AVIN TV

Latest Online Breaking News

ಸ್ಪೂರ್ತಿ ಮಿತ್ರಮಂಡಳಿ ಅವರಿಂದ ನೂತನ ಅಧ್ಯಯನ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. #avintvcom

Featured Video Play Icon

ಸ್ಪೂರ್ತಿ ಮಿತ್ರಮಂಡಳಿ ಅವರಿಂದ ನೂತನ ಅಧ್ಯಯನ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು.                       ದಿನಾಂಕ 14 2 2020 ರ ಭಾನುವಾರ ಬೆಳಗ್ಗೆ ಸಮಯ 11 ಗಂಟೆಗೆ ಕಳಸ ಪೊಲೀಸ್ ಠಾಣೆಯ ಪಿಎಸ್ಐ. ಎ.ಬಿ. ಮಂಜಯ್ಯ ಅತ್ತಿಗೆರೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೂರ್ತಿ ಮಿತ್ರಮಂಡಳಿಯ ಟಿ.ಎಸ್. ಮಂಜುನಾಥ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ವಹಿಸಿದ್ದರು. ಅವರು ಮಾತನಾಡಿ ಗ್ರಾಮೀಣ ಭಾಗದ ಅವಕಾಶವಂಚಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹತ್ತರ ಕಾರ್ಯ ಸಾಧನೆಗೆ ಅಧ್ಯಯನ ಕೇಂದ್ರದಿಂದ ಪ್ರಯೋಜನವಾಗಬೇಕು ಎಂಬ ಸದುದ್ದೇಶದಿಂದ ಅಧ್ಯಯನ ಕೇಂದ್ರ ತೆರೆಯಲಾಯಿತು,  ಪ್ರತಿಯೊಬ್ಬರೂ  ಸರ್ಕಾರಿ ನೌಕರಿಯನ್ನು ಹಿಡಿಯುವಂತಹವರಾಗಬೇಕೆಂದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಗತ್ಯವಿರುವ ಪುಸ್ತಕಗಳನ್ನು ಒದಗಿಸಲಾಗಿದೆ, ಈ  ಅಧ್ಯಯನ ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.   ಉದ್ಘಾಟನಾ ಭಾಷಣ ಮಾಡಿದ ಪಿಎಸ್ಐ ಎಬಿ ಮಂಜಯ್ಯನವರು ಇಂತಹ ಕಾರ್ಯಗಳು ಗ್ರಾಮೀಣ ಭಾಗದ ಮಕ್ಕಳಿಗೆ ತುಂಬಾ ಸಹಕಾರಿಯಾಗಲಿದ್ದು ವಿದ್ಯಾರ್ಥಿಗಳು ಅಧ್ಯಯನ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿ ಶುಭಹಾರೈಸಿದರು.  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಣಕಲ್ ಠಾಣೆಯ ಪಿಎಸ್ಐ ಶ್ರೀನಾಥ್ ರೆಡ್ಡಿ ಅವರು ಮಾತನಾಡಿ ವಿದ್ಯಾರ್ಥಿಗಳು ಸದಾ ಓದುವುದಕ್ಕೆ ಹೆಚ್ಚು ಸಮಯವನ್ನು ನೀಡಬೇಕು ಹೆಚ್ಚು  ಜ್ಞಾನವಂತರಾಗಿ ಸಮಾಜದಲ್ಲಿ  ಮಾನವೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ನೀವು ಗಳಿಸಿದ ಜ್ಞಾನ ನಿಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಿ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಿ,  ನಾಗರೀಕ ಸೇವೆಯನ್ನು ಪಡೆಯುವಂತರಾಗಿ  ಇಂತಹ ಕಾರ್ಯಗಳಿಗೆ  ಸದಾ ಕೈ ಜೋಡಿಸುವೆ ಎಂದು  ಶುಭಹಾರೈಸಿದರು, ತರುವೆ ಗ್ರಾಮ  ಪಂಚಾಯಿತಿ ಅಧ್ಯಕ್ಷರಾದ ರವಿಕಲಾ  ಪೈ  ಮಾತನಾಡಿ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕೇಂದ್ರವನ್ನು ಸದುಪಯೋಗಪಡಿಸಿಕೊಂಡು ಸರ್ಕಾರಿ ನೌಕರಿಯನ್ನು ಹಿಡಿಯುವಂತವರಾಗಲಿ  ಎಂದು ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಿಎಂ ಭರತ್ ಮಾತನಾಡಿ ಕಾಲೇಜು ಮುಗಿಸಿ ಮುಂದಿನ  ತರಗತಿಗಳಿಗೆ ಅಥವಾ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ನಗರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ಅಧ್ಯಯನ ಕೇಂದ್ರದಲ್ಲಿರುವ ಪುಸ್ತಕಗಳು ಸಹಕಾರಿಯಾಗಲಿವೆ ನಾನು ಸದಾ ನಿಮ್ಮೊಂದಿಗೆ ಕೈಜೋಡಿಸುವ ಇಂತಹ ಒಳ್ಳೆಯ ಕಾರ್ಯಗಳಿಗೆ, ಎಂದು ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಗ್ರಾಮೀಣ ಭಾಗದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಈ ಕೇಂದ್ರದಲ್ಲಿರುವ ಪುಸ್ತಕಗಳು ಉಪಯುಕ್ತವಾಗಲಿದೆ ಅಧ್ಯಯನ ಕೇಂದ್ರದ ಉಪಯೋಗವನ್ನು ಈ ಭಾಗದ ವಿದ್ಯಾರ್ಥಿಗಳು ಸರಿಯಾಗಿ ಸದುಪಯೋಗಪಡಿಸಿಕೊಂಡಿದ್ದಾರೆ ಸರ್ಕಾರಿ ಉದ್ಯೋಗವನ್ನು ಪಡೆಯಬಹುದು ಮುಂದಿನ ದಿನಗಳಲ್ಲಿ ಸದಾ ನಿಮ್ಮೊಂದಿಗೆ ಅಭಿವೃದ್ಧಿಗೆ ಶ್ರಮಿಸುವೆ ಎಂದು ಶುಭ ಹಾರೈಸಿದರು, ಊರಿನ ಹಿರಿಯರಾದ ಟಿ ಎ ಖಾದರ್  ರವರು ಸಹ ಮಾತನಾಡಿ ಶುಭ ಹಾರೈಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಮಯ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸ್ಫೂರ್ತಿ ಮಿತ್ರಮಂಡಳಿಯ ಸಲಹೆಗಾರಾರಾದ ಜೈಪಾಲ್ ಬಿನ್ನಡಿ ರವರು  ಶುಭಹಾರೈಸಿದರು ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲರನ್ನು ಉಪನ್ಯಾಸಕರಾದ ಅವಿನಾಶ್ ತರುವೆ ಸ್ವಾಗತಿಸಿದರು ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ಭಕ್ತೇಶ್ ಶಿಕ್ಷಕರು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು,  ಕಾರ್ಯಕ್ರಮದಲ್ಲಿ ಪೂರ್ಣೇಶ್ ಪ್ರಾರ್ಥನೆಯನ್ನು ನೆರವೇರಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಪೊಲೀಸ್ ರವರು ನಡೆಸಿಕೊಟ್ಟರು. ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ಮತ್ತು ವಿದ್ಯಾರ್ಥಿಗಳನ್ನು ಬಾಳೂರು ರಜತ ರವರು ವಂದಿಸಿದರು. ಹಾಗೂ ಕಾರ್ಯಕ್ರಮಕ್ಕೆ ದಲ್ಲಿದ್ದ  ಮಂಜುನಾಥ್ ಬಾಳೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಅಭಿಲಾಶ್ ಅತ್ತಿಗೆರೆ,  ಸಂಜಯ್ ದೇವನಗೂಲ್, ಸತೀಶ್ ಹಳ್ಳಿಕೆರೆ,  ಪ್ರಭಾಕರ್ ಬಿನ್ನಡಿ,  ಕೃಷ್ಣಮೂರ್ತಿ ಕೊಟ್ಟಿಗೆಹಾರ,   ಕನ್ನಡ ಸಾಹಿತ್ಯ ಪರಿಷತ್  ಬಣಕಲ್ ಅಧ್ಯಕ್ಷರಾದ ವಸಂತ್ ಹಾರ್ಗೋಡು, ಸಂದೀಪ್ ಗುತ್ತಿಗೆದಾರರು ದಾನಿಗಳಾದ ಸುರೇಶ ಹೆಬ್ರಿಗೆ,  ರಾಜೇಶ್ ಜಾವಳಿ, ಹಾಗೂ ಮುಂತಾದವರಿದ್ದರು ಸ್ಪೂರ್ತಿ ಮಿತ್ರಮಂಡಳಿಯ ಸರ್ವ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದರು. ವರದಿ ಮಗ್ಗಲ ಮಕ್ಕಿಗಣೇಶ್ ನ್ಯೂಸ್ ಬ್ಯುರೋ ಅವಿನ್ ಟಿವಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

February 2021
M T W T F S S
1234567
891011121314
15161718192021
22232425262728
error: Content is protected !!