ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗಿರಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ.ತಪ್ಪದೇ ವೀಕ್ಷಿಸಿ.#avintvcom

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು. ದಿನಾಂಕ 21.02.2021 ರಂದು ಜಿಲ್ಲಾಡಳಿತ ಪೊಲೀಸ್ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದೊಂದಿಗೆ ಗಿರಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು, ಈ ಅಭಿಯಾನದಲ್ಲಿ ಜಿಲ್ಲೆಯ 110 ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು. ಮತ್ತು ಕಾಲೇಜು ಘಟಕದ ಲೀಡರ್ಸ್ ಗಳು ಉಪಸ್ಥಿತರಿದ್ದರು. .. ಸುಮಾರು 150ಕ್ಕೂ ಹೆಚ್ಚು ಚೀಲಗಳಲ್ಲಿ ಪ್ಲಾಸ್ಟಿಕ್ ಕವರ್ . ನೀರಿನ ಬಾಟಲ್, ಕಸಗಳನ್ನು ಸಂಗ್ರಹಿಸಿ ನಗರಸಭೆ ವಾಹನಗಳಿಗೆ ತುಂಬಿಸಲಾಯಿತು. ಈ ಸ್ವಚ್ಛತಾ ಸೇವಾ ಕಾರ್ಯಕ್ಕೆ ಭಾಗವಹಿಸಿದ ಎಲ್ಲರಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದರು……..ವರದಿ. ಮಗ್ಗಲಮಕ್ಕಿಗಣೇಶ್….. ಬ್ಯೂರೋ ನ್ಯೂಸ್