ಶೃಂಗೇರಿಯ ಅತ್ಯಾಚಾರ ಪ್ರಕರಣದ ವಿಚಾರವಾಗಿ ಭಜರಂಗದಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. #avintvcom

ಆರೋಪಿಗಳು ನಮ್ಮ ಸಂಘಟನೆಗಳ ಕಾರ್ಯಕರ್ತರಲ್ಲ.
ಶೃಂಗೇರಿಯ ಅತ್ಯಾಚಾರ ಪ್ರಕರಣದ ವಿಚಾರವಾಗಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ.
ಆ ಪ್ರಕರಣಕ್ಕೂ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ. ಎಂದು ಅವಿನಾಶ್ ಹೇಳಿದರು.
ನಮ್ಮ ಸಂಘಟನೆಯ ಜವಾಬ್ದಾರಿಯುತ ಕಾರ್ಯಕರ್ತರು ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ.
ಬೇರೆ ಪಕ್ಷಗಳ ಹಾಗೂ ಸಂಘಟನೆಗಳ ಕುತಂತ್ರದಿಂದ ಹಿಂದೂಪರ ಸಂಘಟನೆಗಳ ಹೆಸರು ಈ ವಿಚಾರದಲ್ಲಿ ಕೇಳಿಬರುತ್ತಿದೆ ಎಂದರು.
ಬಣಕಲ್ ವಿನಯ್ ಶೆಟ್ಟಿ ಮಾತನಾಡಿ ಈ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಸಾಲುಮರ ಮಹೇಶ್ ಮಾತನಾಡಿ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂಬುದು ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳದ ಒತ್ತಾಯವಾಗಿದೆ. ನಮ್ಮ ಸಂಘಟನೆ ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದರು.
ಪ್ರವೀಣ ಪೂಜಾರಿ ಮಾತನಾಡಿ ಶಲ್ಯ ಹಾಕಿದೊಡನೆ ಹಿಂದೂಪರ ಸಂಘಟನೆಯ ಕಾರ್ಯಕರ್ತನಾಗುವುದಿಲ್ಲ. ಹಿಂದೂಪರ ಸಂಘಟನೆಯ ಮುಖಂಡರು ಕಾರ್ಯಕರ್ತರು ಅತ್ಯಾಚಾರ ಸಂತ್ರಸ್ತೆಯ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿ ಆರೋಪಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.