AVIN TV

Latest Online Breaking News

ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. #avintvcom

ಬೋರಗಾಂವ

“ಗುಣಮಟ್ಟದ ಶಿಕ್ಷಣಕ್ಕೆ ಮೂಲಸೌಕರ್ಯ ಅಭಿವೃದ್ಧಿಯೂ ಅತಿ ಮುಖ್ಯ”

ನಿಪ್ಪಾಣಿಯ ಬೋರಗಾಂವದದಲ್ಲಿ, ಸರ್ಕಾರಿ ಪದವಿಪೂರ್ವ ಕಾಲೇಜಿಗೆ, ಸರ್ಕಾರದ ವತಿಯಿಂದ ಮಂಜೂರಾದ 55 ಲಕ್ಷ ರೂ. ಅನುದಾನದಲ್ಲಿ 2 ಕೊಠಡಿ ಹಾಗೂ 2 ಶೌಚಾಲಯ ನಿರ್ಮಾಣ ಕಾಮಗಾರಿಗೆ ಭವ್ಯ ಭಾರತದ ಸತ್ಪ್ರಜೆಗಳಾಗುವ ವಿದ್ಯಾರ್ಥಿಗಳ ಜೊತೆಗೂಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಅವಿಭಾಜ್ಯ ಅಂಗ. ಸಂಸ್ಕಾರಯುತ ಶಿಕ್ಷಣವನ್ನು ಪಡೆದಾಗ ಮಾತ್ರ ಪ್ರತಿಯೊಬ್ಬರು ಜೀವನದ ಸುಗಮ ಹಾದಿಯಲ್ಲಿ ನಡೆಯಲು ಸಾಧ್ಯ. ಹೀಗಾಗಿ ಶಿಕ್ಷಣ ಕ್ಷೇತ್ರದ ಏಳಿಗೆಗೂ ಕೂಡ ಮಹತ್ವ ನೀಡುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ. ಯಾವೊಬ್ಬ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ ಸರ್ಕಾರಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

बोरगांव

गुणवत्तेच्या शिक्षणासाठी पायाभूत सुविधांचा विकास होणे खूप महत्वाचा आहे ”

निपाणीचे बोरगांव येथे सरकारी पदवीपूर्व महाविद्यालयासाठी सरकारमार्फत मंजूर झालेल्या 55 लाख रुपये अनुदानामध्ये 2 खोल्या व 2 शौचालय बांधण्याच्या कामाला भारताचे भविष्य घडविणाऱ्या विद्यार्थ्यांच्या सोबत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भूमिपूजन करून कामाला चालना दिले.

शिक्षण हा प्रत्येक विद्यार्थ्याचा अविभाज्य भाग आहे.सुसंस्कृत शिक्षण घेतल्यावरच प्रत्येकजण जीवनाच्या सरळ मार्गावर चालणे शक्य आहे.म्हणूनच शिक्षण क्षेत्राच्या विकासावर भर दिला असून,विद्यार्थ्यांच्या शिक्षणाला पूरक पायाभूत सुविधा उपलब्ध करून देत आहोत.कोणताही विद्यार्थी शिक्षणापासून वंचित होऊ नये म्हणून सरकारी शाळा-महाविद्यालये विकसित करत असून, शिक्षण क्षेत्राचा सर्वांगीण विकास आमचे ध्येय आहे असे सांगीतले.

यावेळी महाविद्यालय मंडळाचे सदस्य, व्याख्याते व ग्रामस्थ उपस्थित होते.

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!