26ನೇ ಮನೆಯಂಗಳದಲ್ಲಿ ತಿಂಗಳಸಾಹಿತ್ಯ ಕಾರ್ಯಕ್ರಮ.ತಪ್ಪದೇ ವೀಕ್ಷಿಸಿ.#avintvcom

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ. ಲಯನ್ಸ್ ಸಂಸ್ಥೆ ಮೂಡಿಗೆರೆ. ಕನ್ನಡ ಜಾನಪದ ಪರಿಷತ್ತು ಮೂಡಿಗೆರೆ. ಇವರ ಸಂಯುಕ್ತಾಶ್ರಯದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಬಣಕಲ್ ನ ಆಯೋಜನೆಯಲ್ಲಿ ಹಾರ್ ಗೋಡು ತುಂಬರಗಂಡಿಯಲ್ಲಿ 26ನೇ ಮನೆಯಂಗಳದಲ್ಲಿ ತಿಂಗಳಸಾಹಿತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ.ಸಾ.ಪ.ಬಣಕಲ್ ಹೋಬಳಿ ಅಧ್ಯಕ್ಷರಾದ ವಸಂತ್ ಹಾರ್ ಗೋಡು ಮಾತನಾಡಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಲು ಪೋಷಕರು ಹೆಚ್ಚು ಜವಬ್ದಾರಿ ವಹಿಸಬೇಕಾಗಿದೆ.ಇಂದಿನ ಆಧುನಿಕ ಯುಗದಲ್ಲಿ ಟಿ.ವಿ ಹಾಗೂ ಮೊಬೈಲ್ ಗಳಿಗೆ ಮಕ್ಕಳು ಹೆಚ್ಚು ಆಕರ್ಷಿತರಾಗಿ ಅವರಲ್ಲಿ ಸಾಹಿತ್ಯಾಭಿರುಚಿ ಕಡಿಮೆಯಾಗುತ್ತಿದೆ.ಆದ್ದರಿಂದ ಪೋಷಕರು ತಮ್ಮ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವ ಅಗತ್ಯತೆಯಿದೆ ಎಂದರು. ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕನ್ನಡ ಸಂಸ್ಕೃತಿ ಹಾಗೂ ಜಾನಪದದ ಮೂಲ ಅಡಗಿರುವುದು ಗ್ರಾಮೀಣ ಭಾಗದಲ್ಲಿ ಆಗಾಗಿ ಸಾಹಿತ್ಯ ಪರಿಷತ್ತು ಪ್ರತೀ ತಿಂಗಳು ಒಂದೊಂದು ಗ್ರಾಮದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆ ಗ್ರಾಮದ ಜಾನಪದ ಸಂಸ್ಕೃತಿಯ ಅನಾವರಣದ ಜೊತೆಗೆ ಅಲ್ಲಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಗುರುತಿಸುವ ಕಾರ್ಯದಲ್ಲಿ ತೊಡಗಿದೆ ಎಂದರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ಗೋಪಾಲ್ ಗೌಡ ಗ್ರಾಮದ ಜಾನಪದ ಕಲಾವಿದೆ ಚಂದ್ರಮ್ಮ ಇವರನ್ನು ಗೌರವಿಸಿ ಮಾತನಾಡಿ ಇಂತಹ ಹಿರಿಯರು ತಮ್ಮ ಕಲೆಯನ್ನು ಯಾವುದೇ ಕೀಳರಿಮೆಯಿಲ್ಲದೆ ಸಿಕ್ಕ ಅವಕಾಶವನ್ನು ಬಳಸಿ ಕಲೆಯ ಅನಾವರಣ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಕೊಂಡೊಯ್ಯಲು ಸಾಧ್ಯ ಎಂದರು. ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಬಕ್ಕಿ ಮಂಜುನಾಥ್. ಮಲ್ನಾಡ್ ಗಲ್ಫ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ. ಸಂಸ್ಕೃತಿ ಚಿಂತಕರಾದ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರವಿ.ಜಯಪಾಲ್.ಕೃಷ್ಣಪ್ಪ ಜಾವಳಿ.ಭುವನೇಂದ್ರ.ಸುರೇಶ್. ನಾಗರಾಜ್. ಗೀತಗಾಯನ ನಡೆಸಿಕೊಟ್ಟರು. ತಾಲ್ಲೂಕು ಕ.ಸಾ.ಪ ಕಾರ್ಯದರ್ಶಿ ಶಾಂತಕುಮಾರ್. ಸಂಚಾಲಕ ಪ್ರಕಾಶ್. ಸದಸ್ಯರಾದ ಭಕ್ತೇಶ್.ಶೇಖರಪ್ಪ. ಲಿಂಗರಾಜು.ಗ್ರಾಮಸ್ತರಾದ ರಮೇಶ್ ತುಂಬರಗಂಡಿ.ಟಿ.ಎನ್.ಲೋಕೇಶ್ ತುಂಬರಗಂಡಿ.ರತೀಶ್ ಹಾರ್ ಗೋಡು. ಆನಂದ.ವಿಜಯ ಸಫಲ್ಯ.ಗೋಪಾಲ್ ಪೂಜಾರಿ. ಪ್ರಶಾಂತ್. ಶೀಲಾ. ಕವಿತ.ಉಪಸ್ಥಿತರಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ