AVIN TV

Latest Online Breaking News

ನಳಂದ ಶಾಲೆಯಲ್ಲಿನಡೆದ ರಾಷ್ಟ್ರೀಯ ಭಾವೈಕ್ಯತಾ ದಿನಚರಣೆ ಯಲ್ಲಿ ಅಧ್ಯಕ್ಷರಾದ ಚಂದ್ರ ಶೇಖರ್ ಕುನ್ನಹಳ್ಳಿ#avintvcom

ದಿನಾಂಕ : 02-02 2021 ರಂದು ಮಂಗಳವಾರ ಬೆಳಗ್ಗೆ 9.20ಕ್ಕೆ ಮೂಡಿಗೆರೆ ಜೇಸಿಐ ಹಮ್ಮಿಕೊಂಡಿದ್ದ  ನಳಂದ ಶಾಲೆಯಲ್ಲಿನಡೆದ ರಾಷ್ಟ್ರೀಯ ಭಾವೈಕ್ಯತಾ ದಿನಚರಣೆ ಯಲ್ಲಿ ಜೇಸಿ ಅಧ್ಯಕ್ಷರಾದ ಚಂದ್ರ ಶೇಖರ್ ಕುನ್ನಹಳ್ಳಿ ಯವರು ಎಲ್ಲಾರಿಗೂ ಸ್ವಾಗತಿಸಿ,  ಭಾರತದಲ್ಲಿ ಅನೇಕ ಧರ್ಮ, ಅನೇಕ ಜಾತಿಯಿಂದ ಕೂಡಿದ್ದು ಎಲ್ಲಾರೂ ಸಹೋದರ ಸಹೋದರಿಯಂತೆ  ಭಾವೈಕ್ಯತೆ ಇಂದ ಬದುಕಬೇಕು ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಸರ್ವ ಜನಾಂಗದ

ಶಾಂತಿಯ ತೋಟದ ಹೂವಿನ ಹಾಗೆ ಬದಕಬೇಕು ಎಂದು ತಿಳಿಸಿದ್ದರು.

ನಂತರ ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತೆ ಪ್ರಮಾಣ ವಚನ ಭೋದನೆ ನೀಡಿದರು ನಾನು ನಳಂದ ಶಾಲೆಯ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಆರೋಗ್ಯಕರ ಹಾಗೂ ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಸರ್ವರ ಮನವೊಲಿಸಿ ಪ್ರೇರಣೆ ನೀಡುತ್ತೇವೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಹಾಗೂ ನನ್ನ ಶಾಲೆ,ದೇಶಕ್ಕೆ ಗೌರವ ತರುವ ತತ್ವಗಳನ್ನು ಆದರಿಸುತ್ತೇನೆ, ಸುಳ್ಳು,ವಂಚನೆ, ಕಳ್ಳತನಕ್ಕೆಒಳಗಾಗುವ ಅಮಿಷ ಗಳಿಂದ ದೂರವಿರುತ್ತೇನೆ ಪ್ರಾಮಾಣಿಕತೆ ವೈಯಕ್ತಿಕತೆ ಇತರರಿಗೆ ಗೌರವ ನೀಡುವ ಜವಾಬ್ದಾರಿಯನ್ನು ಜೀವನದುದ್ದಕ್ಕೂ ಪಾಲಿಸುತ್ತೇನೆಂದು ವಚನ ನೀಡುತ್ತೇನೆ.

ಈ ಪ್ರಮಾಣ ವಚನವನ್ನು ಸ್ವಯಿಚ್ಚೆಯಿಂದ ಮತ್ತು ಸ್ವಪ್ರೇರಣೆಯಿಂದ ಪಡೆದುಕೊಳ್ಳತ್ತಿದ್ದೇನೆ ಎಂದು ಭೋಧಿಸಿದ್ದರು. ಕಾರ್ಯಕ್ರಮದಲ್ಲಿ ಜೇಸಿ ಕಾರ್ಯದರ್ಶಿ  ಶ್ರೇಷ್ಠಿ ವಂದಿಸಿದರು. ಕಾರ್ಯಕ್ರಮದಲ್ಲಿ ಜೇಸಿರೇಟ್ ಅಧ್ಯಕ್ಷರಾದ ಸುಧಾಚಂದ್ರಶೇಖರ್ , ಜೇಸಿರೆಟ್ ಪೂರ್ವಾಧ್ಯಕ್ಷರಾದ ಪವನ ವಿಜಯ್ ರವರು, ಹಾಗೂ ಸ್ವಾತಿ ವಿನೋದ್ ರವರು,  ಜೇಸಿ ನಿಕಟ ಪೂರ್ವಾಧ್ಯಕ್ಷರಾದ ರವಿಕುಮಾರ್, ಜೇಸಿ ಖಜಾಂಚಿ

ಹಮೀದ್, ಜೇಸಿ ಸುನೀಲ ಜೆಜೆಸಿ ರಾಣಿ ಚಂದ್ರಶೇಖರ್ , ನಳಂದ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ದವರು ಪಾಲುಗೊಂಡಿದ್ದರು.

ನಳಂದ ಶಾಲೆಯ ಕನ್ನಡ ಪ್ರಾಧ್ಯಾಪಕರು ಆದ ವಿರೂಪಕ್ಷ ಸರ್ ಮಾತನಾಡಿ ಒಂದು ಉತ್ತಮವಾದ ಸಂಸ್ಕೃತಿಯಿಂದ ನೆಲಗಟ್ಟಿನ ನಿಮಾಣ ಆಗಿದೆ ಎಂದರೆ ಅದು ಭಾರತ ದೇಶ, ನಮ್ಮ ದೇಶ ಹಲವಾರು ಧರ್ಮ, ಜಾತಿ, ಭಾಷೆಗಳಿಂದ ಕೂಡಿದ್ದು ಇಲ್ಲಿ ನಾವು ಎಲ್ಲಾರೂ ಒಂದೇ ಎಂಬ ಭಾವನೆಯಿಂದ ಬದುಕ ಬೇಕು ಎಲ್ಲಾರೂ ನಾವು ಭಾವೈಕತೆಯಿಂದ ಕೂಡಿ ಒಂದೇ ಭಾವನೆಯಿಂದ ಸಹೋದರ ಸಹೋದರಿಯರಂತೆ ಬದುಕ ಬೇಕು ಎಂದು ಹೇಳಿದ್ದರು. ಮೂಡಿಗೆರೆ ಜೇಸಿಯವರು ಇಂತಹ ಒಂದು ಒಳ್ಳೆಯ ಕಾರ್ಯಕ್ರಮವನ್ನು ನಮ್ಮ ಶಾಲೆಗೆ ಬಂದು ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತೆ ಪ್ರಮಾಣ ವಚನ ನೀಡವುದು ಖುಷಿ ತಂದಿರುತ್ತದೆ

ವರದಿ

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!