ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ.#avintvcom

ಡೀಸೆಲ್, ಪೆಟ್ರೊಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ. ದಿನಾಂಕ-19-02-2021ರಂದು ಶುಕ್ರವಾರ ಮೂಡಿಗೆರೆಯಲ್ಲಿ ತಾಲ್ಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘ ದ ನೇತೃತ್ವದಲ್ಲಿ ತಾಲ್ಲೂಕಿನ ಆಡಳಿತ ಪಕ್ಷವನ್ನು ಹೊರತು ಪಡಿಸಿ ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಪ್ರಗತಿ ಪರ ಸಂಘಟನೆಗಳ ಆಶ್ರಯದಲ್ಲಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಬೃಹತ್ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿತ್ತು. ಮೂಡಿಗೆರೆ ಪ್ರವಾಸಿ ಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿ ಭಟನೆ ಸಾಗಿ ಲಯನ್ಸ್ ವೃತ್ತದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿ ಭಟನೆಯಲ್ಲಿ ಭಾಗವಹಿಸಿದ ಹಲವಾರು ಪಕ್ಷದ ಮುಖಂಡರು ಸಂಘಟನೆಯ ಮುಖಂಡರು ಪ್ರತಿಭಟನೇ ಕುರಿತು ಮಾತನಾಡಿದರು ನಂತರ ತಾಲ್ಲೂಕು ಕಚೇರಿಗೆ ಗೆ ಹೋಗಿ ಮಾನ್ಯ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷರಾದ ನಾಗೇಶ್ ಯು ಬಿ, ಮಾಜಿ ಸಚಿವೆ ಡಾ.ಮೋಟಮ್ಮ, ಆಟೋ ಸಂಘದ ಗೌರವ ಅಧ್ಯಕ್ಷ ಅಮರನಾಥ್, ಬಿ ಎಸ್ ಪಿ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ. ಮಂಜುನಾಥ್, ತಾಲ್ಲೂಕು ಬಿ ಎಸ್ ಪಿ ಅಧ್ಯಕ್ಷ ಎಲ್ ಬಿ ರಮೇಶ್, ಸಿ ಪಿ ಐ ನ ರಾಜ್ಯ ಕಾರ್ಯದರ್ಶಿ ರುದ್ರಯ್ಯ, ಕ ರ ವೇ ತಾಲ್ಲೂಕು ಅಧ್ಯಕ್ಷ ಪ್ರಸನ್ನಗೌಡ, ರೈತ ಸಂಘದ ಜಿಲ್ಲಾದ್ಯಕ್ಷ ದುಗ್ಗಪ್ಪಗೌಡ, ಆಟೋ ಸಂಘದ ನಗರ ಘಟಕ ದ ಅಧ್ಯಕ್ಷ ಅಣ್ಣು , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೊರಟ ವೇದಿಕೆಯ ಕಾರ್ಯದರ್ಶಿ ಕೆ ಕೆ ರಾಮಯ್ಯ, ಬಿಳುಗುಳ ಆಟೋ ಸಂಘದ ಅಧ್ಯಕ್ಷ ಪುರುಶೊತ್ತಮ್, ಕೊಟ್ಟೀಗೆಹಾರ ಆಟೋ ಸಂಘದ ಅಧ್ಯಕ್ಷ ನಾಗೇಶ್, ಗೋಣಿಬೀಡು ಆಟೋ ಸಂಘದ ಅಧ್ಯಕ್ಷ ಸತೀಶ್, ಬಣಕಲ್ ಆಟೋ ಸಂಘದ ಅಧ್ಯಕ್ಷ ಅನಿಫ್, ತಾಲ್ಲೂಕು ಘಟಕದ ಕಾರ್ಯದರ್ಶಿ ನಾಗರಾಜ್, ನಗರ ಘಟಕದ ಕಾರ್ಯದರ್ಶಿ ಹನೀಫ಼್ , ಖಜಾಂಚಿ ರಾಜು.ಹಾಗೂ ಆಟೋ ಸಂಘದ ಎಲ್ಲ ಹೋಬಳಿಯ ಪಧಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಚಕ್ರಮಣಿ ಸುಧೀರ್ ಮಾಡಿದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com