AVIN TV

Latest Online Breaking News

ಜಮಖಂಡಿಯಲ್ಲಿ ಬಸವ ಭವನ ಆವರಣದಲ್ಲಿ ರೈತರ ಸಮಾವೇಶ.#avintvcom

Featured Video Play Icon

ಇಂದು ಜಮಖಂಡಿ ನಗರದಲ್ಲಿ ರೈತ ಜಾಗರಣಾ ವೇದಿಕೆ ಆಶ್ರಯದಲ್ಲಿ ನಗರದ ಬಸವ ಭವನ ಆವರಣದಲ್ಲಿ ರೈತರ ಸಮಾವೇಶ ನಡೆಸಲಾಯಿತು. ರೈತ ಜಾಗರಣ ವೇದಿಕೆ ಹಾಗೂ ಬಿಜೆಪಿ ಆಶ್ರಯದಲ್ಲಿ ನೂತನ ಕೃಷಿ ಕಾಯ್ದೆ ಜಾಗೃತಿ ಸಮಾವೇಶ ಜರುಗಿತು. ಕಾಂಗ್ರೆಸ್‌ ಆಡಳಿತದಲ್ಲಿ ಕೃಷಿ ಕಾಯ್ದೆಯನ್ನು ರೈತ ಮುಖಂಡ ಟಿಕಾಯತ್‌ ಸ್ವಾಗತಿಸಿದ್ದರು. ಆದರೆ, ಇಂದು ಅವರೇ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ನೂತನ ಕಾಯ್ದೆಯಿಂದ ಎಪಿಎಂಸಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಮಾತನಾಡಿ, ಸಮಾವೇಶದಲ್ಲಿ ಗ್ರಾಪಂ ಆಯ್ಕೆಯಾದ ಬಿಜೆಪಿ ಬೆಂಬಲಿತ ನೂತನ ಸದಸ್ಯರ ಸನ್ಮಾನ ನಡೆಸಲಾಯಿತು. ರಾಜ್ಯಸಭಾ ಸದಸ್ಯ ರೈತ ಜಾಗರಣ ವೇದಿಕೆ, ರಾಜ್ಯ ಸಂಚಾಲಕ ಈರಣ್ಣ ಕಡಾಡಿ ಇವರು ಮಾತನಾಡಿ ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರು. ಈ ಸಮಾವೇಶದಲ್ಲಿ ಹೆಚ್ಚು ರೈತರು ಪಾಲ್ಗೊಳ್ಳುಂಡರು . ರೈತರಿಗೆ ನೂತನ ಕೃಷಿ ಕಾಯ್ದೆಯಿಂದ ಆಗುವ ಲಾಭದ ಕುರಿತು ಜಾಗೃತಿ ಕಾರ್ಯಕ್ರಮ. ರಾಜ್ಯದಲ್ಲಿಪ್ರಥಮವಾಗಿ ಜಮಖಂಡಿಯಿಂದ ಜಾಗೃತಿಗೆ ಚಾಲನೆ ನೀಡಲಾಯಿತು. ರೈತ ಜಾಗರಣಾ ವೇದಿಕೆ ತಾಲೂಕಾಧ್ಯಕ್ಷ ಶೈಲೇಶ ಆಪ್ಟೆ, ಸಿದ್ದರಾಯ ಪಾಯಗೊಂಡ, ಬಸವರಾಜ ಮರನೂರ, ಪ್ರವೀಣ ಕಲ್ಯಾಣಿ, ಸದಾಶಿವ ಕವಟಗಿ, ಪ್ರದೀಪ ಮೆಟಗುಡ್ಡ, ರವಿ ಐಗಳಿ, ಧರೆಪ್ಪ ಮಂಟೂರ, ಮಹೇಶ ಖೆಬ್ಟಾಣಿ, ಮುತ್ತು ಲಕ್ಕನಗೌಡರ, ಶ್ರೀಶೈಲ ಪಾಟೀಲ, ಪ್ರಭು ಬಾಳಿಕಾಯಿ, ಸೇರಿದಂತೆ ಹಲವರು ಹಾಜರಿದ್ದರು. ವರದಿ ಪರಶುರಾಮ್. ಕಾಂಬಳೆ ಜಮಖಂಡಿ www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!