ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದಲ್ಲೇ ಮತದಾನದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವಿರಬೇಕು #avintvcom

ಬಣಕಲ್ ಪ್ರೌಢಶಾಲೆಯಲ್ಲಿ ಮತದಾನದ ಮಹತ್ವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದಲ್ಲೇ ಮತದಾನದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವಿರಬೇಕು ಎಂದು ಬಣಕಲ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ.ವಾಸುದೇವ್ ಹೇಳಿದರು. ಬಣಕಲ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ನಡೆದ ಪ್ರತಿಜ್ಷಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರೌಢಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಮತದಾನದ ಬಗ್ಗೆ ತಿಳಿಯುವ ಅಗತ್ಯವಿದೆ. ಪ್ರಜಾಪ್ರಭುತ್ವದ ಅರಿವು ಶಾಲಾ ಮಟ್ಟದಿಂದಲೇ ಅರಿತರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೇಶ ಕಟ್ಟಲು ಸಹಾಯಕವಾಗುತ್ತದೆ ಎಂದರು. ಶಿಕ್ಷಕರಾದ ಎ.ಎನ್.ಪ್ರತೀಕ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಅಕ್ರಂ ಪಾಶಾ, ಡಿ.ಎನ್.ಪ್ರವೀಣ್, ಉಮಾಮಹೇಶ್, ಶಿಕ್ಷಕಿಯರಾದ ಬೋರಕ್ಕ, ಗಾನವಿ, ಮುಭಾಶಿರ, ಸುಪ್ರೀಯ ಡಿ’ಕುನ್ನ, ವಲ್ಸಮ್ಮ ಪೌಲ್ಸನ್, ಚೈತ್ರಾರೋಹಿತ್ ಇದ್ದರು.