಎಂದರು. ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಮೂಡಿಗೆರೆ ಕ್ಷೇತ್ರ ಶಿಕ್ಷಣಾದಿಕಾರಿ.ಶ್ರೀ ಹೇಮಂತ್ ರಾಜ್ ರವರು ವಹಿಸಿ ಮಾತನಾಡಿತ್ತ ಶಿಕ್ಷಕರು ನಿರಂತರ ಹೊಸ ವಿಷಯ ಗಳನ್ನು ಕಲಿಯುತ್ತೀರಬೇಕು ವಿಷಯ ಗಳನ್ನು ಹೆಚ್ಚು ಹೆಚ್ಚು ತಿಳಿದು ಕೊಂಡರೆ ತರಗತಿ ಗಳನ್ನು ಮಕ್ಕಳಿಗೆ ಹೆಚ್ಚಿನ ಗುಣ ಮಟ್ಟದ ಶಿಕ್ಷಣನೀಡಬಹುದು ಶಿಕ್ಷಕರು ನಿರಂತರ ಕಲಿಯುವ ವಿದ್ಯಾರ್ಥಿ ಗಳಾಗಬೇಕು ಎಂದರು. ತಾಲ್ಲೂಕು ಪಂಚಾಯತಿ ಸದಸ್ಯ ಮಹಮದ್ ರಫೀಕ್. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಶ್ರೀಮತಿ ಸುಜಯ್ ಸದಾನಂದ. ತಾಲ್ಲೂಕು ಶಿಕ್ಷಕರ ಸಂಘ ದ ಉಪಾಧ್ಯಕ್ಷ ಮಂಜಪ್ಪ. ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷಣಿ ಮುಮ್ತಾಜ್ ಬೇಗಂ. ಪ್ರಾಸ್ತವಿ ಕ ನುಡಿಯನ್ನು ಸಮನ್ವಯ ಧಿಕಾರಿ ಶಿವನಂಜೇಗೌಡ ನೆರವೇರಿಸಿದರು. ಮೊದಲಿಗೆ ಮೋಹನ್ ಸ್ವಾಗತಿಸಿ. ಶ್ರೀಮತಿ ಲಲಿತ ವಂದಿಸಿದರು. ನಿರೂಪಣೆ ಯನ್ನು ಸುರೇಂದ್ರ ನಾಯ್ಕ ನೆರವೇರಿಸಿದರು. ಶಿಕ್ಷಕರು ಮತ್ತು ಶಿಕ್ಷಕಕಿಯರು ಭಾಗವಹಿಸಿದ್ದರು ನಂತರ ಕಳಸ ಕ್ಲಸ್ಟರ್ ನ 13 ಶಾಲೆಯ.ವಿಷಯವಾರು ಪಾಠ ಕ್ಕೆ ಪೂರಕ ವಾಗುವಂತಹ ಕಲಿಕೋಪಕಾರಣಗಳ ಸಿದ್ದ ಪಡಿಸಿದ ವಸ್ತು ಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್