AVIN TV

Latest Online Breaking News

ತೆಲುಗು ಚಲನಚಿತ್ರೋದ್ಯಮ ಕಡೆಗೆ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ #avintvcom

Featured Video Play Icon

ತೆಲುಗು ಚಲನಚಿತ್ರೋದ್ಯಮ ಕಡೆಗೆ  ಸ್ಯಾಂಡಲ್ವುಡ್  ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಕೋಪಗೊಂಡಿದ್ದಾರೆ ನಿಮಗೆ ನಿಜವಾದ ಕಾರಣ ತಿಳಿದಿದೆಯೇ

ತೆಲುಗು ಚಿತ್ರರಂಗ ಮಾಡುತ್ತಿರುವ ವಂಚನೆಗೆ ದರ್ಶನ್ ಗರಂ ಕನ್ನಡದ ಅನೇಕ ಸಿನಿಮಾಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಕಾಯುತ್ತಿವೆ. ದರ್ಶನ್ ಅಭಿನಯದ ರಾಬರ್ಟ್ ಕೂಡ ಮಾರ್ಚ್ ೧೧ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಅಂದು ತೆಲುಗಿನ ಎರಡು ಸಿನಿಮಾಗಳು ಕನ್ನಡನಾಡಲ್ಲಿ ಬಿಡುಗಡೆ ಆಗಲಿದೆ. ಹೀಗಿರುವಾಗ ಟಿಎಫ್ಐ ಧಿಢೀರನೇ ತಂದಿರುವ ಈ ನೀತಿ ದರ್ಶನ್ ಕೆಂಗಣ್ಣಿಗೆ ಗುರಿಯಾಗಿದೆ. ತೆಲುಗು ಸಿನಿಮಾಗಳು ಇಲ್ಲಿ ಸಲೀಸಾಗಿ ತೆರೆ ಕಾಣಬೇಕು ಆದರೆ ನಮ್ಮ ಡಬ್ ಆದ ಸಿನಿಮಾ ಕೂಡ ಅಲ್ಲಿ ಬರಬಾರದು ಅಂದ್ರೆ ಹೇಗೆ. ಈ ಕಾರಣಕ್ಕಾಗಿ ದರ್ಶನ್ ಫಿಲ್ಮ್ ಚೇಂಬರ್‌ಗೆ ಇಂದು ದೂರು ನೀಡಲಿದ್ದಾರಂತೆ.

ತೆಲುಗು ಚಿತ್ರರಂಗ ಒಂದು ಹೊಸ ನೀತಿ ಜಾರಿ ಮಾಡಿದ್ದು, ಅದು ತೆಲುಗಿಗೆ ಡಬ್ ಆದ ಕನ್ನಡ ಸಿನಿಮಾದ ಬಿಡುಗಡೆಗೆ ತೊಡಕಾಗಿದೆ. ಅದೇನೆಂದರೆ, ಯಾವುದಾದರೂ ತೆಲುಗು ಸಿನಿಮಾ ಬಿಡುಗಡೆ ಆಗುವ ದಿನ ಪರಭಾಷೆಯಿಂದ ಡಬ್ ಆದ ಯಾವುದೇ ತೆಲುಗು ಸಿನಿಮಾನೂ ಆ ದಿನವೇ ಬಿಡುಗಡೆ ಆಗಬಾರದಂತೆ.ಅಂಥ ನೀತಿಯನ್ನು ಟಿಎಫ್ಐ ಜಾರಿ ಮಾಡಿದೆ. ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಲು ಕಾರಣವಾಗಿದೆ. ಟಿಎಫ್ಐನ ಈ ನೀತಿ ನಮ್ಮನ್ನು ಕೆಣಕುವಂತಿದೆ.ಪ್ರತಿ ವಾರ ಯಾವುದಾದರೂ ತೆಲುಗು ಸಿನಿಮಾ ಬಿಡುಗಡೆ ಇದ್ದೇ ಇರುತ್ತದೆ. ಹೀಗಿರುವಾಗ ನಮ್ಮ ಭಾಷೆಯಿಂದ ತೆಲುಗಿಗೆ ಡಬ್ ಆದ ಸಿನಿಮಾಗಳು ಕೂಡ ಅಲ್ಲಿ ಬಿಡುಗಡೆ ಆಗೋಕೆ ಬಿಡಲ್ಲ ಅಂದರೆ ಏನರ್ಥ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!