AVIN TV

Latest Online Breaking News

ರಾಷ್ಟ್ರೀಯ ವಿಜ್ಞಾನ ದಿನಾಚರಣೆ.ತಪ್ಪದೇ ವೀಕ್ಷಿಸಿ.#avintvcom

Featured Video Play Icon

ಮೂಡಿಗೆರೆ ಜೆಸಿಐ ವತಿಯಿಂದ 25-02-2021 ರಂದು ಗುರುವಾರ ಸಂಜೆ 7-00 ಗಂಟೆಗೆ ಜೇಸಿ ಭವನದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಜೇಸಿ ಚಂದ್ರಶೇಖರ್ ಕುನ್ನಹಳ್ಳಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜೇಸಿ ಪೂರ್ವಾಧ್ಯಕ್ಷರು ದಾರದಹಳ್ಳಿ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷರಾದ ರವಿಹಾಲೂರು ವಹಿಸಿದ್ದರು. ಅವರು ಮಾತನಾಡಿ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಎಂದು ಹಾಗೂ 1928 ಫೆಬ್ರವರಿ 28 ರಾಮನ್ ಪರಿಣಾಮ ಪರಿಣಾಮ ಕಂಡು ಹಿಡಿದ ದಿನವಾದ್ದರಿಂದ ಅವರ ನೆನಪಿಗಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಿಕೊಳ್ಳುತ್ತಿವೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳು ಹಾಗೂ ತರಬೇತುದಾರರು ತೋಟಗಾರಿಕೆ ವಿಜ್ಞಾನ ಕೇಂದ್ರದ ಪ್ರೊ.ಚಂದ್ರಶೇಖರ್ ಮಾತಾನಾಡಿ ಒಮ್ಮೆ ರಾಮನ್ ರವರು ಹಡಗಿನಲ್ಲಿ ಪ್ರಯಾಣಿಸುವಾಗ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೆನಾದರೂ ಗುಟ್ಟು ಆಡಗಿದಿದೆಯೋ, ಎಂದು ಪತ್ತೆಮಾಡಲು ಹೊರಟ ರಾಮನ್ ರವರು ಕೊನೆಗೆ ಸೂರ್ಯನ ಬೆಳಕು ನೀರಿನಲ್ಲಿ ಚದುರಿ ಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನಿತ್ತ ಹೊರಳಿರುವುದನ್ನು ನಾವು ನೋಡಬಹುದು. ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ರಾಮನ್ ಪರಿಣಾಮವೆಂದು ಕರೆಯುವುದು ಅವರಿಗೆ ಏಷ್ಯಾದ ವಿಜ್ಞಾನಿ ಎಂಬ ನೊಬೆಲ್ ಪ್ರಶಸ್ತಿ ದೊರಕಿತ್ತು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರವಿ ಕುಮಾರ್ ಸ್ವಾಗತಿಸಿದರು. ಜೇಸಿ ಕಾರ್ಯದರ್ಶಿ ಶ್ರೇಷ್ಠಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಜೇಸಿರೇಟ್ ಪೂರ್ವಾಧ್ಯಕ್ಷರು ಹಾಗೂ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭಾರತಿ ರವೀಂದ್ರ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕೆಇಬಿ ಮೆಸ್ಕಂ ಪವರ್ ಮ್ಯಾನ್ ಆದಂತಹ ಶ್ರೀ ರವಿಕುಮಾರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೇಸಿರೆಟ್ ಅಧ್ಯಕ್ಷರಾದ ಸುಧಾಚಂದ್ರಶೇಖರ್, ಜೇಸಿ ಖಜಾಂಚಿ ಹಮೀದ್, ಉಪಾಧ್ಯಕ್ಷರು ಇರ್ಷಾದ್, ಪ್ರಶಾಂತ್, ಹಾಗೂ ವಿಶ್ವ ಕುಮಾರ್ ,ರಾಜೇಶ್ , ಆಕಾಶ್ ಮತ್ತು ಜೇಸಿರೇಟ್ ಪೂರ್ವಾ ಧ್ಯಕ್ಷರು, ಜೇಸಿ ಜೇಸಿರೆಟ್ ಸದಸ್ಯರು ಪಾಲುಗೊಂಡಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!