day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ನಮ್ಮ ಶಾಲೆ ನಮ್ಮ ಹೆಮ್ಮೆ ವಿಶೇಷ ಕಾರ್ಯಕ್ರಮ ತಪ್ಪದೇ ವೀಕ್ಷಿಸಿ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ನಮ್ಮ ಶಾಲೆ ನಮ್ಮ ಹೆಮ್ಮೆ ವಿಶೇಷ ಕಾರ್ಯಕ್ರಮ ತಪ್ಪದೇ ವೀಕ್ಷಿಸಿ.#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನಮ್ಮ ಶಾಲೆ ನಮ್ಮ ಹೆಮ್ಮೆ……..

ಪ್ರಗತಿ ಪಥದತ್ತ ನೀಡುವ ಶಾಲೆ….
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿಡುವಾಳೆ,
ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಇಲ್ಲಿ ವಿದ್ಯಾಭಿಮಾನಿಗಳ, ಊರವರ,
ಹಳೆ ವಿದ್ಯಾರ್ಥಿಗಳ, ದಾನಿಗಳ ಸಹಕಾರದಿಂದ ಮತ್ತು ಎಸ್.ಡಿ.ಎಂ.ಸಿ‌ ಮೂಲಕ ಅಭಿವೃದ್ಧಿ ಪತದಲ್ಲಿ ಸಾಗುತ್ತಿರುವ ಹಳ್ಳಿಗಾಡಿನ ಸರ್ಕಾರಿ‌ ಶಾಲೆ…ನೆಡುವಾಳೆ ಶಾಲೆ.

೧೯೩೫ರಲ್ಲಿ ಆರಂಭವಾಗಿರುವ ಈ ಶಾಲೆ.. ಸುತ್ತ-ಮುತ್ತಲ ಬಡ, ಹಿಂದುಳಿದ ಜನಾಂಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ‌ ಹೊಂದಿದೆ..
ಮಲೆನಾಡಿನ ಸುಂದರ ಪರಿಸರದಲ್ಲಿರುವ ಈ ಶಾಲೆ ಹೇಮಾವತಿ‌ ನದಿ‌ ಮೂಲದಿಂದ ಅನತಿ ದೂರದಲ್ಲಿದು ವಿದ್ಯಾಭಿಮಾನಿಗಳ ನೆಚ್ಚಿನ ತಾಣ..
ಅರಿಶಿನ ಹಕ್ಲು ಎಸ್ಟೇಟಿನ ಮಾಲೀಕರಾಗಿದ್ದ ಶ್ರೀ ಪ್ರವೀಣ ಗುರ್ಜರ್, ಉರುವಿನಖಾನ್ ಎಸ್ಟೇಟ್ ಮಾಲೀಕರಾಗಿದ್ದ ಶ್ರೀ ಯು.ಕೆ.ಲಕ್ಷ್ಮಣ ಗೌಡ್ರು, ಸೇಂಟ್ ಮೆರೀಸ್ ಕಲ್ಮನೆ ಎಸ್ಟೇಟ್ ಮಾಲೀಕರಾದ ಶ್ರೀ ಅವಿನಾಶ್ ಪ್ರಭು ಮುಂತಾದವರು ಶಾಲೆಯ ಸರ್ವಾಂಗೀಣ ಏಳಿಗೆಗೆ ಕಾರಣೀಕರ್ತರಾಗಿದ್ದರು..

ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅಧ್ಯಾಪಕ ವೃಂದ ನಿಸ್ವಾರ್ಥ ಹಾಗು ಪ್ರಾಮಾಣಿಕ ಸೇವೆಯಿಂದ ಶಾಲೆಯ ಸುತ್ತಮುತ್ತ ಮನೆ ಮಾತಾಗಿತ್ತು.
ಹಲವಾರು ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದ ಶಾಲೆ
ಮಣ್ಣಿನ ಗೋಡೆ,
ಹಸಿ ಇಟ್ಟಿಗೆ ಗೋಡೆಯಿಂದ ನಿರ್ಮಾಣ ಹೊಂದಿದ್ದು ಶಿಥಿಲಾವಸ್ಥೆ ಹೊಂದಿತ್ತು.. ಮೇಲ್ಚಾವಣಿ ಗೆದ್ದಲು ಹಿಡಿದಿತ್ತು.. ಕಿಟಕಿ ಬಾಗಿಲುಗಳು ಮುರಿಯಲಾರಂಭಿಸಿದವು ಹಂಚುಗಳು ಮಳೆನೀರಿಗೆ ಜಿನುಗುತ್ತಿದ್ದವು ಶಾಲಾ ವಾತಾವರಣ ಆಧುನಿಕ ಅಭಿರುಚಿಯಿಂದ ದೂರವಾಗುತ್ತಿತ್ತು.
ಕಳೆದ ವರ್ಷ ಸುರಿದ ಭಾರೀ ಮಳೆಗೆ ಬಿರುಕು ಬಿಟ್ಟು ಬೀಳುವ ಹಂತ ತಲುಪಿತ್ತು.
ಈ ನಡುವೆ ಮುಖ್ಯ ಶಿಕ್ಷಕರಾದ ಶ್ರೀ ತಿಮ್ಮಯ್ಯನವರ ವಯೋನಿವೃತ್ತಿ ನಂತರ ಶ್ರೀ ಪೂರ್ಣೇಶ.ವಿ. ಪಿ. ಇವರು ಪ್ರಭಾರ ವಹಿಸಿಕೊಂಡ ನಂತರ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಗುರುರಾಜ್ ಮತ್ತು ವಿದ್ಯಾಭಿಮಾನಿಗಳ ತಂಡ ಶಾಲೆಯ ಅಭಿವೃದ್ಧಿಗೆ ಯೋಜನೆ ತಯಾರಿಸಿತು. ದಾನಿಗಳ ಸಹಕಾರ ಅಪೇಕ್ಷಿಸಿತು,
ಇರುವ ಶಾಲೆಯ ಅಲ್ಪ ಸ್ವಲ್ಪ ಸಂಪನ್ಮೂಲ ಕ್ರೂಢೀಕರಿಸಿ ಕೆಲಸ ಆರಂಭಿಸಿತು.
ಕೊಠಡಿಯ ನೆಲದಿಂದ ನೀರು ಜಿನುಗುವುದು ತಪ್ಪಿಸಲು ಫೌಂಡೇಶನ್ ಗಿಂತ ಎತ್ತರವಿದ್ದ ಮಣ್ಣನ್ನು ತೆಗೆದು ಎರಡು ಅಡಿ ಆಳದಿಂದ ಸಿಮೆಂಟ್ ಪ್ಲಾಸ್ಟರ್ ಮಾಡಿಸಲಾಯಿತು, ಕಿಟಕಿಗಳು ಗೆದ್ದಲು ತಿಂದಿದ್ದರಿಂದ ಅವುಗಳನ್ನು ತೆಗೆದು ಹೊಸದಾಗಿ ರಿಪೇರಿ ಮಾಡಿದ ಕಿಟಕಿ ಅಳವಡಿಸಲಾಯಿತು.
ಶ್ರೀ ಸತೀಶ್ ಮರ್ಕಲ್ ಇವರು ಕಿಟಕಿಗಳಿಗೆ ಕಬ್ಬಿಣದ ಸರಳು ಒದಗಿಸಿದರು,
ಶ್ರೀಮತಿ ಪ್ರಮೀಳಾ ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನದಿಂದ ಎರಡುವರೆ ಲಕ್ಷ ಅನುದಾನದಲ್ಲಿ ಎರಡು ಕೊಠಡಿಗಳ ಮೇಲ್ಚಾವಣಿ ದುರಸ್ತಿ ಆಯಿತು. ಮೂಡಿಗೆರೆಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಕುಮಾರಸ್ವಾಮಿಯವರು ನೆರೆ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ಅನುದಾನ ಒದಗಿಸಿದರು, ಇದರಿಂದ ಎರಡು ಕೊಠಡಿಗಳ ಮೇಲ್ಚಾವಣಿ ದುರಸ್ತಿಯಾಯಿತು .
ಗ್ರಾಮ ಪಂಚಾಯಿತಿ ನೀಡುವಾಳೆ ಇವರು ನೀಡಿದ 26 ಸಾವಿರ ರೂಪಾಯಿಗಳಿಂದ ನಾಲ್ಕು ಬಾಗಿಲು ಬಂದೋಬಸ್ತ್ ಆದವು.
ಗ್ರಾಮ ಪಂಚಾಯಿತಿ ನೀಡುವಾಳೆ ಇವರು ನೀಡಿದ 100000 ಹಣದಿಂದ ಶಾಲೆಯ ಆಸುಪಾಸಿನ ಮಣ್ಣು ತೆಗೆಸಿ ಸಮತಟ್ಟು ಮಾಡಲಾಯಿತು. ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯಿಂದ ಆಟದ ಮೈದಾನವನ್ನು 2 ಲಕ್ಷ ಅನುದಾನದಲ್ಲಿ ದುರಸ್ತಿ ಗೊಳಿಸಲಾಯಿತು.
ಶಾಲೆಯ ಅಭಿವೃದ್ಧಿ ಕೆಲಸಗಳಿಗೆ ಹಲವಾರು ದಾನಿಗಳು ನೆರವಾದರು, ಕೋವಿಡ್ 19 ಲಾಕ್ಡೌನ್ ನಮ್ಮನ್ನು ಸ್ವಲ್ಪಕಾಲ ತಡೆಯಿತು.
ಶ್ರೀ ಗುರುರಾಜ್,
ಶ್ರೀ ಸೋಮೇಶ್,
ಶ್ರೀ ಚಂದ್ರಶೇಖರ್,
ಶ್ರೀ ರತ್ನಾಕರ್ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಪೂರ್ಣೇಶ್ .ವಿ.ಪಿ ಶ್ರೀಮತಿ ರಮ್ಯಶ್ರೀ ಇವರುಗಳ ತಂಡ, ಮಹಾದಾನಿಗಳಾದ
ಶ್ರೀ ಸುನಿಲ್ ಗೌಡರನ್ನು ಭೇಟಿ ಮಾಡಿ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಲಾಯಿತು. ಶ್ರೀ‌ನಾಗರಾಜ್ ಭಟ್ ಇವರೊಂದಿಗೆ ಪರಾಮರ್ಶಿಸಿದ ದಾನಿಗಳಾದ
ಶ್ರೀ ಸುನಿಲ್ ಗೌಡರು ದೂರದರ್ಶಿತ್ವ, ಗುಣಮಟ್ಟ, ವಿಶ್ವಾಸಾರ್ಹತೆಯ ಕಾಮಗಾರಿ ಆರಂಭಿಸಿದರು. ಶಾಲೆಗೆ ಹೊಂದಿಕೊಂಡಿದ್ದ ಮಣ್ಣನ್ನು ಒಂದು ವಾರ ಕಾಲ ಶ್ರಮವಹಿಸಿ ತಗೆಸುವುದರೊಂದಿಗೆ ಶಾಲೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿದರು ನಾಲ್ಕು ಕೊಠಡಿಗಳಿಗೆ ಟೈಲ್ಸ್ ಅಳವಡಿಸಿದರು, ವರಾಂಡಕ್ಕೆ ಗ್ರಾನೈಟ್ ಅಳವಡಿಸಲು ನೆರವಾದರು. ಮುಖ್ಯ ಶಿಕ್ಷಕರ ಕೊಠಡಿಗೆ ಟೈಲ್ಸ್ ಅಳವಡಿಸಿದರು. ವರಾಂಡಕ್ಕೆ ಗ್ರಾನೈಟ್ ಅಳವಡಿಸಲು ನೆರವಾಗಿದ್ದಾರೆ.
ನಾಲ್ಕು ಕೊಠಡಿಗಳಿಗೆ ಗೋಡೆಯಲ್ಲಿ ಪೇಂಟಿಂಗ್ ಮಾಡಿಸಲು ಹಳೆಯ ಸುಣ್ಣ ಬಣ್ಣವನ್ನು ಸಂಪೂರ್ಣ ಕೆರೆಸಿ ತೆಗೆಸಲಾಯಿತು. ನಾಲ್ಕು ಕೊಠಡಿಗಳಿಗೆ
ಲಪ್ಪ ಫಿನಿಶಿಂಗ್ ನೊಂದಿಗೆ ಪೇಂಟಿಂಗ್ ಕಾರ್ಯ ಪ್ರಗತಿಯಲ್ಲಿದೆ.
ಮಕ್ಕಳ ಕಲಿಕೆಗೆ ಪೂರಕವಾಗುವ ಡ್ರಾಯಿಂಗ್ ಕಾರ್ಯಕ್ಕಾಗಿ ರೂಪುರೇಷೆ ತಯಾರಿಸಿದೆ . ಶಾಲೆಗೆ ಅಗತ್ಯವಿದ್ದ ವಿದ್ಯುತ್ ಸಂಪರ್ಕವನ್ನು ಉನ್ನತ-ಗುಣಮಟ್ಟದಲ್ಲಿ ನೆರವೇರಿಸಿ ಕೊಟ್ಟಿರುತ್ತಾರೆ. ಮಹಾದಾನಿ ಶ್ರೀ‌ಸುನೀಲ್ ಗೌಡರು ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಪಟ್ಟಿ ಮಾಡುವಂತೆ ಹಾಗೂ ಕ್ರಿಯಾಯೋಜನೆ ತಯಾರಿಸುವಂತೆ ತಿಳಿಸಿರುತ್ತಾರೆ.
ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಹಳ್ಳಿಗಾಡಿನ ಸರ್ಕಾರಿ ಶಾಲೆಯನ್ನು ಅತ್ಯುನ್ನತ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಶಾಲೆಯ ಅಗತ್ಯ ಸೌಕರ್ಯಗಳ ಜೊತೆಗೆ ಮಾರುತಿ ಮೆಡಿಕಲ್ಸ್, ಬೆಂಗಳೂರು ಇವರಿಂದ 175000 ಮೌಲ್ಯದ 17500 ನೋಟ್ ಪುಸ್ತಕಗಳನ್ನು ದಾನ ರೂಪದಲ್ಲಿ ಪಡೆಯಲಾಗಿದೆ. ಬೆಂಗಳೂರಿನಿಂದ ಪುಸ್ತಕಗಳನ್ನು ಶಾಲೆಗೆ ತರಲು ಶ್ರೀ ಚಂದ್ರಶೇಖರ್, ಶ್ರೀ ನಾಗರಾಜ್ ಭಟ್ ಇವರು ಧನಸಹಾಯ ನೀಡಿದ್ದಾರೆ.
ಶ್ರೀ ನವೀನ್ ಹಾವಳಿ ಮತ್ತು ಶ್ರೀ ಸೋಮೇಶ್ ಇವರು
30 ನಲಿ ಕಲಿ ಛೇರ್ ಗಳಿಗೆ ಸಹಕರಿಸುವ ಭರವಸೆ ನೀಡಿದ್ದಾರೆ.
ನಲಿಕಲಿ ತರಗತಿ ಕೊಠಡಿಗಳಲ್ಲಿ ಶ್ರೀ ಚಂದ್ರಶೇಖರ್‌ ಹಾಗೂ
ಶ್ರೀ ನಟೇಶ್ ಧನ ಸಹಕಾರ ನೀಡಿದ್ದಾರೆ.
ಆರು ಮತ್ತು ಏಳನೇ ತರಗತಿಗೆ ವಿದ್ಯಾಗಮ 2.0 ಪುನರಾರಂಭಗೊಂಡಗ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಸ್ಟ್ಯಾಂಡ್, ಮಾಸ್ಕ್ ನೀಡಿ ಸಹಕರಿಸಿದ್ದಾರೆ. ಶಾಲಾಭಿವೃದ್ಧಿಗೆ ರಾಮೇಶ್ವರ ಸ್ವತಶ್ಚಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ನಿಡುವಾಳೆ ಇವರು ಸಹಕರಿಸಿದ್ದಾರೆ.. ಮುಂದಿನ ದಿನಗಳಲ್ಲಿ ಕಾಂಪೌಂಡ್, ಉದ್ಯಾನವನ, ಇಂಗುಗುಂಡಿ ಮಾಡಿಕೊಡುವ ಭರವಸೆಯನ್ನು ನಿಡುವಾಳೆ ಗ್ರಾಮ ಪಂಚಾಯತಿ ಇತ್ತಿದ್ದಾರೆ. NDRF ಯೋಜನೆಯಡಿ 33 ಲಕ್ಷದಲ್ಲಿ 3 ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದೆ.
ಶಾಲೆಯ ಅಭಿವೃದ್ಧಿ ಕೆಲಸವಾಗಿರುವುದು ಕೆಲವಾರು,
ಆಗಬೇಕಿರುವ ಕೆಲಸ ಹಲವಾರು.
ದಾನಿಗಳ ಸಂತತಿ ಸಾವಿರವಾಗಲಿ,
ಭಾವಿ ಜನಾಂಗಕ್ಕೆ ನೀಡಿದ ಶೈಕ್ಷಣಿಕ ಸಹಕಾರ ಸನ್ಮಂಗಳವನ್ನುಂಟುಮಾಡಲಿ…

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author