AVIN TV

Latest Online Breaking News

ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡುತ್ತಾ ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿ ಅಭೂತಪೂರ್ವ ಸಾಧನೆ #avintvcom

Featured Video Play Icon

 

ಹೆಣ್ಮಕ್ಕಳೇ ಸ್ಟ್ರಾಂಗ್ -ಮಗ್ಗಲಮಕ್ಕಿ ಗಣೇಶ್

ಗ್ರಾಮ ಪಂಚಾಯತ್ ನಿಡುವಾಳೆ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ ಸಹಯೋಗದಲ್ಲಿ  ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಇ ಕಾರ್ಯಕ್ರಮದಲ್ಲಿ

6 ರಿಂದ 18 ವಯೋಮಾನದ ನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳು  ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಕು|| ಸುಪ್ರಿತ ವಹಿಸಿದ್ದರು.

ಮುಖ್ಯ ಅಥಿತಿಯಾಗಿ ಕು||ಸಂಭ್ರಮ ಭಾಗವಹಿಸಿದ್ದರು.

ಭಾರತ ಸ್ಕೌಟ್ ಮತ್ತು ಗೈಡ್ಸ್  ಮೂಡಿಗೆರೆ ತಾಲೂಕ್ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡುತ್ತಾ ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿದ್ದಾರೆ.ರಾಜಕೀಯ,ಕ್ರೀಡೆ,ಪತ್ರಿಕೋದ್ಯಮ,ಶಿಕ್ಷಣ,ಉದ್ಯಮ,ಸಿನಿಮಾ,ಕೈಗಾರಿಕೆಗಳಲ್ಲಿ ಯಶಸ್ಸಿನೆಡೆಗೆ ದಾಪುಗಾಲು ಹಾಕಿದ್ದಾರೆ.ಕಾರ್ಯದಲ್ಲಿ ತತ್ಪರತೆ ಹೊಂದಿದ ಇವರು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಸ್ಟ್ರಾಂಗ್ ಎಂದರು. ನಿಡುವಾಳೆ ಶಾಲೆ ಮುಖ್ಯ ಶಿಕ್ಷಕರಾದ ಪೂರ್ಣೇಶ್ ಹೆಣ್ಣು ಮಕ್ಕಳಿಗೆ ಅವಕಾಶ ಹಾಗೂ ಬೆಂಬಲ ನೀಡಿದಾಗ ತಮ್ಮ ಸ್ವತಂತ್ರ ಬದುಕು ಹಸನಾಗಿಸಿಕೊಳ್ಳುವುದರೊಂದಿಗೆ ಇತರರಿಗೂ ಮಾದರಿಯಾಗುತ್ತಾರೆಂದರು.

ಗೈಡ್ ಕ್ಯಾಪ್ಟನ್  ಆತ್ಮೀಯ ವಿದ್ಯಾರ್ಥಿಗಳು ಪಠ್ಯದೊಂದಿಗೆ ವಿವಿಧ ಹವ್ಯಾಸಗಳು ಹಾಗೂ ಸಮಾಜಮುಖಿ ಕೆಲಸದಲ್ಲಿ ಪಾಲ್ಗೊಂಡು ಸಮಯದ ಸದುಪಯೋಗ ಪಡಿಸಿಕೊಳ್ಳಲು ಪ್ರೇರೇಪಿಸಿದರು.

ಇದರ ಪ್ರಯುಕ್ತ

ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಾಯನ,ರಂಗೋಲಿ,ಪ್ರಬಂಧ ಸ್ಪರ್ಧೆ ನಡೆಸಲಾಯಿತು. ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಾವತಿಯವರು ಪೋಷಕರ ಅಶೋತ್ತರಗಳಿಗೆ ಸ್ಪಂದಿಸುತ್ತಾ ನೆರೆಹೊರೆಯವರ ಮನಗೆಲ್ಲುತ್ತಾ ಆತ್ಮವಿಶ್ವಾಸ ಗಳಿಸಿಕೊಂಡರೆ ಸಾಧನೆ ಎಲ್ಲರ ಸ್ವತ್ತಾಗಲಿದೆ ಎಂದರು.

ಭಾಗವಹಿಸುವ  ಹೆಣ್ಣು ಮಕ್ಕಳಿಗೆ ಅಕ್ಷರಮಿತ್ರ ಗೆಳೆಯರ ಬಳಗ ವತಿಯಿಂದ ಲೇಖನ ಸಾಮಗ್ರಿ,ಪರೀಕ್ಷಾ ರಟ್ಟನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸಚಿನ್,ರವಿ,ಶೃತಿ,ಲಕ್ಷ್ಮಿ,ಗುಲಾಬಿ,ಗುರುರಾಜ್,ಸೋಮಶೇಖರ್,ಚೇತನ್ ಇದ್ದರು. ಪಿಡಿಒ ಚಂದ್ರಾವತಿಯವರು ಸ್ವಾಗತಿಸಿ,

ಅಂಗನವಾಡಿ ಶಿಕ್ಷಕಿ ವನಜಾಕ್ಷಿ ನಿರೂಪಿಸಿದ ಕಾರ್ಯಕ್ರಮದಲ್ಲಿ,ಉದಯ್ ಧನ್ಯವಾದಗೈದರು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್

.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!