AVIN TV

Latest Online Breaking News

ಜೀವನದಿ ಹೇಮಾವತಿ ಯ ಉಗಮ ಸ್ಥಾನವಾದ ಜಾವಳಿಯ ಸಮಗ್ರ ಕಾಯಕಲ್ಪಕ್ಕೆ ಇಂದು ಪೂರ್ವಭಾವಿ ಸಭೆ.#avintvcom

Featured Video Play Icon

ಹೇಮಾವತಿ ಉಗಮ ಹಿತರಕ್ಷಣಾ ಸಮಿತಿಯ ಸಭೆ. ಕಾವೇರಿ ನದಿಯ ಉಪನದಿಯೆoದೇ ಗುರುತಿಸಿಕೊಂಡಿರುವ ಮಲೆನಾಡು ಹಾಗೂ ಬಯಲು ಸೀಮೆ ಜಿಲ್ಲೆಗಳ ಜೀವನದಿ ಹೇಮಾವತಿ ಯ ಉಗಮ ಸ್ಥಾನವಾದ ಜಾವಳಿಯ ಸಮಗ್ರ ಕಾಯಕಲ್ಪಕ್ಕೆ ಇಂದು ಪೂರ್ವಭಾವಿ ಸಭೆ. ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಪ್ರಮುಖ ಜೀವ ದಾಯಿನಿ ಹೇಮಾವತಿ ನದಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಮಾನ್ಯತೆ / ಮನ್ನಣೆ ಈವರೆಗೆ ದೊರೆಯದಿರುವ ಹಿನ್ನೆಲೆಯಲ್ಲಿ ಈ ಮೇಲ್ಕoಡ ಜಿಲ್ಲೆಗಳ ಸಮಸ್ತ ಜನ ಸಮುದಾಯದಲ್ಲಿ ಈ ಕುರಿತು ಜಾಗೃತಿ ಹಾಗೂ ತನ್ಮೂಲಕ ಹೇಮೆಯ ಉಗಮ ಸ್ಥಾನದ ಅಭಿವೃದ್ಧಿಗೆ ಇಂದು ಚಾಲನೆ. ಕಾವೇರಿ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಹೇಮಾವತಿ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಜನ ಜಾಗೃತಿ ಹಾಗೂ ಆಂದೋಲನಕ್ಕಾಗಿ ತೀರ್ಮಾನ. ಮೂಡಿಗೆರೆ ತಾ. ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರು ಬಾಲಕೃಷ್ಣರವರ ಅಧ್ಯಕ್ಷತೆ, ಹಿರಿಯ ಬೆಳೆಗಾರರು ಹಾಗೂ ನೇತಾರರಾದ ಡಿ.ಬಿ.ಸುಬ್ಬೇಗೌಡರ ಮಾರ್ಗದರ್ಶನ ಹಾಗೂ ಕನಾ೯ಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಬಿ.ಎಸ್. ಜಯರಾಂ ರವರ ಸಹಕಾರದಿಂದ ಇಂದು ಸಮಾನ ಮನಸ್ಕರ ಸಭೆ. ಉಪನ್ಯಾಸಕರಾದ ಎಂ.ಎಸ್. ಅಶೋಕ ನಾಗರಸೀಮೆ ಯವರ ಸಂಶೋಧನಾ ಧಾರಿತ “ಹೇಮಧಾರೆ ” ಕೈಪಿಡಿ ಬಿಡುಗಡೆ. ಕೆ.ಆರ್ ಪೇಟೆ ತಾಲೂಕಿನ ಹೇಮಾವತಿ ನದಿ ಅವಲಂಬಿತ ಮುಖಂಡರಾದ ಶ್ರೀ ಸುಬ್ಬೇಗೌಡರು ಹಾಗೂ ಕೃಷ್ಣೆಗೌಡರಿಂದ ಈ ಕಾರ್ಯಕ್ಕೆ ತಮ್ಮ ಭಾಗದ ಸಮಗ್ರ ಜನ ಸಮುದಾಯದ ಬೆಂಬಲದ ಭರವಸೆ. ಶಶಿಧರ್ ರವರ ಅಚ್ಚುಕಟ್ಟಾದ ನಿರೂಪಣೆ ಹಾಗೂ ಜಾವಳಿ ಗಣಪತಿ ದೇವಸ್ಥಾನ ಮ೦ಡಳಿಯ ಪ್ರಧಾನ ಕಾಯ೯ದರ್ಶಿ ಎಮ್.ಯು.ಜಗದೀಶ್ ರವರ ಆಶಯ ಭಾಷಣದೊಂದಿಗೆ ಮುಂದಿನ ಕಾರ್ಯಕ್ರಮಗಳ ಯಶಸ್ವಿ ಅನುಷ್ಟಾನಕ್ಕಾಗಿ ಸಮಿತಿ / ಟ್ರಸ್ಟ್ ಗಳನ್ನು ಹುಟ್ಟು ಹಾಕಲು ಪ್ರಾರಂಭಿಕ ಚಿಂತನಾ ಸಭೆಯನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಸ್ಥಳೀಯ ಜನತೆಯ ಜೊತೆಗೆ , ಹೇಮಾವತಿ ಹರಿವಿನ ಪ್ರದೇಶದ ಎಲ್ಲ ಫಲಾನುಭವಿಗಳ, ಜನಪ್ರತಿನಿಧಿಗಳ, ಸಮಾನ ಮನಸ್ಕರ’ ಹಾಗೂ ಚಿಂತಕರನ್ನೊಳಗೊಂಡ ಜಾಗೃತಿ ಆಂದೋಲನವನ್ನು ಪ್ರಾರಂಭಿಸಲು ನೆರೆದಿದ್ದ ಸಭಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

January 2022
M T W T F S S
 12
3456789
10111213141516
17181920212223
24252627282930
31  
error: Content is protected !!