ಅಪಾಚೆ ಬೈಕ್ ಕಳವು ಸಿಸಿ ಕ್ಯಾಮರಾದಲ್ಲಿ ಸೆರೆ…#avintvcom

ಅಪಾಚೆ ಬೈಕ್ ಕಳವು ಸಿಸಿ ಕ್ಯಾಮರಾದಲ್ಲಿ ಸೆರೆ
ಕೊಡಗು: ಸಿದ್ದಾಪುರ ಪಟ್ಟಣದ ಫ್ಯಾಷನ್ ಜ್ಯುವೆಲ್ಲರಿಯ ಸಿಬ್ಬಂದಿ KA 55 E 2061 ಸಂಖ್ಯೆಯ ಅಪಾಚೆ ಬೈಕನ್ನು ನಿಲ್ಲಿಸಿ ಒಳಹೋಗುತ್ತಿದ್ದಂತೆ ಇಬ್ಬರು ಯುವಕರು ಸಂಚು ನಡೆಸಿ,ನಕಲಿ ಕೀ ಬಳಸಿ ಮುಖಚರ್ಯೆ ಕಾಣದಂತೆ ಹೆಲ್ಮೇಟ್ ಧರಿಸಿ ಕಳವು ಮಾಡಿರುವ ಘಟನೆ ನಡೆದಿದೆ. ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ,ಬೈಕಿನ ಮಾಲಿಕ ಅಫ್ನಾಸ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.