Deer death due to dog attack at Mudigere Chikmagalur | ನಾಯಿ ದಾಳಿಗೆ ಜಿಂಕೆ ಸಾವು |ಮೂಡಿಗೆರೆ ಚಿಕ್ಕಮಗಳೂರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿಯಲ್ಲಿ ನಾಯಿಗಳ ದಾಳಿಯಿಂದ ಜಿಂಕೆಯೊಂದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸೋಮವಾರ ನಾಯಿಗಳ ಹಿಂಡು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಿದ್ದು ಉಗ್ಗೆಹಳ್ಳಿಯ ಗ್ರಾಮಕ್ಕೆ ಬಂದು ತೀವ್ರವಾಗಿ ಅಸ್ವಸ್ಥಗೊಂಡ ಜಿಂಕೆ ಕುಸಿದು ಬಿದ್ದಿದ್ದು ಉಗ್ಗೆಹಳ್ಳಿ ಗ್ರಾಮದ ಶಿವಕುಮಾರ್ ಎಂಬುವವರು ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿದ್ದರೂ ಕೂಡ ಜಿಂಕೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಂಗಳವಾರ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಸಿಎಪ್ ನಿರ್ಮಲಾ, ಆರ್ ಎಪ್ ಓ ಮೋಹನ್, ಪಾರೆಸ್ಟರ್ ಶಿವಕುಮಾರ್, ಗಾರ್ಡ್ ನಂದನ್ ಕುಮಾರ್ ಸುರೇಶ್, ಅರಣ್ಯ ವೀಕ್ಷಕ ಮುಳ್ಳಯ್ಯ, ಗ್ರಾಮಸ್ಥರಾದ ಮಂಜುನಾಥ್, ರೇವತಿ, ಶೋಬಾ, ಉಮೇಶ್ ಇದ್ದರು.