AVIN TV

Latest Online Breaking News

ಜೇಸಿ ವತಿಯಿಂದ ಗೋಣಿಬೀಡು ಹೊಯ್ಸಳ ಜೆಸಿಐ ನ ಪೂರ್ವಾಧ್ಯಕ್ಷರಾದ ಕೆ.ಡಿ. ಸುರೇಶ್ ರವರಿಗೆ ಶ್ರದ್ಧಾಂಜಲಿ#avintvcom

ದಿನಾಂಕ : 04-02-2021 ರಂದು ಗುರುವಾರ ಮೂಡಿಗೆರೆ ಜೇಸಿ ವತಿಯಿಂದ ಗೋಣಿಬೀಡು ಹೊಯ್ಸಳ ಜೆಸಿಐ ನ ಪೂರ್ವಾಧ್ಯಕ್ಷರಾದ ಕೆ.ಡಿ. ಸುರೇಶ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು. ಮೂಡಿಗೆರೆ ಜೇಸಿ ಪೂರ್ವಾಧ್ಯಕ್ಷರಾದ ನಯನ ಕಣಚೂರು ಮಾತನಾಡಿ ಸುರೇಶರವರು ಒಬ್ಬ ಉತ್ತಮ ನಾಯಕನಾಗಿ, 2018ರ ಅವರ ಅವಧಿಯಲ್ಲಿ ಹಲವಾರು ಕಾರ್ಯಕ್ರಮ, ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಆಯೋಜಿಸಿದ್ದರು, ಇವರ ಅವಧಿಯಲ್ಲಿ ಗೋಣಿಬೀಡು ಹೊಯ್ಸಳ ಜೇಸಿಯನ್ನು ವಲಯ ಮಟ್ಟದಲ್ಲಿ ಗುರುತಿಸಲ್ಪಟ ವ್ಯಕ್ತಿ, 28-01-2021 ರಂದು ಗೋಣಿಬೀಡು ಹೊಯ್ಸಳ ಜೇಸಿ ನೂತನ ಪದಗ್ರಹಣ ಸಮಾರಂಭದಲ್ಲಿ ಸುರೇಶ್ ಹಾಗೂ ಹಲವು ಪೂರ್ವಾಧ್ಯಕ್ಷರು ಹಾಗೂ ಸದಸ್ಯರ ಜೊತೆ ಮೂಡಿಗೆರೆ ಜೇಸಿ ಯವರು 2 ಗಂಟೆಗಳ ಕಾಲ ಜೊತೆಗೂಡಿದ್ದೆವು ಸುರೇಶ ವರು ಮೂಡಿಗೆರೆ ಜೇಸಿಯವರು ಪದಗ್ರಹಣ ಸಮಾರಂಭಕ್ಕೆ ಹೋದಾಗ ನಮ್ಮೆಲ್ಲರನ್ನು ಸ್ವಾಗತಿಸಿ ಬರಮಾಡಿಕೊಂಡಿದ್ದರು ಅಂತಹ ವ್ಯಕ್ತಿ 2 ದಿನದಲ್ಲಿಯೇ ಅವರ ಆಕಾಲಿಕ ನಿಧನವನ್ನು ಕೇಳಿದಾಗ ನನಗೆ ಅಘಾತವಾಯಿತ್ತು, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ದುಃಖ ಬರಿಸುವ ತ್ರ್ಯೆರ್ಯ ತುಂಬಲಿ ಎಂದು ಹೇಳಿದ್ದರು. ಜೇಸಿ ಪೂರ್ವಾಧ್ಯಕ್ಷರಾದ ಶಶಿಕರಣ್ ಮಾಕೋನಹಳ್ಳಿ ಮಾತನಾಡಿ ಸುರೇಶ್ ರವರು ಒಳ್ಳೆಯ ನಾಯಕ ಗುಣವನ್ನು ಹೊಂದಿದ್ದವರು ಅವರ ಆಕಾಲಿಕ ಮರಣ ನಮ್ಮೆಲ್ಲರಿಗೂ ಆಘಾತ ತಂದಿದೆ ಜೇಸಿ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ನಾನು- ಅವರು 2018ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾಯ೯ನಿರ್ವಾಹಿಸಿದ್ದವರು ನಾನು ಮೂಡಿಗೆರೆ ಅವರು ಗೋಣಿಬೀಡು ನನಗೆ ಅವರ ಜೊತೆ ತುಂಬ ಒಡನಾಟವನ್ನು ಹಿಟ್ಟು ಕೊಂಡಿದೆ ಅವರು ಗೋಣಿಬೀಡು ಜೇಸಿ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಮಾಡಿ ಹೆಸರು ಮಾಡಿದಂತಹ ವ್ಯಕ್ತಿ ಅಂತಹ ಸುರೇಶ್ ರವರ ನಿಧನ ನಮಗೆ ನೋವು ವನ್ನು ಉಂಟು ಮಾಡಿದೆ ಎಂದು ತಿಳಿಸಿದರು. ಕಾರ್ಯ ಕ್ರಮದಲ್ಲಿ ಮೂಡಿಗೆರೆ ಜೇಸಿ ಅಧ್ಯಕ್ಷರಾದ ಜೇಸಿ ಚಂದ್ರಶೇಖರ್ ಕುನ್ನಹಳ್ಳಿ, ಜೇಸಿ ಕಾರ್ಯದರ್ಶಿ ಶ್ರೇಷ್ಠಿ, ಜೇಸಿ ಪೂರ್ವಾಧ್ಯಕ್ಷರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಆದ ಗಣೇಶ್ ಮಗ್ಗಲಮಕ್ಕಿ ಯವರು, ಹಾಗೂ ಪೂರ್ವಾಧ್ಯಕ್ಷರು ದಾರದಹಳ್ಳಿ ಸಹಕಾರ ಕೃಷಿ ಪತ್ತಿನ ಅಧ್ಯಕ್ಷರು ಆದ ರವಿ ಹಾಲೂರು, ಜೇಸಿ ಪೂರ್ವಾಧ್ಯಕ್ಷರುಗಳಾದ ವಿನೋದ್ ಕುಮಾರ್, ತೇಜಸ್ವಿಯವರು, ವಿಜಯ್ ಕುಮಾರ್, ಹರೀಶ್. ಟಿ , ನಾಗೇಶ್ ಮಾಡ್ಕಲ್,ಆಶೋಕ್ ರವರು, ಜೇಸಿ ವಿಶ್ವಕುಮಾರ್, ಹಾಗೂ ಹಲವಾರು ಜೇಸಿ ಸದಸ್ಯರು ಪಾಲುಗೊಂಡಿದ್ದರು. ಎಲ್ಲಾರೂ ಸುರೇಶರವರಿಗೆ ಮೌನಚರಣೆ, ಪುಷ್ಟ ನಮನವನ್ನು ಮಾಡಲಾಯಿತ್ತು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!