ಕೊಕಟನೂರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಪೋಲಿಯೊ ಕಾರ್ಯಕ್ರಮ #avintvcom

ಕೊಕಟನೂರ್: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಪೋಲಿಯೊ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳೊಂದಿಗೆ ಮಕ್ಕಳಿಗೆ ಪೋಲಿಯೊ ಹಾಕುವುದರ ಮೂಲಕ ಸಂತಸಪಟ್ಟರು.
ಪೋಲಿಯೊ ಮುಕ್ತ ಭಾರತದ ಕನಸು ಸಾಕಾರಗೊಳಲ್ಲಿ ಎಂಬ ಮನಸ್ಥಿತಿಯ ಭಾರತೀಯರು ಈ ಪೋಲಿಯೊ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಮತ್ತೆ ಪ್ರತಿಯೊಬ್ಬ ಮಗುವು ಈ ದೇಶದ ಜವಾಬ್ದಾರಿಯುತ ವೈಕ್ತಿಯಾಗಲು ಅವರನ್ನು ಸದೃಢರನ್ನಾಗಿಸಬೇಕಾದಂತ ಜವಾಬ್ದಾರಿ ಪಫಾತಿಯೊಬ್ಬ ಪಾಲಕರು ಮಾಡುವಂತ ಕಾರ್ಯಕ್ರಮ ಇದಾಗಿದೆ.
ಬಲಿಷ್ಠತೆಯ ವೈಕ್ತಿತ್ವ ನಿರ್ಮಾಣಕ್ಕೆ ದೇಹದ ಅಗತ್ಯ ಮತ್ತು ಬೌದ್ಧಿಕ,ಮಾನಸಿಕ ಸಾಮರ್ಥ್ಯ ಬಹಳ ಅವಶ್ಯಕವಾದದ್ದು.
ಈ ಹಿಂದೊಮ್ಮೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕಲ್ಲಿ ಭಾರತ ಪೋಲಿಯೊ ಮುಕ್ತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಮುಂದೆ ಅದೇ ರೀತಿ ಪೋಲಿಯೊ ಮುಕ್ತ ಭಾರತ ಆಗಬೇಕು ಅಂತ ನಮ್ಮ ಎಲ್ಲರ ಕನಸಾಗಿದೆ.
ದಯವಿಟ್ಟು ಎಲ್ಲ ಪಾಲಕರು ತಮ್ಮ ಕೆಲಸವನ್ನು ಸ್ವಲ್ಪ ಬದಿಯಲಿಟ್ಟು ನಿಮ್ಮ ಮಕ್ಕಳಿಗೆ ಪೋಲಿಯೊ ಹಾಕಿಸಿ, ಮತ್ತು ಆದಷ್ಟು ಇತರ ಮಕ್ಕಳಿಗೂ ಅದರ ಸದುಪಯೋಗವನ್ನು ಕೊಡಿಸುವಂತ ನಾಗರಿಕರಾಗಿ ಎಂದು ನನ್ನ ವೈಯಕ್ತಿಕ ವಿಚಾರದೊಂದಿಗೆ ತಮ್ಮಲ್ಲಿ ವಿನಂತಿಸಿಕೊಳ್ಳುವೆ.