ಕೆಲವರಿಗೆ ಮೂವತ್ತು ಸಾವಿರದವರೆಗೂ ಪರಿಹಾರ ಬಂದಿದ್ದು ತಾರತಮ್ಯ ಉಂಟಾಗಿತ್ತು.#avintvcom

ಪರಿಹಾರ ತಾರತಮ್ಯ.
ಜಿಲ್ಲಾಧಿಕಾರಿಗಳಿಗೆ ಮನವಿ.
ಮೂಡಿಗೆರೆ ತಾಲೂಕ್
ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರುಗಳು ಅತಿವೃಷ್ಟಿ ಪೀಡಿತ ಪ್ರದೇಶಗಳ ಬೆಳೆ ಪರಿಹಾರ ಯೋಜನೆಯ ಅಡಿಯಲ್ಲಿ ರೈತರಿಗೆ ಬರಬೇಕಾದ ಪರಿಹಾರ ದಲ್ಲಿ ಉಂಟಾಗಿರುವ ತಾರತಮ್ಯ ಹೋಗಲಾಡಿಸಿ ಎಲ್ಲರಿಗೂ ಸಮಾನವಾಗಿ ಎಕರೆಗೆ 7ಸಾವಿರ ರೂಪಾಯಿಗಳಂತೆ ಪರಿಹಾರ ನೀಡಲು ಮತ್ತು ಕೆಲವರಿಗೆ ಪರಿಹಾರ ಬಂದಿದ್ದು ಇನ್ನೂ ಕೆಲವರಿಗೆ 2ಸಾವಿರ 1ಸಾವಿರ ರೂಪಾಯಿಗಳಂತೆ ಪರಿಹಾರ ಬಂದಿದ್ದು ಕೆಲವರಿಗೆ ಮೂವತ್ತು ಸಾವಿರದವರೆಗೂ ಪರಿಹಾರ ಬಂದಿದ್ದು ತಾರತಮ್ಯ ಉಂಟಾಗಿತ್ತು.
ಮತ್ತು ಬಹುತೇಕ ರೈತರಿಗೆ ಇನ್ನೂ ಪರಿಹಾರ ಬಂದಿರುವುದಿಲ್ಲ .ಕೂಡಲೇ ಪರಿಹಾರ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು.
ಪರಿಹಾರ ಸರಿಯಾಗಿ ವಿತರಣೆ ಅಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಏಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮರಗುಂದಪ್ರಸನ್ನ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಎಚ್ ಎಚ್ ದೇವರಾಜ್, ನಿಶಾಂತ್ ಪಟೇಲ್, ವಾಸುದೇವ್ ಸತ್ತಿಗನಹಳ್ಳಿ ,
ಸಂದೀಪ್ ಕುಂಬರಡಿ,
ಐವತ್ತಕ್ಕೂ ಹೆಚ್ಚು ರೈತರು ಹಾಜರಿದ್ದು ಮನವಿ ಪತ್ರವನ್ನು ನೀಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.