AVIN TV

Latest Online Breaking News

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಶಿವಾಜಿ ಮಹಾರಾಜರ ಜಯಂತಿಯ ಅದ್ಧೂರಿ ಕಾರ್ಯಕ್ರಮ.ತಪ್ಪದೇ ವೀಕ್ಷಿಸಿ#avintvcom

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಶಾರದಾ ದೇವಿ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಛತ್ರ ಪತಿ ಶಿವಾಜಿ ಮಹಾರಾಜ ಜಯಂತಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರಕಾರದ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರ ಇವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿರುವ ಶ್ರೀ ಜೀಜಾ ಮಾತಾ ವಿಶ್ವಚೇತನಾಭಿವೃದ್ದಿ ಸಂಸ್ಥೆಯು ಗಣನೀಯ ಸೇವೆಯನ್ನು ಗುರುತಿಸಿ ಶ್ರೀ ಶಾರದಾದೇವಿ ಬುದ್ದಿಮಾಂದ್ಯ ಮಕ್ಕಳ ವಸತಿಯ ವಿಶೇಷ ಶಾಲೆಗೆ 2020 ರ ರಾಜ್ಯ ಮಟ್ಟದ “ವಿಶೇಷ ಸಾಧನೆ” ಪ್ರಶಸ್ತಿ ಲಭಿಸಿದ್ದಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆದರ್ಶ ದಂಪತಿಗಳಾದ ಶಂಕರ ಶಿಂದೆ ಹಾಗೂ ಶಾಂತ ಶಿಂದೆ ಅವರಿಗೆ ಅಭಿನಂದನೆ ಸಲ್ಲಿಸಿ. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಮಾತನಾಡಿ ಏನು ಅರಿಯದ ತಿಳಿವಳಿಕೆ ಇಲ್ಲದ ಮಕ್ಕಳನ್ನು ತಮ್ಮ ಮಕ್ಕಳಂತೆ ಜೋಪಾನ ಮಾಡುತ್ತಿರುವದು ಶ್ಲಾಘನೀಯವಾದದ್ದು.ಹೆತ್ತ ತಂದೆ ತಾಯಿ ಇಂತಹ ಮಕ್ಕಳನ್ನು ಜೋಪಾನ ಮಾಡಲು ಕಷ್ಟಕರ ಇರುವಾಗ ಶಿಂದೆ ದಂಪತಿ ಮಾಡುತ್ತಿರುವದು ದೊಡ್ಡ ಸಾಧನೆ ಇವರಿಗೆ ನಮ್ಮದು ಸಹಕಾರ ಇದೆ ಅದೆ ರೀತಿ ಗ್ರಾಮ ಪಂಚಾಯತ ಮಟ್ಟದಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸರಕಾರ ಹಾಗೂ ಜನಪ್ರತಿನಿಧಿಗಳು ಎಲ್ಲಾ ರೀತಿಯಿಂದ ಸೌಲಭ್ಯ ಒದಗಿಸಿ ಸರ್ಕಾರದ ಅಡಿಯಲ್ಲಿ ಈ ಸಂಸ್ಥೆಗೆ ಜಾಗ ನೀಡಬೇಕೆಂದು ಹೇಳಿದರು ಶಿವಾಜಿ ಮಹಾರಾಜ ಹಾಗೂ ಜೀಜಾ ಮಾತಾ ಭಾವ ಚಿತ್ರ ಪೂಜೆಯನ್ನು ಕುಮಾರ ಮುಕ್ತಿಮಠ ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಕಲ್ಲೋತ್ತಿ ,ಶಿವ ಸೇನಾ ಜಿಲ್ಲಾಧ್ಯಕ್ಷ ದಾದಾಸಾಬ ಪಾಟೀಲ ,ಜಿಲ್ಲಾ ಕಾರ್ಯದರ್ಶಿ ರೂಪಾಲಿ ಪಾಟೀಲ ,ರಾಜ್ಯ ಮಾಧ್ಯಮ ಘಟಕ ಅಧ್ಯಕ್ಷ ಅವಿನ್ ಟಿವಿ ಕಾರ್ಯನಿರ್ವಾಹಕ ಸಂಪಾದಕರು ಕ್ರೈಂ ಫೈಲ್ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು ಮಹೇಶ ಶರ್ಮಾ ,ಎಂ ಎಂ ಎಸ್ ತಾಲೂಕಾಧ್ಯಕ್ಷ ಅನೀಲ ಭಾಮನೆ,ತುಳಜಪ್ಪಾ ಬಕಾರೆ ,ಬಸವರಾಜ್ ಬಡಕಾಲೆ,ಮಹಾಂತೇಶ ಸೋನಕರ ,ಆಗಮಿಸಿದ್ದರು . ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುನಂದಾ ಶಿಂದೆ ,ಉಪಾಧ್ಯಕ್ಷರಾದ ಸುಜಾತಾ ಜಾಧವ ,ಕಾರ್ಯದರ್ಶಿ ಶಂಕರ ಶಿಂದೆ ,ಸದಸ್ಯರಾದ ಅರ್ಚನಾ ಶಿಂದೆ ,ಅನಿತಾ ಕಬಾಲೆ ,ಶಿವಾಜಿ ಬಂಡಗರ ,ಸಂಗೀತಾ ಕಾಂಬಳೆ ಇವರಿಗೆ ವಿಶೇಷ ವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ ವರ್ಗ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

April 2021
M T W T F S S
 1234
567891011
12131415161718
19202122232425
2627282930  
error: Content is protected !!